Advertisement
ಸೋಮವಾರ ಜಿಎಂಐಟಿ ಆವರಣದ ತಮ್ಮ ಖಾಸಗಿ ಕಚೇರಿಯಲ್ಲಿ ಜನಸಂಪರ್ಕ ಸಭೆಯಲ್ಲಿ ಚನ್ನಗಿರಿ ತಾಲ್ಲೂಕಿನ ಮಲ್ಲಾಪುರ ಗ್ರಾಮ ಪಂಚಾಯತ್ ಸದಸ್ಯರ ನಿಯೋಗದೊಂದಿಗೆ ಮಾತನಾಡುವ ವೇಳೆ ತಮ್ಮ ಅಸಮಾಧಾನ ಹೊರಹಾಕಿರುವ ಸಿದ್ದೇಶ್ವರ್, ಕೇಂದ್ರದ ಬಹುತೇಕ ಯೋಜನೆಗಳಿಗೆ ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ.
Related Articles
Advertisement
ನಾನು ಸ್ವತಃ ಎನ್‌ಜಿಓ ಮೂಲಕ ಈ ಎರಡೂ ಗ್ರಾಮಪಂಚಾಯತಿಗೆ ಒಳಪಡುವ ಗ್ರಾಮಗಳಲ್ಲಿ ಸಮಗ್ರ ಸಮೀಕ್ಷೆ ನಡೆಸಿ, ಕೇಂದ್ರ ಸರ್ಕಾರದ ವಿಮಾ ಯೋಜನೆಗಳನ್ನು ಪ್ರತಿಯೊಬ್ಬರೂ ನೋಂದಾಯಿಸುವಂತೆ ಮನವೊಲಿಸಲಾಗಿದೆ. ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು.
ಮಲ್ಲಾಪುರ ಗ್ರಾಮಪಂಚಾಯತಿಯ ಮಲ್ಲಾಪುರ ಮತ್ತು ಆಲೂರು ಗ್ರಾಮಗಳಲ್ಲಿ ಶಾಲಾ ಕೊಠಡಿ, ಬಸ್ ತಂಗುದಾಣ, ಶಾಲಾ ಕಾಂಪೌಂಡ್, ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ 51 ಲಕ್ಷ ರೂ.ಗಳನ್ನು ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಬಿಡುಗಡೆ ಮಾಡಿದ್ದೇನೆ ಎಂದು ಅವರು ತಿಳಿಸಿದರು.
ನಗರದಂತೆ ಹಳ್ಳಿಗಳೂ ಕೂಡ ಅಭಿವೃದ್ದಿ ಹೊಂದಬೇಕು. ನಗರದ ಕಡೆ ಗ್ರಾಮೀಣರು ವಲಸೆ ಹೋಗುವುದನ್ನು ತಡೆಬೇಕು, ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂಬ ಕಾರಣದಿಂದ ಪ್ರಧಾನ ಮಂತ್ರಿಗಳು ಸಂಸದ ಆದರ್ಶಗ್ರಾಮ ಯೋಜನೆ ರೂಪಿಸಿದ್ದಾರೆ.
ಈ ಯೋಜನೆಯಡಿ ಸರ್ಕಾರಗಳಿಂದ ಮಂಜೂರಾಗುವ ಯೋಜನೆಗಳು ಸಂಸದ ಆದರ್ಶಗ್ರಾಮಗಳಿಗೆ ಮೊದಲು ದೊರೆಯಬೇಕು ಎಂದು ಮಾರ್ಗಸೂಚಿಯನ್ನು ರಚಿಸಲಾಗಿದ್ದರೂ ಕೂಡ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಇಚ್ಚಾಶಕ್ತಿ ಹೊಂದಿಲ್ಲ ಎಂದು ದೂರಿದರು.
ಮಾಜಿ ಶಾಸಕರಾದ ಬಿ.ಪಿ. ಹರೀಶ್, ಮುಖಂಡರಾದ ಮಹಾಬಲೇಶ್ವರ ಗೌಡ್ರು, ಜಿಪಂ ಸದಸ್ಯ ವಾಗೀಶ್ ಸ್ವಾಮಿ, ಮುಖಂಡರಾದ ಟಿ. ಮುಕುಂದ್, ಜಯಪ್ರಕಾಶ್ ಕೊಂಡಜ್ಜಿ, ಹಿಂಡಸಘಟ್ಟೆ ಪರಮೇಶ್ವರಪ್ಪ, ಗೋವಿನಾಳ್ ರಾಜಣ್ಣ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯ್ಯಮ್ಮ, ಜಿಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಮಹೇಶ್ ಇತರರು ಈ ವೇಳೆ ಹಾಜರಿದ್ದರು.