Advertisement

ಶಾಂತಿ ಭಂಜಕರಿಗೆ ಸೂಕ್ತ ಪಾಠ: ನಳಿನ್‌ ಕುಮಾರ್‌ ಕಟೀಲು

11:07 PM May 10, 2022 | Team Udayavani |

ಉಡುಪಿ: ಶಾಂತಿ ಭಂಜಕ ಶಕ್ತಿಗಳಿಗೆ ಸರಕಾರ ಅವಕಾಶ ನೀಡುವುದಿಲ್ಲ, ಹಿಜಾಬ್‌, ಆಜಾನ್‌, ಹಲಾಲ್‌ ಯಾವುದೇ ಪ್ರಕರಣ ಬರಲಿ ಎಲ್ಲವನ್ನು ಸಮರ್ಥವಾಗಿ ಎದುರಿಸಲಿದೆ. ಅರಾಜಕತೆ ಸೃಷ್ಟಿಸುವುದು ಕಾಂಗ್ರೆಸ್‌ನ ಹುಟ್ಟುಗುಣ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸೋಲಿನ ಭೀತಿ ಈಗಾಗಲೇ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಕಿದಿಯೂರು ಹೊಟೇಲ್‌ನಲ್ಲಿ ಮಂಗಳವಾರ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತುಷ್ಟೀಕರಣದ ನೀತಿ, ಮತಬ್ಯಾಂಕ್‌ ರಾಜಕಾರಣವನ್ನು ಬಿಜೆಪಿ ಎಂದೂ ಮಾಡುವುದಿಲ್ಲ. ಯಾರದೋ ತುಷ್ಟೀ ಕರಣಕ್ಕಾಗಿ ಜೈಲಿನಲ್ಲಿದ್ದ 2 ಸಾವಿರ ಜನರ ಮೇಲೆ ಬಿ ರಿಪೋರ್ಟ್‌ ಹಾಕಿ ಹೊರಗೆ ಬಿಡುವ ಸಿದ್ದರಾಮಯ್ಯ ನವರಂತಹ ಸರಕಾರ ನಮ್ಮದಲ್ಲ. ಗಟ್ಟಿ ತೀರ್ಮಾನದ ಮೂಲಕ ಶಾಂತಿ ಭಂಜಕರನ್ನು ನಿಯಂತ್ರಿಸಲಾಗುತ್ತಿದೆ ಎಂದರು.

ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ವಂಶವಾರು ರಾಜಕಾರಣ ಕಾಂಗ್ರೆಸ್‌ನ ಬಹುದೊಡ್ಡ ಕೊಡುಗೆ. ಡಾ| ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದ ಸಂದರ್ಭ ಮಣ್ಣು, ನೀರು, ಗಾಳಿ ಹೀಗೆ ಎಲ್ಲದರಲ್ಲೂ ಭ್ರಷ್ಟಾಚಾರ ನಡೆದಿತ್ತು. ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಯುತ್‌ ಕಾಂಗ್ರೆಸ್‌ ಅಧ್ಯಕ್ಷರು ಕೂಡ ಬೇಲ್‌ನಲ್ಲಿ ಹೊರಗಿದ್ದಾರೆ ಎಂದರು.

ಭಯೋತ್ಪಾದಕರಿಗೂ ಕಾಂಗ್ರೆಸ್‌ ಪ್ರೇರಣೆ ನೀಡುತ್ತಿದೆ. ಕಾಂಗ್ರೆಸ್‌ ಆಡ ಳಿತಾವಧಿಯಲ್ಲಿ ಬೆಂಗಳೂರು ಸಹಿತ ದೇಶದ ನಾನಾ ಭಾಗದಲ್ಲಿ ಸರಣಿ ಬಾಂಬ್‌ ದಾಳಿಗಳು ನಡೆದಿವೆ. ಕಾಂಗ್ರೆಸ್‌ನಲ್ಲಿ ಪರಿವಾರ ರಾಜ ಕಾರಣ ಇಂದಿಗೂ ಇದೆ. ಗಾಂಧಿ ಕುಟುಂಬದ ವಿರುದ್ಧ ಅಲ್ಲಿ ಯಾರೂ ಮಾತನಾಡುವಂತಿಲ್ಲ. ಸೋನಿಯಾ, ರಾಹುಲ್‌, ಪ್ರಿಯಾಂಕಾ ಅವರೇ ರಾಷ್ಟ್ರಮಟ್ಟದ ನಾಯಕರಾಗಿದ್ದಾರೆ ಎಂದು ಟೀಕಿಸಿದರು.

Advertisement

ಇದನ್ನೂ ಓದಿ:ರಾಜ್ಯ ಚುನಾವಣೆಗೆ ರಣಕಹಳೆ: ಉಡುಪಿಯಲ್ಲಿ ಮೊಳಗಿತು ಬಿಜೆಪಿಯ ಸಂಘಟನಾತ್ಮಕ ಪಾಂಚಜನ್ಯ

ಗಲಭೆಯ ಹಿಂದೆ ಸಿದ್ದರಾಮಯ್ಯ
ಅಧಿಕಾರ ಇಲ್ಲದಾಗ ದೊಂಬಿ, ಅರಾಜಕತೆ ಸೃಷ್ಟಿಸುವುದು ಕಾಂಗ್ರೆಸ್‌ನ ಹುಟ್ಟುಗುಣ. ಧ್ವಜ, ನೆಲ ಹಾಗೂ ಗೀತೆಯ ಆಧಾರದಲ್ಲಿ ವಿಭಜನೆ ಮಾಡಿರುವ ಜತೆಗೆ ಮತೀಯವಾಗಿಯೂ ಬೇರ್ಪಡಿಸುವ ಕಾರ್ಯವನ್ನೂ ಮಾಡಿದೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಹೇಳ ಹೆಸರಿಲ್ಲವಾಗಿದೆ.

