Advertisement

ಬಜೆಟ್‌ ಆಯ್ತು, ನಮಗೇನು ಬಂತು ?

05:25 PM Mar 20, 2017 | Harsha Rao |

ಬಜೆಟ್‌ ಮಂಡನೆ ಆದ ನಂತರ ನಮಗೆಷ್ಟು, ನಿಮಗೆಷ್ಟು ಎನ್ನುವ ಲೆಕ್ಕ ಶುರುವಾಗುತ್ತದೆ. ಆರ್ಥಿಕ ಹಳಿಗಳೆಲ್ಲವೂ ಸರಿಯಾಗಿಯೇ ಅನಿಸಿಬಿಡುತ್ತದೆ.  ಬೇರೆ ರಾಜ್ಯಗಳಲ್ಲೂ, ಕೇಂದ್ರ ಸರ್ಕಾರದಲ್ಲೂ ಇಂಥದೇ ಮಂಡನೆ ಆದಾಗ ಅವುಗಳ ಪರಿಣಾಮ ರಾಜ್ಯಗಳಮೇಲೂ ಆಗುತ್ತದೆ. 

Advertisement

ಸಾಮಾನ್ಯವಾಗಿ ಬಜೆಟ್‌ ಮಂಡಿಸಿದಾಗ, ಅದರ ಗಾತ್ರ, ಆರ್ಥಿಕ ಅಂಕಿ ಆಂಶಗಳ ವಿಶ್ಲೇಷಣೆ ಹೆಚ್ಚು ಗಮನ ಸೆಳೆಯುತ್ತದೆ.    ಅಭಿವೃದ್ಧಿಗೆ ಪೂರಕ ನೀತಿ ನಿಯಮಗಳು, ಹಿಂದೆ ಮಾಡಿದ ತಪ್ಪುಗಳ ತಿದ್ದುಪಡಿಗಳು, ಇನ್ನೂ ಅಭಿವೃದ್ಧಿಯನ್ನು ವಾರ್ತಾ ಪ್ರಚಾರದಲ್ಲಷ್ಟೇ ಕಂಡವರಿಗೆ ಹತ್ತಿರಕೆ ಹೊಸ್ತಿಲಿಗೆ ಬರುವಂತೆ ಮಾಡುವ ಕಾರ್ಯಕ್ರಮಗಳನ್ನು ರೂಪಿಸುವ ಸದಾವಕಾಶ ಕೂಡಾ ಆಗಿರುತ್ತದೆ. ಆರ್ಥಿಕ ಅಸಮಾನತೆ ಮತ್ತು ಅಭದ್ರತೆ ಹೆಚ್ಚು ಭಾಗ ಜನರನ್ನು ಕಾಡುತ್ತಿದೆ. ನಮ್ಮ ಸರಾಸರಿ ವಾರ್ಷಿಕ ವರಮಾನ ಸುಮಾರು 16,0000ಕ್ಕೆ ಏರಿದ್ದರೂ ಇದರಲ್ಲಿ ಇನ್‌ಫ‚ೋಸಿಸ್‌ ನಾರಾಯಣ ಮೂರ್ತಿ ಮತ್ತು ಪೊ› ಅಜಿ‚àಮ್‌ ಪ್ರೇಮ್‌ಜಿ ಸಂಬಳ ಸೇರಿದೆ. ಬೆಂಗಳೂರಿನ ವಾರ್ಷಿಕ ವರಮಾನ ಸುಮಾರು 30,0000 ಇದ್ದರೆ ಕಲಬುರಗಿಯಲ್ಲಿ ಕೇವಲ ಸುಮಾರು 70,000ವಷ್ಟೇ ಆಗಿರುತ್ತದೆ. ಮಹಿಳೆಯರಲ್ಲಿ ಶೇ. 30 ಅನಕ್ಷರಸ್ಥರು ಇನ್ನೂ ಇರುವುದು ವಿಪರ್ಯಾಸವೇ ಸರಿ. ಶಿಶು ಮರಣ 1,000ಕ್ಕೆ ಇನ್ನೂ 28 ಇರುವುದು ದುರಂತ. 

