Advertisement
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾನುಪ್ರಕಾಶ್ ಮಂಡಲ, ಜಿಲ್ಲೆ ಹಾಗೂ ರಾಜ್ಯ ಸಮಿತಿ ಸಂಚಾಲಕ, ಸಹ-ಸಂಚಾಲಕರು, ಜಿಲ್ಲಾ ಸಂಯೋಜಕರು, ಸಂಕುಲ ಪ್ರಮುಖರು ಇದಕ್ಕೆ ಅಪೇಕ್ಷಿತರು. 16 ಸಾವಿರದಿಂದ 18 ಸಾವಿರ ಜನರನ್ನು ಆಹ್ವಾನಿಸಲಾಗಿದೆ. 15ರಿಂದ 16 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
Related Articles
Advertisement
ಬಿಜೆಪಿ ಆರಂಭದ ದಿನದ ಜನಸಂಘ ಒಂದು ರಾಜಕೀಯ ಪಕ್ಷ ಹಾಗೂ ಒಂದೇ ವಿಚಾರಧಾರೆಯ ಯಾತ್ರೆ ಸಾಗಿ ಬಂದಿದೆ. ಅದೆಂದರೆ, ವಿಶ್ವದ ಅಗ್ರಗಣ್ಯ ರಾಷ್ಟ್ರವನ್ನಾಗಿ ಮಾಡುವುದು. ತನ್ನ ಗುರಿ ಸಾಧನೆಗಾಗಿ ವೈಶಿಷ್ಟ್ಯ ಪೂರ್ಣವಾದ ಕಾರ್ಯಪದ್ಧತಿಯನ್ನು ಸಂಘಟನೆಯಲ್ಲಿ ಅಳವಡಿಸಿಕೊಂಡು, ಕಾರ್ಯಕರ್ತರ ನಿರ್ಮಾಣ ಮಾಡುತ್ತಾ ಬಂದಿದೆ. ಇದೊಂದು ಯಶಸ್ವೀ ಕಾರ್ಯ ಪದ್ಧತಿಯೆಂದು ಸಾಬೀತಾಗಿದೆ ಹಾಗೂ ಪರಿಗಣಿಸಲ್ಪಟ್ಟಿದೆ ಎಂದರು.
ಯಶಸ್ಸಿಗಾಗಿ ವ್ಯವಸ್ಥೆಯ ತಂಡ ರಚನೆ
ಇದರ ಯಶಸ್ಸಿಗಾಗಿ ವ್ಯವಸ್ಥೆಯ ತಂಡವನ್ನು ರಚಿಸಿಕೊಂಡು ವಿಭಾಗ ಪ್ರಭಾರಿ, ವಿಧಾನ ಪರಿಷತ್ತಿನ ಸದಸ್ಯ ಗೋಪಿನಾಥ ರೆಡ್ಡಿ, ಬೆಂಗಳೂರು ಕೇಂದ್ರದ ಅಧ್ಯಕ್ಷ ಮಂಜುನಾಥ್, ವಿಭಾಗ ಸಂಘಟನಾ ಕಾರ್ಯದರ್ಶಿ ದಶರಥರವರ ಸಹಕಾರದಿಂದ ಕಾರ್ಯ ಮಾಡುತ್ತಿದ್ದೇವೆ. ರಾಜ್ಯ ಉಪಾಧ್ಯಕ್ಷ ನಿರ್ಮಲ್‍ಕುಮಾರ್ ಸುರಾಣ ಹಾಗೂ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ. ರಾಜೇಶ್‍ರವರ ಮಾರ್ಗದರ್ಶನದಲ್ಲಿ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ಪ್ರತಿ ಪ್ರಕೋಷ್ಠಗಳ ಹೆಸರಿಗೆ ತಕ್ಕಂತೆ, ತಮ್ಮದೇ ಕಾರ್ಯ ತಮ್ಮ ವ್ಯಾಪ್ತಿ, ಪ್ರಕೋಷ್ಠದ ಗುರಿ, ಗುರಿ ಸಾಧನೆಗಾಗಿ ಕಾರ್ಯ ಪದ್ಧತಿ, ಇದರಿಂದಾಗಿ ಕಾರ್ಯಕರ್ತನ ತಯಾರಿ ಮಾಡಿ ಸಮಾಜದ ವಿವಿಧ ರಂಗಗಳಲ್ಲಿರುವ ಸಮಾಜದ ಬಂಧುಗಳನ್ನು ತಲುಪುವ ವ್ಯವಸ್ಥೆ ಆಗಿ, ಯಶಸ್ಸು ಸಿಗುತ್ತಿದೆ ಎಂದು ತಿಳಿಸಿದರು.