ರಾಜ್ಯದಲ್ಲೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್‌ಗೆ ಗೊತ್ತಾಗಿದೆ; ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಅವರಲ್ಲಿ ಶಾಶ್ವತ ನಿರುದ್ಯೋಗದ ಭಯ ಸೃಷ್ಟಿಯಾಗಿದೆ. ಕಾಂಗ್ರೆಸ್‌ನ ದಲಿತ ಶಾಸಕರ ಮೇಲೆ ಅದೇ ಪಕ್ಷದ ಮುಖಂಡನೊಬ್ಬ ಮುಸ್ಲಿಂ ಸಮುದಾಯವನ್ನು ಬಳಸಿ ಕೊಂಡು ಬೆಂಕಿ ಹಚ್ಚಿದ್ದಾನೆ. ಬೆಂಕಿ ಹಚ್ಚಲು ಪ್ರೇರಣೆ ನೀಡಿದ ವ್ಯಕ್ತಿಯನ್ನು ಕಾಂಗ್ರೆಸ್‌ ಇನ್ನೂ ಉಚ್ಚಾಟನೆ ಮಾಡಿಲ್ಲ. ಹುಬ್ಬಳ್ಳಿ, ಶಿವಮೊಗ್ಗದ ಗಲಭೆಯ ಹಿಂದೆ ಸಿದ್ದರಾಮಯ್ಯ ಇದ್ದಾರೆ ಎಂದು ಆರೋಪಿಸಿದರು.

ಸರಕಾರಗಳ ಸಾಧನೆ
ತಿಳಿಸೋಣ: ಅಂಗಾರ
ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ ಮಾತನಾಡಿ, ನಾವೆಲ್ಲರೂ ಒಟ್ಟಾಗಿ ಒಂದು ತಂಡವಾಗಿ ಶ್ರೇಷ್ಠ ಚಿಂತನೆಯ ಅನುಷ್ಠಾನ ಮತ್ತು ಕೇಂದ್ರ, ರಾಜ್ಯ ಸರಕಾರದ ಸಾಧನೆಯನ್ನು ಜನರ ಮುಂದೆ ಕೊಂಡೊಯ್ಯುವ ಕಾರ್ಯ ಮಾಡಬೇಕು. ಬಿಜೆಪಿಯ ಸಂಘಟನ ಕಾರ್ಯವು ಎಲ್ಲ ಪಕ್ಷಕ್ಕಿಂತ ಭಿನ್ನವಾಗಿದೆ. ಮತ ಬ್ಯಾಂಕ್‌ ರಾಜಕಾರಣಕ್ಕಾಗಿ ಕೆಲವರು ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಲೇ ಬಂದಿದ್ದಾರೆ. ಬಿಜೆಪಿಯಲ್ಲಿ ಸಾಮರಸ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನಮ್ಮ ವಿಚಾರ ಹಾಗೂ ಉದ್ದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.

ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌, ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಆರ್‌. ಮೆಂಡನ್‌ ಉಪಸ್ಥಿತರಿದ್ದರು.

ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್‌ ಶೆಟ್ಟಿ ಸ್ವಾಗತಿಸಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ವಂದಿಸಿದರು. ಶಿವ ಮೊ ಗ್ಗ ವಿಭಾಗ ಪ್ರಭಾರಿ ಗಿರೀಶ್‌ ನಿರೂಪಿಸಿದರು.

150 ಸೀಟ್‌ ಗೆದ್ದು ಅಧಿಕಾರಕ್ಕೆ
ರಾಜ್ಯದಲ್ಲಿ ಬಿಜೆಪಿ 150 ಸೀಟು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ. ಅಗತ್ಯ ಸಿದ್ಧತೆಗಳು ಆರಂಭವಾಗಿವೆ. ಕೇಂದ್ರ ನಾಯಕರ ಮಾರ್ಗದರ್ಶನದ ಜತೆಗೆ ರಾಜ್ಯ ನಾಯಕರ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣವೇ ನಮ್ಮ ಸಂಘಟನೆಯ ಧ್ಯೇಯ. ಸಂಘಟನೆಗೆ ಉಡುಪಿ ಭದ್ರ ನೆಲೆ ತಂದುಕೊಟ್ಟಿದೆ ಎಂದು ನಳಿನ್‌ ಕುಮಾರ್‌ ಹೇಳಿದರು.

ಸಭೆಯಲ್ಲಿದ್ದ ಪ್ರಮುಖರು
ಬಿ.ವೈ. ವಿಜಯೇಂದ್ರ, ಎನ್‌. ರವಿಕುಮಾರ್‌, ಛಲವಾದಿ ನಾರಾಯಣಸ್ವಾಮಿ, ನೆ.ಲ. ನರೇಂದ್ರಬಾಬು, ಸತೀಶ್‌ ರೆಡ್ಡಿ, ಪ್ರತಾಪ್‌ ಸಿಂಹ, ಸುಬ್ಬ ನರಸಿಂಹ, ತುಳಸಿ ಮುನಿರಾಜು ಗೌಡ, ವಿನಯ ಬಿದರೆ, ಅಶ್ವತ್ಥ ನಾರಾಯಣ, ಅರುಣ್‌ ಕುಮಾರ್‌ ಮೊದಲಾದವರು ಇದ್ದರು. ಮಾಜಿ ಸಚಿವ ಪ್ರಮೋದ್‌ ಮಧ್ವ ರಾಜ್‌ ಉದ್ಘಾ ಟನೆ ಸಮಾರಂಭ ದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next