ಇಲ್ಲೆಲ್ಲ ಇಷ್ಟಿಷ್ಟು
ಕೇರಳ ರಾಜ್ಯದಲ್ಲಿ ಇದು 7ಕ್ಕೆ ಇಳಿದು ಐರೊಪ್ಯ ರಾಷ್ಟ್ರಗಳ ಮಾನವ ಅಭಿವೃದ್ಧಿ ಮಟ್ಟಕ್ಕೆ ಈ ವಿಚಾರದಲ್ಲಿ ಸೇರಿದೆ. ಎಂಟನೇ ತರಗತಿಯ ಮಕ್ಕಳು ಎರಡನೇ ತರಗತಿಯ ಪುಸ್ತಕ ಓದಲು ಬಾರದಿರುವುದು ನಮ್ಮ ವಿದ್ಯಾಭಾಸದ ಗುಣಮಟ್ಟ ತಿಳಿಸುತ್ತದೆ.  ಅಲ್ಲದೇ ಶುದ್ಧ ಇಂಧನದಿಂದ ಅಡುಗೆ ಕೇವಲ ಶೇ.53 ರಷ್ಟಿರುತ್ತದೆ. ಇದು ತಮಿಳುನಾಡಿನಲ್ಲಿ ಶೇ.72ರಷ್ಟಿದೆ. 

ಈ ರೀತಿಯ ವಿಷಯಗಳೇ ನಮ್ಮಗೆ ನಿಜವಾದ ಅಭಿವೃದ್ಧಿಯ ಸೂಚಕಗಳು. ಮಾನವ ಅಭಿವೃದ್ಧಿ ಸೂಚಕ(HDI) ದೇಶಿ ಬಂಡವಾಳ (HDI) ಕ್ಕಿಂತ ಪ್ರಮುಖ. ಆ ರೀತಿ ನೋಡಿದಲ್ಲಿ ದೇಶಿ ಬಂಡವಾಳ ದೇಶದಲ್ಲಿ ಕರ್ನಾಟಕ ಅತೀ ಹೆಚ್ಚು ಪಡೆಯುವ ರಾಜ್ಯವಾಗಿದೆ. ಆದರೆ ಕೇರಳ ನಮಗಿಂತ ಮಾನವ ಅಬಿವೃದ್ಧಿ ಮಾಪನದಲ್ಲಿ ಬಹಳಷ್ಟು ನಮಗಿಂತ ಮುಂದಿದೆ. ಕೆಲವರು ಹೇಳುವ ಪ್ರಕಾರ ಕರ್ನಾಟಕದಲ್ಲಿ ಬೆಂಗಳೂರು ತೆಗೆದರೆ ಕರ್ನಾಟಕ ಬಿಹಾರ. ನಿತೀಶ್‌ ಕುಮಾರ್‌ ಬಿಹಾರವಲ್ಲ, ಲಾಲು ಬಿಹಾರ. ಇದು ಸ್ವಲ್ಪ ಮಟ್ಟಿಗೆ ಅತಿಶಯೋಕ್ತಿ ಅನಿಸಬಹುದು. ಆದರೆ ಸತ್ಯಕ್ಕೆ ಬಹಳ ದೂರಲ್ಲ. ಬೀದರ್‌, ರಾಯಚೂರು ಕಂಡರೆ ತಿಳಿಯುವಂತದ್ದು. 

