Advertisement

ಜಿಲ್ಲಾ ಮಟ್ಟದಲ್ಲೂ ಅರಸು ಪ್ರಶಸ್ತಿ: ಸಿಎಂ ಬಸವರಾಜ ಬೊಮ್ಮಾಯಿ

11:26 PM Aug 20, 2022 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜನ್ಮದಿನಾಚರಣೆಯನ್ನು ಈ ವರ್ಷದಿಂದ ಜಿಲ್ಲಾ ಮಟ್ಟದಲ್ಲೂ ಆಚರಿಸಲು ಸರಕಾರ ನಿರ್ಧರಿಸಿದೆ.

Advertisement

ಪ್ರಸ್ತುತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯಮಟ್ಟದ ಡಿ. ದೇವರಾಜ ಅರಸು ಪ್ರಶಸ್ತಿ ನೀಡುವಂತೆ, ಈ ವರ್ಷದಿಂದ ಜಿಲ್ಲಾ ಮಟ್ಟದಲ್ಲೂ ಸಾಧಕರಿಗೆ ಅರಸು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶನಿವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ಇಂದು ರಾಜ್ಯದಲ್ಲಿ ದಾಖಲೆ ಪ್ರಮಾಣದ ಆಹಾರ ಉತ್ಪಾದನೆಯಾಗುತ್ತಿದೆ. ಇದಕ್ಕೆ ಹಸುರು ಕ್ರಾಂತಿ ಜತೆಗೆ ನಡೆದ ಭೂ ಕ್ರಾಂತಿ ಕೂಡ ಕಾರಣವಾಗಿದೆ. ಅದರ ಮೂಲಪುರುಷ ದೇವರಾಜ ಅರಸು ಆಗಿದ್ದಾರೆ. ಉಳುವವನಿಗೇ ಭೂಮಿಯ ಒಡೆತನ ನೀಡಿದರು. ಇದರಿಂದ ರೈತರಲ್ಲಿ ಭೂಮಿಯ ಬಗ್ಗೆ ಮತ್ತಷ್ಟು ಪ್ರೀತಿ ಹುಟ್ಟಿತು. ಉತ್ಸಾಹದಿಂದ ದುಡಿದರು. ಆದರೆ ಇತಿಹಾಸಕಾರರು ಇದನ್ನು ಮರೆತಿರು ವುದು ವಿಷಾದಕರ ಸಂಗತಿ ಎಂದು ಹೇಳಿದರು.

ರಾಜ್ಯದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ಸ್ಥಿತಿಗತಿಗಳ ಸುಧಾರಣೆ ಜತೆಗೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲು 250 ಕೋಟಿ ರೂ. ಮಂಜೂರು ಮಾಡಲಾಗುವುದು ಎಂದ ಅವರು, ಈ ಪೈಕಿ ವಿದ್ಯಾರ್ಥಿನಿಲಯಗಳ ಸ್ಥಿತಿಗತಿಗಳ ಸುಧಾರಣೆಗೆ 150 ಕೋಟಿ ರೂ. ಹಾಗೂ ಹೆಚ್ಚಿನ ಸೌಲಭ್ಯ ಒದಗಿಸಲು 100 ಕೋಟಿ ರೂ.ಗಳನ್ನು ಈ ವರ್ಷವೇ ಮಂಜೂರು ಮಾಡಲಾಗುವುದು. ಈ ಸಂಬಂಧ ಶೀಘ್ರ ಆದೇಶ ಹೊರಬೀಳಲಿದೆ ಎಂದರು.

ಪ್ರಶಸ್ತಿ ಪ್ರದಾನ
ಇದೇ ವೇಳೆ ಡಾ| ಎಂ. ಅಣ್ಣಯ್ಯ ಕುಲಾಲ್‌ ಉಳೂ¤ರು ಅವರಿಗೆ “ಡಿ. ದೇವರಾಜ ಅರಸು’ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

ಟೈಲರಿಂಗ್‌ ತರಬೇತಿ ಪುನರಾರಂಭ
ಸ್ಥಗಿತಗೊಂಡಿದ್ದ ಟೈಲರಿಂಗ್‌ ತರಬೇತಿ ಯೋಜನೆಯನ್ನು ಮತ್ತೆ ಆರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಡಿ. ದೇವರಾಜ ಅರಸು ಹೆಸರಿನಲ್ಲಿ ಮಹಿಳೆಯರಿಗೆ ಟೈಲರಿಂಗ್‌ ತರಬೇತಿ ನೀಡುವ ಯೋಜನೆ ಈ ಹಿಂದೆ ಇತ್ತು. ಕಾರಣಾಂತರಗಳಿಂದ ಇದು ಸ್ಥಗಿತಗೊಂಡಿತ್ತು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next