Advertisement
ಸುರತ್ಕಲ್‌ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆಡಳಿತಾವಧಿಯಲ್ಲಿ ಜನಹಿತವನ್ನು ನಿರ್ಲಕ್ಷಿಸಿದ ಇಂತಹ ಲಜ್ಜೆಗೇಡಿ ಕಾಂಗ್ರೆಸ್ ಸರಕಾರವನ್ನು ಕಿತ್ತೂಗೆದು ಬಿಜೆಪಿ ಅಧಿಕಾರಕ್ಕೇರುವುದು ನಿಶ್ಚಿತ. ಮಂಗಳೂರುಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸರಕಾರದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಅನುದಾನದಿಂದ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಕೇಂದ್ರ ಸರಕಾರದ ಯೋಜನೆಗಳಿಗೆ ಕಾಂಗ್ರೆಸ್‌ನ ಸ್ಥಳೀಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು ತನ್ನ ಲೇಬಲ್ ಅಂಟಿಸಿ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಟೀಕಿಸಿದರು.
ಸಮಾಜದ ಇತರ ಸಮುದಾಯದಲ್ಲೂ ಆತಂಕ ವ್ಯಕ್ತವಾಗಿದೆ. ಒಡೆದು ಆಳುವ ನೀತಿಗೆ ತಿಲಾಂಜಲಿ ನೀಡುವ ಸಮಯ ಬಂದಿದೆ . ಒಂದೆಡೆ ಜಾತಿ ರಾಜಕೀಯ ಮಾಡುತ್ತಿದ್ದರೆ ಇತರ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿವೆ. ಮೊಗವೀರ ಸಮುದಾಯಕ್ಕೆ ಸ್ವ ಉದ್ಯೋಗ ಮಾಡುವಲ್ಲಿಯೂ ನಾಡದೋಣಿ ಮೀನುಗಾರರಿಗೆ ಕೊಡುವ ಸಬ್ಸಿಡಿ ದರದ ಸೀಮೆಎಣ್ಣೆಯನ್ನು ಮೂರು ತಿಂಗಳು ಸ್ಥಗಿತಗೊಳಿಸಿ ಮೀನುಗಾರರಿಗೂ ಸಮಸ್ಯೆ ಒಡ್ಡಿತ್ತು. ಮೀನುಗಾರಿಕಾ ಇಲಾಖಾ ಸಚಿವ ಪ್ರಮೋದ್ ಮಧ್ವರಾಜ್ ರಾಜ್ಯದ ವೈಫಲ್ಯವನ್ನು ಮರೆ ಮಾಚಿ ಇದು ಕೇಂದ್ರ ಸರಕಾರದ ವೈಫಲ್ಯ ಎಂದು ಕೇಂದ್ರ ಸರಕಾರದ ಕಡೆ ಬೊಟ್ಟು ಮಾಡಿದ್ದರು.ಆದರೆ ಬಿಜೆಪಿ ಸರಕಾರ ಇರುವಾಗ ತಿಂಗಳಿಗೆ 200 ಲೀಟರಿಗಿಂತ ಮೇಲೆ ತಿಂಗಳಿಗೆ ಸರಿಯಾಗಿ ಸೀಮೆಎಣ್ಣೆ ವಿತರಿಸುತ್ತಿತ್ತು. ಈ ಬಗ್ಗೆ ಯಾವ ಗೊಂದಲವೂ ಇರಲಿಲ್ಲ. ಇದೀಗ ಇದನ್ನೇ ನಂಬಿದ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಸಿಗದೆ ಕಡಲಿಗಿಳಿಯದ ಎಷ್ಟೋ
ನಾಡದೋಣಿಗಳಿವೆ. ಜನರ ಸಮಸ್ಯೆಗೆ ಸ್ಪಂದಿಸದ ಸರಕಾರ ನಮಗೆ ಬೇಕೇ ಎಂಬುದನ್ನು ಜನತೆ ತೀರ್ಮಾನಿಸಬೇಕು ಎಂದರು.
Related Articles
ಬಿಜೆಪಿಯಲ್ಲಿ ಕಾರ್ಯಕರ್ತರು ಅತ್ಯುತ್ಸಾಹದಿಂದ ಕೆಲಸ ಮಡುತ್ತಿದ್ದಾರೆ. ಈಗಾಗಲೇ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಭೇಟಿ, ಪ್ರಚಾರ ಕಾರ್ಯ ನಡೆಯುತ್ತಿದ್ದು ಇನ್ನು ಶಕ್ತಿ ಕೇಂದ್ರ ಮಟ್ಟದ ಸಮಾವೇಶಗಳು ಜರಗಲಿವೆ. ಮನೆ ಮನೆಗೆ ತೆರಳುತ್ತಿರುವ ಬಿಜೆಪಿ ಕಾರ್ಯಕರ್ತರಿಗೆ ಜನರಿಂದ ಸ್ವಾಗತ ಲಭಿಸುತ್ತಿದೆ. ಕಾಂಗ್ರೆಸ್ ಪಕ್ಷವು ಬಿಜೆಪಿಯ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಆಗುಹೋಗುಗಳ ಬಗ್ಗೆ ನೀಡುತ್ತಿರುವ ತಪ್ಪು ಸಂದೇಶವನ್ನು ಯಾರೂ ನಂಬುತ್ತಿಲ್ಲ ಎಂದರು. ಈ ಸಂದರ್ಭ ವಿಠಲ ಸಾಲ್ಯಾನ್, ಉಮೇಶ್ ದೇವಾಡಿಗ , ರಾಘವೇಂದ್ರ ಶೆಣೆ„, ಜಯಂತ್ ಸಾಲ್ಯಾನ್, ನಯನಾ ಕೋಟ್ಯಾನ್, ಶಶಿಧರ ಕೋಡಿಕೆರೆ, ಮತ್ತಿತರರು ಉಪಸ್ಥಿತರಿದ್ದರು.
Advertisement