ಈ ವರ್ಷ ಸರ್ಕಾರದ ಉತ್ತಮ ಹೆಜ್ಜೆಯಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅವರು ಸರ್ಕಾರದಿಂದ ಪಡೆದ ಭೂಮಿಯನ್ನು 99 ವರ್ಷ ಲೀಸ್‌ ಬದಲು 10 ವರ್ಷದಲ್ಲಿ ಅವರ ಹೆಸರಿಗೆ ವರ್ಗಾಯಿಸುವ ಕ್ರಮವಾಗಿದೆ. ಅನೇಕ ಸಣ್ಣ ಉದ್ಯಮದಾರರಿಗೆ ಅವರು ಬಂಡವಾಳ ಹಾಕಿ ಅಭಿವೃದ್ಧಿಪಡಿಸಿದ ಭೂಮಿ ಅವರದಲ್ಲ ಎನ್ನುವ ವಿಷಯ ಬಾಧಿಸುತಿತ್ತು. ಅದನ್ನು ಸರಿಪಡಿಸಲಾಗಿದೆ. ಅಲ್ಲದೆ ಮಹಿಳಾ ಉದ್ಯಮಿಗಳಿಗೆ ಕರ್ನಾಟಕ ಹಣಕಾಸು ನಿಗಮದಿಂದ 2 ಕೋಟಿವರೆಗೆ ಶೇ.4ರ ಬಡ್ಡಿ ದರದಲ್ಲಿ ಒದಗಿಸುವುದು ಉತ್ತಮ ಹೆಜ್ಜೆಯೇ. 

Advertisement

ನಮ್ಮಲ್ಲೂ ಹೀಗೆ
ಕರ್ನಾಟಕ ಅದರಲ್ಲೂ ಬೆಂಗಳೂರು ರಾಷ್ಟ್ರದಲ್ಲಿ ಇಂದಿಗೂ ಅತ್ಯಂತ ಬಯಸುವ ಮತ್ತು ಬಂಡವಾಳ ಹೂಡಿಕೆಗೆ ಯೋಗ್ಯ ಸ್ಥಳವಾಗಿದೆ. ನೆಹರು ಹಿಂದೊಮ್ಮೆ ಪ್ರತಿ ನಗರ ಭಾರತ ಗತ ವೈಭವವನ್ನು ತಿಳಿಸಿದರೆ ಬೆಂಗಳೂರು ಭವಿಷ್ಯವನ್ನು ಸೂಚಿಸುತ್ತದೆ ಎಂದಿದ್ದರು. ಉತ್ತರ ಭಾರತದವರಿಗೆ ಬೆಂಗಳೂರೆಂದರೆ “ದೇಶ’ವೇ. ಇಲ್ಲಿನ ಜನ, ವಿಜಾnನ, ಹೊಂದಿಕೊಳ್ಳುವ ಪ್ರವೃತ್ತಿ ಬೇರೆ ಕಡೆ ಕಾಣುವಂತದ್ದಲ್ಲ. ಆದರೆ ಇದೇ ಬೆಂಗಳೂರು ಜಗತ್ತಿನ ವಾಸ ಯೋಗ್ಯ ಮಾಪನದಲ್ಲಿ 146ನೇ ಸ್ಥಾನದಲ್ಲಿರುವುದು ವಿಪರ್ಯಾಸ. ಇಲ್ಲಿನ ಸಾಧ್ಯತೆ ಇನ್ನೂ ಸಾವಿರ. ಇಲ್ಲಿನ ಪ್ರಯಾಣ ಸರಾಸರಿ ವೇಗ ಗಂಟೆಗೆ 7 ಕಿ.ಮೀ. ಸುಮಾರು ಮುಕ್ಕಾಲು ಭಾಗ ಗೊಚ್ಚೆ ನೀರು ಯಾವುದೇ ಶುದ್ದಿ ಇಲ್ಲದೇ ಹಾಗೆಯೇ ಕೆರೆ ಕೊಳ್ಳಗಳಿಗೆ ಸೇರಿಸಿ ಮಾಲಿನ್ಯ ಮಾಡುವುದಾಗಿದೆ. ಇರುವ ಸುಮಾರು 1 ಕೋಟಿ ಜನಕ್ಕೆ 600 ಸಾರ್ವಜನಿಕ ಶೌಚಾಲಯ. ಇಲ್ಲಿ ಉಚಿತವೆಂದಿದ್ದರೆ ಆಶ್ಚರ್ಯವೇ. ಈಗ 1000 ಸಾರ್ವಜನಿಕ ಶೌಚಾಲಯ ನಿರ್ಮಿಸುವ ಯೋಜನೆ ಉತ್ತಮ ಹೆಜ್ಜೆ. ಅದೂ ಸಾಲದು. ಹಾಗೆಯೇ 3,000 ಬಸ್ಸುಗಳು ಖರೀದಿ ಸಾರ್ವಜನಿಕ ವ್ಯವಸ್ಥೆಗೆ ಒಳ್ಳೆಯದು.