ಪಕ್ಷದ 35 ಸಂಘಟನಾ ಜಿಲ್ಲೆಗಳಲ್ಲಿ ಈಗಾಗಲೇ ಸಮಾವೇಶಗಳನ್ನು ನಡೆಸಲಾಗಿದೆ. ಇದು ವೃತ್ತಿವಂತರ ಸಮಾವೇಶ ಎಂದು ತಿಳಿಸಿದರು. ಮೂಲ ವಿಚಾರ ಸಿದ್ಧಾಂತದಲ್ಲಿ ರಾಜೀಮಾಡಿಕೊಳ್ಳದೇ, ಸಮಯ, ಸಂದರ್ಭ, ಅವಶ್ಯಕತೆಗಳಿಗೆ ಅನುಗುಣವಾಗಿ, ವಿವಿಧ ಹಂತದ ಸಂಘಟನಾ ಸಮಿತಿಗಳು, ಮೋರ್ಚಾಗಳನ್ನು ಹಾಗೆಯೇ ಪ್ರಕೋಷ್ಠಗಳನ್ನು ರಚನೆ ಮಾಡಿ. ಸಮಾಜದ ಪ್ರತಿಯೊಬ್ಬರಿಗೂ, ತನ್ನ ಆಸಕ್ತಿ, ಅರ್ಹತೆ ಸಮಯಾವಕಾಶಕ್ಕೆ ತಕ್ಕಂತೆ ರಾಷ್ಟ್ರ ಕಾರ್ಯದಲ್ಲಿ ತಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಟ್ಟಿದೆ ಎಂದು ನುಡಿದರು.
ಈ ಮೊದಲು ಬೇರೆ ಬೇರೆ ರೀತಿಯ ಪ್ರಕೋಷ್ಠಗಳನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ರಚನೆ ಮಾಡಿಕೊಂಡು ಕಾರ್ಯ ನಡೆಯುತ್ತಿತ್ತು. ರಾಷ್ಟ್ರೀಯ ಸ್ತರದ ಚಿಂತನೆಯ ಫಲವಾಗಿ ಹಾಲು ಉತ್ಪಾದಕರು, ಹಿರಿಯ ನಾಗರಿಕರ ಪ್ರಕೋಷ್ಠಗಳು ಸೇರಿದಂತೆ 20 ಪ್ರಕೋಷ್ಠಗಳು, 4 ವಿಭಾಗಗಳು ಸೇರಿ 24 ಪ್ರಕೋಷ್ಠದಡಿಯಲ್ಲಿ ಕಾರ್ಯ ನಿರ್ವಹಿಸುವ ವ್ಯವಸ್ಥೆ ಫಲವೇ ಇಂದಿನ ಪ್ರಕೋಷ್ಠಗಳು. ಈ ವರೆಗೆ ರಚಿಸಿರುವ ಸಮಿತಿಗಳಲ್ಲಿ ಕಾರ್ಯಕರ್ತರನ್ನು ಗುರ್ತಿಸಿ ಪ್ರಕೋಷ್ಠಗಳಲ್ಲಿ ಸುಮಾರು 25 ಸಾವಿರ ಜನರನ್ನು ಜೋಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಸಂಘಟನಾತ್ಮಕವಾಗಿ ಕೆಲವು ಪ್ರಕೋಷ್ಠಗಳು ಮಂಡಲದವರೆಗೆ, ಕೆಲವು ಜಿಲ್ಲೆಯವರೆಗೆ ಸಮಿತಿ ರಚಿಸಿ, ಕಾರ್ಯಕರ್ತರನ್ನು ಜೋಡಿಸಿಕೊಂಡು ತಮ್ಮ ಪ್ರಕೋಷ್ಠದ ಪರಿವಾರವನ್ನು ಸಂಘಟಿಸುವುದರಲ್ಲಿ ಪ್ರಯತ್ನಿಸುತ್ತಿದ್ದಾರೆ. ನಿಯಮಿತ ಸಭೆಗಳು, ನಿರಂತರ ಚಟುವಟಿಕೆಗಳು, ಸೇವಾಕಾರ್ಯಗಳು, ಪ್ರಶಿಕ್ಷಣ ವರ್ಗಗಳು, ಜಿಲ್ಲಾ ಸ್ತರದ ಸಮಾವೇಶಗಳನ್ನು ಸಂಘಟಿಸುತ್ತಾ ಪ್ರಕೋಷ್ಠಗಳ ಕಾರ್ಯಕ್ಕೆ ಶಕ್ತಿ ತುಂಬಿದ್ದಾರೆ ಎಂದು ತಿಳಿಸಿದರು.