ಹೊಸದಿಲ್ಲಿ: ದೇಶದ ಪ್ರಮುಖ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಿರಿಯ ನಾಗರಿಕರಿಗೆ ನೀಡುವ ವಿಶೇಷ ಠೇವಣಿ ಯೋಜನೆಯನ್ನು ಈ ವರ್ಷಾಂತ್ಯದವರೆಗೂ ವಿಸ್ತರಿಸಿದೆ.
ಮೇ ತಿಂಗಳಲ್ಲಿ ಆರಂಭವಾಗಿದ್ದ ಈ ಯೋಜನೆಯು ಸೆ. 30ಕ್ಕೆ ಅಂತ್ಯವಾಗಬೇಕಿತ್ತು.
ನಿಗದಿತ ಠೇವಣಿಗಳ ಮೇಲಿನ ಬಡ್ಡಿ ಕುಸಿಯುತ್ತಿದ್ದ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಎಸ್‌ಬಿಐ ಈ ಯೋಜನೆ ಜಾರಿ ಮಾಡಿತ್ತು.
ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ‘ಎಸ್‌ಬಿಐ ವೀಕೇರ್’ ಎಂಬ ವಿಶೇಷ ಠೇವಣಿ ಯೋಜನೆ ಪರಿಚಯಿಸಲಾಗಿದೆ. ಇದರನ್ವಯ ಹೆಚ್ಚುವರಿ 30 ಮೂಲಾಂಕಗಳಷ್ಟು ಬಡ್ಡಿ ನೀಡಲಾಗುತ್ತದೆ. ಇದರಿಂದ ಒಟ್ಟು ಬಡ್ಡಿ 80 ಮೂಲಾಂಕಗಳಿಗೆ ಏರುತ್ತದೆ.
ಇಲ್ಲಿರುವ ನಿಬಂಧನೆ ಎಂದರೆ ನಿಗದಿತ ಠೇವಣಿಯ ಬಾಕಿ ಅವಧಿ ಅಥವಾ ಒಟ್ಟು ಅವಧಿ ಕನಿಷ್ಠ 5 ವರ್ಷ ಇರಬೇಕು. ಈ ವಿಶೇಷ ಯೋಜನೆಯ ಮೂಲಕ ಹೊಸ ಠೇವಣಿಗಳನ್ನು ಸ್ವೀಕರಿಸಬಹುದು. ಹಾಗೆಯೇ ಅವಧಿ ಮುಗಿಯುತ್ತಿರುವ ಠೇವಣಿಗಳನ್ನು ನವೀಕರಿಸಲೂಬಹುದು.