Advertisement
ಕೊರೊನಾ ಆರಂಭದಲ್ಲಿ ಅದನ್ನು ಎದುರಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಪಕ್ಷಾತೀತ ಬೆಂಬಲ ನೀಡಲಾಯಿತು. ಮಾ. 24ರಂದು ಪ್ರಧಾನ ಮಂತ್ರಿಗಳು ಲಾಕ್‌ಡೌನ್ ಘೋಷಣೆ ಮಾಡಿದಾಗ ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಕೇವಲ 564 ಇತ್ತು. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು 21 ದಿನಗಳಲ್ಲಿ ನಾವು ಕೊರೊನಾ ವಿರುದ್ಧ ಜಯಿಸುತ್ತೇವೆ ಎಂದು ಆಶ್ವಾಸನೆ ನೀಡಿದರು. ಜನರು ಚಪ್ಪಳೆ ತಟ್ಟಿದರು, ಜಾಗಟೆ ಬಾರಿಸಿದರು. ಆದರೂ ಸೋಂಕು ನಿಯಂತ್ರಣಕ್ಕೆ ಬಾರದೆಈಗ 12 ಲಕ್ಷ ಮೀರಿದೆ ಎಂದರು.
ಕೊರೊನಾವನ್ನು ಗಂಭೀರವಾಗಿ ಪರಿಗಣಿಸುವಂತೆ ರಾಹುಲ್ ಗಾಂಧಿ ಅವರು ಮೊದಲೇ ಕೇಂದ್ರವನ್ನು ಎಚ್ಚರಿಸಿ ದ್ದರು. ಆಡಳಿತ ಪಕ್ಷವನ್ನು ನಿಷ್ಕ್ರಿಯಗೊಳಿಸುವ ಯಾವ ಉದ್ದೇಶವೂ ನಮಗಿರಲಿಲ್ಲ. ಕೊರೊನಾ ಎದುರಿಸಲು ಕಾಂಗ್ರೆಸ್ ಮುಖಂಡರು ಅನೇಕ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.
ಭ್ರಷ್ಟಾಚಾರ ಖಚಿತ ವೈದ್ಯಕೀಯ ಉಪಕರಣಗಳ ಖರೀದಿ ಯಲ್ಲಿ ರಾಜ್ಯದಲ್ಲಿ ಶೇ. 50ರಷ್ಟು ಹಗರಣ ನಡೆದಿದೆ. ಡಿಕೆಶಿಯವರು ಹಗರಣಗಳ ಬಗ್ಗೆ ಮಾಹಿತಿ ನೀಡುವಂತೆ ಕೇಳಿದಾಗ 24 ಗಂಟೆಯೊಳಗೆ ನೀಡುವುದಾಗಿ ತಿಳಿಸಿದ್ದರು; ಆದರೆ ನೀಡಿಲ್ಲ. ಇಂತಹ ಸಂದರ್ಭ ದಲ್ಲೂ ರಾಜ್ಯ ಸರಕಾರ ಲೂಟಿಗೆ
ಇಳಿದಿರುವುದು ಸರಿಯಲ್ಲ ಎಂದರು. ಮರಳು ಅಕ್ರಮ ಸಾಗಾಟ: ಅಧಿವೇಶನದಲ್ಲಿ ಚರ್ಚೆ
ಕೊರೊನಾವನ್ನು ನೆಪವಾಗಿಟ್ಟುಕೊಂಡು ಬಿಜೆಪಿ ಸರಕಾರವು ಪ್ರತಿಯೊಂದನ್ನೂ ಹರಾಜಿಗಿಟ್ಟಿದೆ. ಭೂಸುಧಾರಣೆ ಕಾನೂನು ನಿಷ್ಕ್ರಿಯ ಮಾಡಿದೆ. ಎಪಿಎಂಸಿ ಆ್ಯಕ್ಟ್ ಬದಲಾಗಿದೆ. ಪೆಟ್ರೋಲ್, ಡೀಸೆಲ್ ದರ ಏರಿಸಲಾಗಿದೆ. ಇದಕ್ಕೂ ಕೊರೊನಾಕ್ಕೂ ಏನು ಸಂಬಂಧ ಎಂದು ದಿನೇಶ್ ಪ್ರಶ್ನಿಸಿದರು. ಕೊರೊನಾ ಲಾಕ್‌ಡೌನ್ ನಡುವೆ ಉಡುಪಿ ಜಿಲ್ಲೆಯಲ್ಲಿ ಸಿಮೆಂಟ್, ಮರಳು ದಂಧೆ ನಡೆದಿದೆ. ಇದರಲ್ಲಿ ಅಧಿಕಾರಿಗಳು ಹಾಗೂ ಶಾಸಕರು ನೇರವಾಗಿ ಶಾಮೀಲಾಗಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿಯೂ ಚರ್ಚೆ ಮಾಡಲಾಗುವುದು. ಜೈಶ್ರೀರಾಮ್ ಹೆಸರು ಹೇಳಿಕೊಂಡು ಬಿಜೆಪಿಯವರು ದೇವರಿಗೆ ಮೋಸ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿಯಿಂದ ಹಿಡಿದು ಆಡಳಿತ ಪಕ್ಷದ ಎಲ್ಲ ಜನಪ್ರತಿನಿಧಿಗಳು ಸುಳ್ಳು ಹೇಳುತ್ತಿದ್ದಾರೆ. ಜನರಿಗೆ ಇದು ಅರ್ಥವಾಗುತ್ತಿದೆ.
– ದಿನೇಶ್ ಗುಂಡೂರಾವ್