ನಮ್ಮ ರಾಜ್ಯ ತೋಟಗಾರಿಕೆ ಹೆಸರುವಾಸಿ. ಇದಕ್ಕೆ ಮೈಸೂರು ಮಹರಾಜರಿಂದ ಹಿಡಿದು, ತೋಟಗಾರಿಕೆಯ ಹರಿಕಾರ ಮರಿಗೌಡರಂತ ಮಾಹಾನಿಯರು ಮಾಡಿರುವ ಕೆಲಸ ಹಿಂದಿರುವಂತದ್ದು. ಈ ಬಾರಿ ತೋಟಗಾರಿಕೆಗೆ ಹೆಚ್ಚು ಉತ್ತೇಜನ ಕೊಡಲಾಗಿದೆ. ಇಲ್ಲಿ ಹಣ್ಣು ಸಂಸ್ಕರಣ ಘಟಕಗಳ ಉದ್ಯಮಕ್ಕೆ ಇದು ಸಹಾಯವಾಗಬಹುದು. ಅಲ್ಲದೇ ಪಶು ಸಂಗೋಪನೆ ನಮ್ಮ ಕೃಷಿ ವಾರ್ಷಿಕ ಆರ್ಥಿಕ ಅಭಿವೃದ್ಧಿ ಸ್ಥಗಿತ ಅಥವಾ ಋಣಾತ್ಮಕ ವಾಗುವುದನ್ನು ತಡೆಗಟ್ಟಿದೆ. ಆಹಾರ ಉತ್ಪಾದನೆಯಲ್ಲಿ ಸುಮಾರು 3-4 ಮಿಲಿಯನ್‌ ಟನ್‌ ಬರಗಾಲದಿಂದ ಕುಂಟಿತವಾದರೂ ಹೈನುಗಾರಿಕೆ ನಮ್ಮ ಕೃಷಿ ಅಭಿವೃದ್ಧಿಯಲ್ಲಿ ಸುಮಾರು ಶೇ. 2ರಷ್ಟು ಅಭಿವೃದ್ಧಿಯ ಪಥದಲ್ಲಿಟ್ಟಿದೆ. ಇಲ್ಲಿನ ವೈವಿಧ್ಯಮಯ ತಳಿಗಳ ಉತ್ಪನ್ನವನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕಾಗಿದೆ. ಬೆಂಗಳೂರಿನಲ್ಲಿ ನಾಟಿ ಕೋಳಿ ಮೊಟ್ಟೆ, ಫ‚ಾರಂ ಕೋಳಿ ಮೊಟ್ಟೆಗಿಂತ ಎರಡಷ್ಟು ಬೆಲೆಗೆ ಮಾರಾಟವಾಗುತ್ತಿವೆ. ಮನೆ ಹಿಂದೆ ಕೋಳಿಗೆ ಮನೆ ಕೊಟಿಗಟ್ಟಲ್ಲೇ ಮನೆ ಕಟ್ಟದೇ ಬೆಳೆಸಿ ಸುಸ್ಥಿರ ಕೃಷಿಗೂ ಉತ್ತೇಜಿಸಿ ಬಡವರ ಆದಾಯ ಹೆಚ್ಚಿಸುವತ್ತ ಹೆಚ್ಚು ಸಾಂಸ್ಥಿಕ ನೆರವು ಅಗತ್ಯವಿದೆ. ಪಶುಸಂಗೋಪಾನೆಯತ್ತ ಗಮನ ಹರಿಸಿರಿವುದು ಸೂಕ್ತವೇ. ಬನ್ನೂರು ಕುರಿ ನಮ್ಮ ರಾಜ್ಯದ ಹೆಸರಾಂತ ತಳಿ. ಇದನ್ನು ನಾವು ಸರಿಯಾಗಿ ಬ್ರಾಂಡ್‌ ಮಾಡಿ ಮಾರಾಟ ಮಾಡುತ್ತಿಲ್ಲ. ರಾಜಾಸ್ತಾನದಲ್ಲಿ ದಿಯೋನಿ ಹಸುವಿನ ಹಾಲಿಗೆ ನಗರದಲ್ಲಿ 65ರೂ ಲೀಟರ್‌ ಕೊಟ್ಟು ಕೊಳ್ಳುತ್ತಿದ್ದಾರೆ. ಇದೇ ರೀತಿ ನಮ್ಮ ಅಮ್ರುತ್‌ ಮಹಾಲ್‌ ಮತ್ತು ಮಲೆನಾಡ ಗಿಡ್ಡ ಹಸುವಿನ ಹಾಲು ಮಾರಾಟ ಮಾಡುವ ಸಾಧ್ಯತೆ ಉಂಟು. ರೈತರು ಅಧಿಕ ಲಾಭಗಳಿಸಬಹುದು. 

ಸಹಾಯ ಧನವಿಲ್ಲ
ರೈತ ಬೆಳೆಗೆ ಯೋಗ್ಯ ಬೆಲೆ ಇನ್ನೂ ಸಿಗದಿರುವುದು ರೈತರ ಸಾಲ ಮನ್ನ ಮತ್ತು ಸಹಾಯ ಧನದತ್ತ ಗಮನಕೊಡಬೇಕಾಗಿದೆ. ಸರಿಯಾದ ವೈಜಾnನಿಕ ಬೆಲೆ ಸಿಕ್ಕಲಿ ರೈತರು ಇದಕ್ಕೆಲ್ಲ ಕೈಚಾಚಿ ಅಂಗಲಾಚಬೇಕಿಲ್ಲ. ಸ್ವಾಮಿನಾಥನ್‌ ವರದಿಯ ಪ್ರಕಾರ ರೈತರ ಖರ್ಚಿನ ಮೇಲೆ ಶೇ.50 ಲಾಭ ಕೊಡಬೇಕೆಂಬುದಾಗಿದೆ. ಆದರೆ ಯುಪಿಎ ಮತ್ತು ಎನ್‌ಡಿಎ ಸರ್ಕಾರಗಳೆರಡೂ ಸವೊìಚ್ಚ ನ್ಯಾಯಾಲಯದ ಮುಂದೇ ನಮಗೆ ರೈತರಿಗೆ ನ್ಯಾಯ ಬೆಲೆ ಕೊಡಲು ಸಾಧ್ಯವಿಲ್ಲ ಎಂದು ಅರ್ಜಿ ಸಲ್ಲಿಸಿವೆ! ಎನ್‌ಡಿಎ ಚುನಾವಣಾ ಪ್ರಣಾಳಿಕೆಯಲ್ಲಿ ಈ ವರದಿ ಅನುಷ್ಟಾನಗೊಳಿಸುವುದಾಗಿ ತಿಳಿಸಲಾಗಿತ್ತು. ಇಂದು ನಮ್ಮ ರೈತರು ಅವಶ್ಯಕತೆಗೆ ಸರಿಯಾಗಿ 5 ಮಿಲಿಯನ್‌ ಟನ್‌ ಹೆಚ್ಚು ಬೇಳೆ ಕಾಳು ಬೆಳೆದರು. ಇದರಿಂದ ಕೆನಡಾ ಮತ್ತು ಮೀಯಾನ್‌ಮಾರ್‌ ದೇಶಗಳನ್ನು ಬೇಳೆ ಕೊಳ್ಳುವುದು ನಿಲ್ಲಿಸಬಹುದಾಗಿದೆ. ಆದರೆ ಸರ್ಕಾರವೇ ನಿಗದಿಸಿರುವ ಬೆಲೆ ರೈತರಿಗೆ ಸಿಗಿತ್ತಿಲ್ಲ. ಉದಾಹರಣೆಗೆ ತೊಗರಿ ಬೇಳೆ ಸರ್ಕಾರ ನಿಗದಿಸಿರುವುದು ಸುಮಾರು ರೂ 50 ಕೆಜಿಗೆ, ರೈತರಿಗೆ ಸಿಗುತ್ತಿರುವುದು ಕೇವಲ 40 ರೂಪಾಯಿ!
ಕರ್ನಾಟಕದ ಉದ್ಯಮಶೀಲತೆಗೇನೂ ಕೊರತೆ ಇಲ್ಲ. ಅದಕ್ಕೆ ತಕ್ಕ ರೀತಿ ಸರ್ಕಾರ ಅದರಲ್ಲೂ ಅಧಿಕಾರಿಗಳು ಸಹಕರಿಸಬೇಕಾಗಿದೆ. ಸುಗಮವಾಗಿ ವ್ಯಾಪಾರ ಮಾಡುವ ಪಟ್ಟಿಯಲ್ಲಿ ರಾಜ್ಯ 13 ಸ್ಥಾನದಲ್ಲಿದೆ. ಇದು ಸರಿಯಲ್ಲ. ದೇಶದಲ್ಲಿ ಎಲ್ಲಾ ರೀತಿಯಿಂದಲೂ ನಾವು ಉತ್ತಮ ರಾಜ್ಯವಾಗುವ ಸಾಧ್ಯತೆ ಇದೆ. ಇದಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಬೇಕಾಗಿರುವುದು ಅವಶ್ಯಕ.

