Advertisement
ಜಾತಿ ಗೊತ್ತಿಲ್ಲದೆ, ಜಾತಿ ಹಾಗೂ ಆದಾಯ ಪ್ರಮಾಣಪತ್ರ ಸಿಗದೆ ಪರದಾಡುತ್ತಿರುವ ಅನಾಥ ಮಕ್ಕಳಿಗೆ ಶಾಶ್ವತ ಪರಿಹಾರ ಒದಗಿಸುವ ದಿಸೆಯಲ್ಲಿ ಸರಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಈ ಕ್ರಮಕ್ಕೆ ಮುಂದಾಗಿದೆ.
Related Articles
Advertisement
ಜಾತಿ ಗೊತ್ತಿಲ್ಲದ ಅನಾಥ ಮಕ್ಕಳಿಗೆ “ಜಾತಿ ರಹಿತ ವರ್ಗ’ ಎಂದು ವಿಶೇಷವಾಗಿ ಗುರುತಿಸಿ ಅವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಬೇಕು. ಇದರಿಂದ ಅನಾಥ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸುಲಭ ವಾಗಿ ಮೀಸಲಾತಿ ದೊರೆತು ಮುಖ್ಯವಾಹಿನಿಗೆ ಬರಲು ಸಾಧ್ಯ ವಾಗುತ್ತದೆ ಎಂದು ರಾಜ್ಯ ಕಾನೂನು ಆಯೋಗ ಈ ಹಿಂದೆಯೇ ಸರಕಾರಕ್ಕೆ ಸಲಹೆ ನೀಡಿತ್ತು. ಸರಕಾರದ ಸೌಲಭ್ಯಕ್ಕೆ ಜಾತಿ ಪ್ರಮಾಣ ಪತ್ರ ಪ್ರಮುಖ ವಾಗಿದೆ. ಜಾತಿ ಗೊತ್ತಿಲ್ಲದ ಕಾರಣ ಸೌಲಭ್ಯ ವಂಚಿತ ಅನಾಥ ಮಕ್ಕಳಿಗೆ ಆಯೋಗದ ಈ ಕಾರ್ಯ ಹೆಚ್ಚು ಅನುಕೂಲ ಕಲ್ಪಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ದಾವಣಗೆರೆಯಿಂದ ಆರಂಭ :
ಮಧ್ಯ ಕರ್ನಾಟಕ ಭಾಗದ ದಾವಣಗೆರೆ ಜಿಲ್ಲೆ ಯಿಂದಲೇ ಅನಾಥ ಮಕ್ಕಳ ಸಮೀಕ್ಷೆ ಆರಂಭಿಸಲಾಗಿದೆ. ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ತಂಡ ನಗರದ ವೀರೇಶ್ವರ ಪುಣ್ಯಾಶ್ರಮದ ಅನಾಥ ಮಕ್ಕಳನ್ನು ಭೇಟಿಯಾಗುವ ಮೂಲಕ ಚಾಲನೆ ನೀಡಿದೆ.
ರಾಜ್ಯದ ಅನಾಥಾಶ್ರಮಗಳಲ್ಲಿರುವ ಸಾವಿರಾರು ಮಕ್ಕಳಿಗೆ ತಮ್ಮ ಜಾತಿ ಗೊತ್ತಿಲ್ಲದ್ದರಿಂದ ಪ್ರಮಾಣಪತ್ರ ಸಿಗದೆ ತೊಂದರೆ ಯಲ್ಲಿದ್ದಾರೆ. ಅದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ವರ್ಗವೆಂದು ಪರಿಗಣಿಸುವ ಬಗ್ಗೆ ಶೀಘ್ರ ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. -ಕೆ. ಜಯಪ್ರಕಾಶ ಹೆಗ್ಡೆ ,ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ
-ಎಚ್.ಕೆ. ನಟರಾಜ