Advertisement

Vodeo: ಮೇಲ್ಛಾವಣಿ ಕಿತ್ತು ಹೋದರೂ ಸಂಚರಿಸುತ್ತಿದೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಬಸ್

01:11 PM Jul 27, 2023 | Team Udayavani |

ಮಹಾರಾಷ್ಟ್ರ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ ನಷ್ಟದಲ್ಲಿ ನಡೆತ್ತಿದೆಯೋ ಅಥವಾ ಈ ಬಸ್ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದೆಯೋ ಇಲ್ಲವೋ ಗೊತ್ತಿಲ್ಲ ವೈರಲ್ ವಿಡಿಯೋದಲ್ಲಿ, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸೊಂದು ಮೇಲ್ಛಾವಣಿ ಭಾಗಶಃ ಬೇರ್ಪಟ್ಟು ಗಾಳಿಯಲ್ಲಿ ಬೀಸುತ್ತಿರುವಂತೆ ಕಂಡುಬರುತಿದ್ದರೂ ಬಸ್ಸು ಮಾತ್ರ ಅಪಾಯಕಾರಿ ಸ್ಥಿತಿಯಲ್ಲಿ ಹೆದ್ದಾರಿಯಲ್ಲಿ ಸಂಚರಿಸುತ್ತಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

Advertisement

ಈ ವಿಡಿಯೋದಲ್ಲಿ ಕಂಡು ಬರುವ ದೃಶ್ಯದಲ್ಲಿ ಬಸ್ಸು ಗಡ್ಚಿರೋಲಿ – ಅಹೇರಿ ಮಾರ್ಗದಲ್ಲಿ ಸಂಚರಿಸುತ್ತಿರುವುದಾಗಿ ಹೇಳಲಾಗಿದೆ.

ತುಂಬಾ ಅಪಾಯಕಾರಿ ಸನ್ನಿವೇಶದಂತೆ ಕಾಣುತ್ತಿರುವ ವಿಡಿಯೋ, ಬಸ್ಸಿನ ಸ್ಥಿತಿ ಈ ರೀತಿ ಹದಗೆಟ್ಟಿದ್ದು ಬಸ್ಸಿನ ಚಾಲಕ ಅಥವಾ ನಿರ್ವಾಹಕನ ಗಮನಕ್ಕೆ ಬರಲಿಲ್ಲವೇ ಅದೂ ಅಲ್ಲದೆ ಸಣ್ಣ ಪ್ರಮಾಣದ ತೊಂದರೆ ಕಂಡು ಬಂದರೆ ರಸ್ತೆಯಲ್ಲಿ ಹೋಗುವ ಸಾರ್ವಜನಿಕರು ಗಮನಕ್ಕೆ ತರುತ್ತಾರೆ ಅಂತದರಲ್ಲಿ ಬಸ್ಸಿನ ಮೇಲ್ಛಾವಣಿಯೇ ಕಿತ್ತು ಹೋಗುವ ಮಟ್ಟಕ್ಕೆ ಬಂದಿದೆ ಎಂದರೆ… ಇದು ಪ್ರಯಾಣಿಕರಿಗೂ ಮತ್ತು ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೂ ಅಪಾಯ ಕಟ್ಟಿಟ್ಟ ಬುತ್ತಿ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರಿಗೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದು, ಈ ದೃಶ್ಯಗಳು ಅಂತರ್ಜಾಲದಲ್ಲಿ ಕಾಣಿಸಿಕೊಳ್ಳುತಿದ್ದಂತೆ ವಾಹನಗಳ ನಿರ್ವಹಣೆಯ ಜವಾಬ್ದಾರಿಯುತ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಈ ಕುರಿತು ಮಾತನಾಡಿದ ಎಂಎಸ್‌ಆರ್‌ಟಿಸಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶೇಖರ್ ಚನ್ನೆ, ಬಸ್ ಗಡ್ಚಿರೋಲಿ ಜಿಲ್ಲೆಯ ಅಹೇರಿ ಡಿಪೋಗೆ ಸೇರಿದ್ದು, ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

Advertisement

ಇದನ್ನೂ ಓದಿ: ತೀರ್ಥಹಳ್ಳಿ: ಶೌಚಾಲಯದ ಬಾಗಿಲು ಬಂದ್…! ಮೂತ್ರ ವಿಸರ್ಜನೆಗೆ ಪ್ರಯಾಣಿಕರ ಪರದಾಟ

Advertisement

Udayavani is now on Telegram. Click here to join our channel and stay updated with the latest news.

Next