Advertisement

Adi Dravida ಮನೆಯಲ್ಲೊಬ್ಬ ಪದವೀಧರ ಸೃಷ್ಟಿಸುವ ಸಂಕಲ್ಪ ಮಾಡಿ: ಸಚಿವ ಡಾ. ಜಿ. ಪರಮೇಶ್ವರ್‌

11:08 PM Dec 24, 2023 | Team Udayavani |

ಮಂಗಳೂರು: ಒಂದು ಹೊತ್ತು ಊಟ ಬಿಟ್ಟರೂ ಪರವಾಗಿಲ್ಲ, ಮನೆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಪ್ರತಿ ಮನೆಯಲ್ಲಿ ಒಬ್ಬರು ಪದವೀಧರ ಇರಬೇಕು ಎನ್ನುವ ಸಂಕಲ್ಪ ಮಾಡಬೇಕು ಎಂದು ಗೃಹಸಚಿವ ಡಾ| ಜಿ. ಪರಮೇಶ್ವರ್‌ ಹೇಳಿದರು.

Advertisement

ರಾಜ್ಯ ಆದಿದ್ರಾವಿಡ ಸಮಾಜ ಸೇವಾಸಂಘದ ವತಿಯಿಂದ ನಗರದಲ್ಲಿ ರವಿವಾರ ನಡೆದ ರಾಜ್ಯ ಆದಿದ್ರಾವಿಡ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾನೂ ಆದಿ ದ್ರಾವಿಡ
ನಾನೂ ಆದಿ ದ್ರಾವಿಡ ಸಮುದಾಯಕ್ಕೆ ಸೇರಿದವನು. ಇಷ್ಟು ದಿನ ನಾವು ಘಟ್ಟದ ಮೇಲೆ – ನೀವು ಘಟ್ಟದ ಕೆಳಗೆ ಪ್ರತ್ಯೇಕವಾಗಿದ್ದೆವು. ನೀವು ಅಲ್ಲಿಗೆ ಬಂದಿಲ್ಲ – ನಾವು ಇಲ್ಲಿಗೆ ಬಂದಿಲ್ಲ. ಆದರೆ ಇಂದು ನಮ್ಮ ಸಂಬಂಧ ಗಟ್ಟಿಯಾಗಿದೆ. ರಾಜ್ಯದಲ್ಲಿರುವುದು ನಿಮ್ಮ ಸಮುದಾಯಕ್ಕೆ ಸೇರಿದ ಗೃಹ ಸಚಿವ. ಇನ್ಮುಂದೆ ನಿಮ್ಮ ಸಮಸ್ಯೆಯೇ ನನ್ನ ಸಮಸ್ಯೆ ಎಂದರು.

ವಿ.ಸಭೆಯಲ್ಲಿ ಧ್ವನಿ: ಕಾಮತ್‌
ಸಮಾವೇಶ ಉದ್ಘಾಟಿಸಿದ ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿ, ಆದಿ ದ್ರಾವಿಡ ಸಮುದಾಯದವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಧ್ವನಿಯಾಗುವೆ ಎಂದರು.

ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಬಳ್ಳಾಲ್ ಬಾಗ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಭಾಗೀರಥಿ ಮುರುಳ್ಯ, ಹರೀಶ್‌ ಪೂಂಜ, ವಿಧಾನ ಪರಿಷತ್‌ ಸದಸ್ಯರಾದ ಹರೀಶ್‌ ಕುಮಾರ್‌, ಮಂಜುನಾಥ ಭಂಡಾರಿ, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ವಿಪಕ್ಷ ನಾಯಕ ಪ್ರವೀಣ್‌ ಚಂದ್ರ ಆಳ್ವ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಜೆ.