ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ರಾಜ್ಯ ಕಾಂಗ್ರೆಸ್ ನಾಯಕರ ಪ್ರಚಾರ ಸಮಿತಿಯನ್ನು
ನೇಮಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆದೇಶ ನೀಡಿದ್ದಾರೆ.
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಪ್ರಚಾರ ಸಮಿತಿ ರಚನೆ ಮಾಡಿದ್ದು,ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾರ್ಯಾಧ್ಯಕ್ಷರಾದ ಎಸ್.ಆರ್. ಪಾಟೀಲ್, ದಿನೇಶ್ ಗುಂಡೂರಾವ್ ಸೇರಿ 70 ಜನರ ಸಮಿತಿ ರಚನೆ ಮಾಡಿದ್ದಾರೆ. ಚಿತ್ರನಟರಾದ ಮಾಜಿ ಸಚಿವ ಅಂಬರೀಶ್, ಮಾಜಿ ಸಂಸದೆ ರಮ್ಯಾ,ವಿಧಾನ ಪರಿಷತ್ ಸದಸ್ಯೆ ಜಯಮಾಲ, ಮಾಲಾಶ್ರೀ, ಸಾಧುಕೋಕಿಲಾ, ಭಾವನಾ, ಶಶಿಕುಮಾರ್ ಸಮಿತಿಯಲ್ಲಿದ್ದಾರೆ.
ಶಾಸಕರಾದ ಕೆ.ಎನ್. ರಾಜಣ್ಣ, ಅಭಯಚಂದ್ರ ಜೈನ್, ಶಿವರಾಜ ತಂಗಡಗಿ,ಬಾಬುರಾವ್ ಚಿಂಚನಸೂರ್, ವಿನಯ್ ಕುಮಾರ್ ಸೊರಕೆ, ಅನಿಲ್ ಲಾಡ್, ವಿಧಾನ ಪರಿಷತ್ ಸದಸ್ಯರಾದ ಸಿ.ಎಂ. ಇಬ್ರಾಹಿಂ, ವಿ.ಎಸ್. ಉಗ್ರಪ್ಪ, ಐವಾನ್ ಡಿಸೋಜಾ, ಪಿ.ಆರ್. ರಮೇಶ್, ರಿಜ್ವಾನ್ ಅರ್ಷದ್, ರಘು ಆಚಾರ್, ಎಂ.ಡಿ. ಲಕ್ಷ್ಮೀನಾರಾಯಣ, ಶರಣಪ್ಪ ಮಟ್ಟೂರ್, ವಿಜಯ್ ಸಿಂಗ್, ಜಬ್ಟಾರ್ ಖಾನ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ 70 ಮುಖಂಡರನ್ನು ಸಮಿತಿಯಲ್ಲಿ ಸೇರಿಸಿದ್ದು, ಇವರೊಂದಿಗೆ ಕೇಂದ್ರದ ಮಾಜಿ ಸಚಿವರು, ಕೆಪಿಸಿಸಿ ಮಾಜಿ ಅಧ್ಯಕ್ಷರು,ಮುಂಚೂಣಿ ಘಟಕದ ಅಧ್ಯಕರು, ರಾಜ್ಯಸಭಾ ಹಾಗೂ ಲೋಕಸಭಾ ಸದಸ್ಯರು ಸಮಿತಿಯಲ್ಲಿದ್ದಾರೆ.