ಸಾಲ ಇಲ್ಲ, ಅಭಿವೃದ್ಧಿಯೇ ಎಲ್ಲ
ಕರ್ನಾಟಕ ಸರ್ಕಾರ ಸಾಲದ ಹೊರೆ ಹೆಚ್ಚಿಸಿವೆ ಎನ್ನುವ ಅಪವಾದ ಎಲ್ಲೆಡೆ ಕೇಳಿಬರುತ್ತಿದೆ. ವಾಸ್ತವವಾಗಿ ಕರ್ನಾಟಕ ತನ್ನ ಆರ್ಥಿಕ ಶಿಸ್ತನ್ನು ಅಚ್ಚುಕಟ್ಟಾಗಿ ನಿರ್ವಹಿತ್ತಿದೆ. ವಿತ್ತೀಯ ಕೊರತೆ ಈ ವರ್ಷಕ್ಕೆ ಶೇ.2.12  ಇಳಿಸಿರುವುದು ಗಮನಾರ್ಹವೇ. ಕಳೆದ ವರ್ಷ ಇದು ಶೇ.2.79 ಇತ್ತು. ಇದೂ ಸಹ ನಿಗದಿ ಪಡಿಸಿರುವ ಶೇ 3 ರ ಒಳಗೆ ಇದೆ. ಇನ್ನೊಂದು ಪ್ರಮುಖ ಆರ್ಥಿಕ ಶಿಸ್ತು, ಬಡ್ಡಿ ಕಟ್ಟುವ ಹಣ ಮತ್ತು ಒಟ್ಟು ಆದಾಯ. ಸಾಲಕ್ಕೆ ಕಟ್ಟುವ ಬಡ್ಡಿ ಆದಾಯದ ಶೇಕಡ 10ಅನ್ನು ಮೀರಬಾರದು. ಇದನ್ನು ಕರ್ನಾಟಕ ಉಳಿಸಿಕೊಂಡು ಬಂದಿದೆ. ಹಾಗೆಯೇ ಜಿ.ಡಿ.ಪಿಯ ಶೇ. 25 ಕ್ಕಿಂತ ಹೆಚ್ಚು ಸಾಲ ಮಾಡುವಂತಿಲ್ಲ. ಇಲ್ಲಿಯೂ ಸಹ ಕರ್ನಾಟಕ ಶಿಸ್ತನ್ನು ಕಾಪಾಡಿಕೊಂಡು ಬಂದಿದೆ. ಆರ್ಥಿಕ ಶಿಸ್ತು ಮತ್ತು ಆಯವ್ಯಯ ಮಾನಿಟರಿಂಗ್‌ ಕಮಿಟಿಯ ಪ್ರಕಾರ 2023ಕ್ಕೆ ದೇಶದ ಒಟ್ಟು ಆರ್ಥಿಕತೆಯ ಶೇ. 40 ರಷ್ಟು ಕೇಂದ್ರ ಮತ್ತು ಶೇ.20 ರಷ್ಟು ಒಳಗೆ ರಾಜ್ಯ ಸರ್ಕಾರಗಳು ತಮ್ಮ ಸಾಲದ ಮಿತಿಯನ್ನು ಮೀರಕೂಡದೆಂದು ಯೋಜನೆ ಹಾಕಿಕೊಂಡಿದೆ. ಈಗ ಒಟ್ಟು ಸಾಲ ನಮ್ಮ ದೇಶದ ಆರ್ಥಿಕತೆಯ ಶೇ. 70 ರಷ್ಟಿ ಇರುತ್ತದೆ. ಆರ್ಥಿಕತೆಯಲ್ಲಿ ಬಲಿಷ್ಟವಾದ ಚೀನಾ ತನ್ನ ಒಟ್ಟು ಆರ್ಥಿಕತೆಯ ಶೇ.3 ರಷ್ಟು ಸಾಲ ಮಾಡಿರುವುದು ಗಮನಿಸಬಹುದು. 

