Advertisement

Udupi ರಾಜ್ಯ ಆ್ಯತ್ಲೆಟಿಕ್‌ ಸಂಸ್ಥೆ : ಉಪಾಧ್ಯಕ್ಷರಾಗಿ ಮಹೇಶ್‌ ಠಾಕೂರ್‌ ಆಯ್ಕೆ

12:34 AM Sep 25, 2023 | Team Udayavani |

ಉಡುಪಿ: ಜಿಲ್ಲಾ ಅಮೆಚೂರ್‌ ಆ್ಯತ್ಲೆಟಿಕ್‌ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶ್‌ ಠಾಕೂರ್‌ ಅವರು ರಾಜ್ಯ ಆ್ಯತ್ಲೆಟಿಕ್‌ ಸಂಸ್ಥೆಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರನ್ನು ರಾಜ್ಯ ಗೃಹ ಸಚಿವ ಹಾಗೂ ರಾಜ್ಯ ಆ್ಯತ್ಲೆಟಿಕ್‌ ಅಸೋಸಿಯೇಶನ್‌ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಶ್ಲಾಘಿಸಿದ್ದಾರೆ.

Advertisement

ಮಹೇಶ್‌ ಠಾಕೂರ್‌ 2003ರಲ್ಲಿ ಉಡುಪಿಯಲ್ಲಿ ನಡೆದ ಮೂರು ಜಿಲ್ಲೆಗಳ ಕ್ರೀಡಾಕೂಟದ ಸಂಘಟನ ಕಾರ್ಯದರ್ಶಿಯಾಗಿ, 2011ರಲ್ಲಿ ನಡೆದ ರಾಜ್ಯ ಹಿರಿಯರ ಕ್ರೀಡಾ ಕೂಟದ ಸಂಘಟನ ಸಮಿತಿ ಕಾರ್ಯ ದರ್ಶಿಯಾಗಿ ಮತ್ತು 2019ರ ಆಗಸ್ಟ್‌ ನಲ್ಲಿ ರಾಜ್ಯ ಕಿರಿಯರ ಕ್ರೀಡಾಕೂಟ, ಸೆಪ್ಟಂಬರ್‌ನಲ್ಲಿ ಅಖಿಲ ಭಾರತ ದಕ್ಷಿಣ ವಲಯ ಕ್ರೀಡಾಕೂಟ ಮತ್ತು 2021ರ ಸೆಪ್ಟಂಬರ್‌ನಲ್ಲಿ 23ರ ವಯೋಮಿತಿಯ ಮತ್ತು ಪುರುಷ ಮತ್ತು ಮಹಿಳೆಯರ ವಿಭಾಗದ ಕ್ರೀಡಾಕೂಟ, 2022ರ ಮೇಯಲ್ಲಿ 20ರ ವಯೋಮಿತಿಯ ಮತ್ತು 23 ವಯೋಮಿತಿಯ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌ ಅನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next