ಜಗಳೂರು: ರಾಜ್ಯ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ರೈತರಿಗೆ ಇನ್ನಿಲ್ಲದ ಹೊರೆ ಹೇರುತ್ತಿದೆ ಎಂದು ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಆರೋಪಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಈಗಾಗಲೇ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಸ್ಪಂದಿಸಿಲ್ಲ. ಇದೇ ತಿಂಗಳ 20 ರಂದು ರೈತ ಸಂಘದ ವತಿಯಿಂದ ಕಾರ್ಯಾಗಾರ ನೆಡೆಸಿ ಕೃಷಿ ಕಾಯ್ದೆಗಳ ಬಗ್ಗೆ ಗ್ರಾಮೀಣ ಭಾಗದ ರೈತರಿಗೆ ಕಾಯ್ದೆ ಸಾಧಕ-ಬಾಧಕಗಳ ಬಗ್ಗೆ ಅರಿವು ಮೂಡಿಸಿ ಪರಿಣಾಮಕಾರಿ ಹೋರಾಟಕ್ಕೆ ಸಜ್ಜುಗೊಳಿಸಲಾಗುವುದು.
ಇದನ್ನೂ ಓದಿ:ಬಂಡವಾಳ ಆಕರ್ಷಣೆಯಲ್ಲಿ ರಾಜ್ಯವೇ ನಂ.1
ನಂತರ ದೆಹಲಿಗೆ ತೆರಳಿ ಧರಣಿಗೆ ಎಬಂಬಲ ವ್ಯಕ್ತಪಡಿಸಲಿದ್ದೇವೆ ಎಂದರು. ಕೃಷಿ ಕಾಯ್ದೆಯಿಂದ ಕಾರ್ಪೋರೆಟ್ ಕಂಪನಿಗಳಿಗೆ ಲಾಭವಾಗುತ್ತಿದೆ. ರೈತರು ಮತ್ತು ದಲ್ಲಾಳಿಗಳು ಬೀದಿಪಾಲಾಗಿದ್ದು, ಆಹಾರ ಭದ್ರತೆಗೆ ಭವಿಷ್ಯದಲ್ಲಿ ಪೆಟ್ಟು ಬೀಳಲಿದೆ. ಗೋಹತ್ಯೆ ನಿಷೇಧಕ್ಕೆ ಕಠಿಣ ಕಾಯ್ದೆ ಮಾಡಲಾಗಿದೆ. ಆದರೆ ಕೃಷಿ ಉತ್ಪನ್ನ ಗಳಿಗೆ ಸಮರ್ಪಕ ಕಾಯ್ದೆಗಳಿಲ್ಲ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಂ. ಹೊಳೆ ಚಿರಂಜೀವಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸತೀಶ್ ಗೌಡಗೊಂಡನಹಳ್ಳಿ, ರಾಜು ದೊಣ್ಣಿಹಳ್ಳಿ, ಮಂಜಣ್ಣ, ಮಾರಪ್ಪ, ಸಿದ್ದಮ್ಮನಹಳ್ಳಿ ಶಿವರಾಜ್ ಇತರರು ಇದ್ದರು.