ಸಾಲದ ರೂಪದಲ್ಲಿ ಹಣ ಪಡೆದು ಅದನ್ನು ಖರ್ಚು ಮಾಡುವ ವಿಧಿ ವಿಧಾನಗಳಲ್ಲಿ ಸಾಕಷ್ಟು ಲೋಪದೋಷಗಳಿರುವುದು ನಮ್ಮಲ್ಲಿ ಕಂಡುಬರುತ್ತದೆ. ಉದಾಹರಣೆಗೆ ಸರ್ಕಾರ ಜನರಿಗೆ ಒದಗಿಸುವ ಸೌಲಭ್ಯಗಳಲ್ಲಿ ಕಂಡುಬರುವ ಅಂಶವೆಂದರೆ ಒಂದು ರೂಪಾಯಿ ತಲುಪಿಸಲು 3 ರೂ. 62 ಪೈಸೆ ಖರ್ಚು ಮಾಡುತ್ತದೆ! ಆಹಾರ ಸರಬರಾಜಿಗೆ ಬಂದರೆ ಲೀಕೇಜ್‌, ವೇಸ್ಟೇಜ್‌ ಮತ್ತು ಕವರೇಜ್‌ ಎಂಬ ಮೂರು ರೀತಿಯ ಸಮಸ್ಯೆ ಕಂಡುಬರುತ್ತದೆ. ಲೀಕೇಜ್‌ ಎಂದರೆ ಗೋದಾಮಿನಿಂದ ಹೊರಟ ಸರಕು ರೇಷನ್‌ ಅಂಗಡಿಗೆ ತಲುಪದೆ ಕದ್ದು ಬೇರೆಡೆ ಸರಬರಾಜು ಮಾಡುವುದು. ವೇಸ್ಟೇಜ್‌ ಎಂದರೆ ಗೋದಾಮಿನಲ್ಲೇ ಇಲಿ ಹೆಗ್ಗಣಗಳು ತಿನ್ನುವುದು. ಕವರೇಜ್‌ ವಿಷಯ ಬಡವನ ಅಕ್ಕಿ ಶ್ರೀಮಂತನಿಗೆ ಹೋಗುವುದು. ಈ ರೀತಿ ಬಡ್ಡಿ ಕಟ್ಟಿ ಸಾಲ ನಿರ್ವಹಣೆ ಮಾಡಿದಲ್ಲಿ ಸಮಾಜಕ್ಕೆ ಕೆಡುಕು ಕಟ್ಟಿಟ್ಟ ಬುತ್ತಿ.

– ಡಾ. ಕೆ.ಸಿ. ರಘು

Advertisement

Udayavani is now on Telegram. Click here to join our channel and stay updated with the latest news.

Next