Advertisement
ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ದಿನಾಂಕಗಳನ್ನು ಪ್ರಕಟಿಸಿದ್ದಾರೆ.
Related Articles
Advertisement
ಯಾವುದೇ ರೋಡ್ ಶೋ,ಪಾದಯಾತ್ರೆ, ಸೈಕಲ್, ಬೈಕ್ ಮೆರವಣಿಗೆಗೆ ಅವಕಾಶವಿಲ್ಲ.
ಡಿಜಿಟಲ್ ಪ್ರಚಾರಕ್ಕೆ ಒತ್ತು ನೀಡಬೇಕು ಎಂದು ಆಯುಕ್ತರು ಸೂಚನೆ ನೀಡಿದ್ದಾರೆ. 5 ಜನರಿಗೆ ಮಾತ್ರ ಮನೆ ಮನೆ ಪ್ರಚಾರಕ್ಕೆ ಅವಕಾಶ ನೀಡಲಾಗಿದೆ.
ಆನ್ಲೈನ್ ನಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ , ಕೋವಿಡ್ ಹಿನ್ನಲೆಯಲ್ಲಿ ಆನ್ಲೈನ್ ನಲ್ಲಿ ನಾಮ ಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ.
ಕ್ರಿಮಿನಲ್ ಕೇಸ್ ಗಳಿದ್ದರೆ ಸಾರ್ವಜನಿಕ ಪ್ರಕಟಣೆ ಮಾಡಲೇ ಬೇಕು, ಕಾರಣಗಳನ್ನು ಕೊಟ್ಟು ಪ್ರಕಟಿಸಬೇಕು. ಪಕ್ಷಗಳೂ ಕ್ರಿಮಿನಲ್ ಕೇಸ್ ಹೊಂದಿರುವ ಅಭ್ಯರ್ಥಿಯ ಬಗ್ಗೆ ವೆಬ್ ಸೈಟ್ ಮುಖಪುಟಗಳಲ್ಲಿ ಘೋಷಿಸಬೇಕು.
ಬೂತ್ ನಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ.
ಮಾಧ್ಯಮಗಳು ಯಾವಾಗಲೂ ಆಯೋಗಕ್ಕೆ ಸಹಕಾರಿಯಾಗಿದ್ದು, ಮಾಧ್ಯಮಗಳು ನಮ್ಮ ಸ್ನೇಹಿತರು. ಸಾಮಾಜಿಕ ತಾಣಗಳು ಈಗ ಸಹಕಾರಿಯಾಗಿದೆ ಎಂದರು.
ಸಂಪೂರ್ಣ ಲಸಿಕಾಕರಣಕ್ಕೆ ಒತ್ತು
ಜನವರಿ 07 2022 ರ ಅಂಕಿ ಅಂಶಗಳ ಪ್ರಕಾರ ಈಗಾಗಲೇ ಗೋವಾದಲ್ಲಿ 95 % ಮತದಾರರು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ,ಉತ್ತರಾಖಂಡದಲ್ಲಿ 99.6% ಮೊದಲ ಡೋಸ್ , 83% ಎರಡನೇ ಡೋಸ್ , ಉತ್ತರಪ್ರದೇಶದಲ್ಲಿ ಮೊದಲ ಡೋಸ್ 90%,ಎರಡನೇ ಡೋಸ್ 52%, ಪಂಜಾಬ್ ನಲ್ಲಿ ಮೊದಲ ಡೋಸ್ 82% 46 % ಮಣಿಪುರದಲ್ಲಿ ಮೊದಲ ಡೋಸ್ 57 % ಎರಡನೇ ಡೋಸ್ 43 % ಜನರು ಎರಡನೇ ಡೋಸ್ ಪಡೆದಿದ್ದಾರೆ.
ಪಂಚ ರಾಜ್ಯಗಳ ಚುನಾವಣಾ ವೇಳಾ ಪಟ್ಟಿ
ಮೊದಲ ಹಂತ : ಯುಪಿ – 10 ಫೆಬ್ರವರಿ
ಎರಡನೇ ಹಂತ : ಯುಪಿ,ಪಂಜಾಬ್, ಉತ್ತರಾಖಂಡ, ಗೋವಾ – 14 ಫೆಬ್ರವರಿ
ಮೂರನೇ ಹಂತ : ಯುಪಿ – 20 ಫೆಬ್ರವರಿ
ನಾಲ್ಕನೇ ಹಂತ: ಯುಪಿ – 23 ಫೆಬ್ರವರಿ
ಐದನೇ ಹಂತ: ಯುಪಿ, ಮಣಿಪುರ – 27 ಫೆಬ್ರವರಿ
ಆರನೇ ಹಂತ : ಯುಪಿ, ಮಣಿಪುರ – 3 ಮಾರ್ಚ್
ಏಳನೇ ಹಂತ : ಯುಪಿ – 7 ಮಾರ್ಚ್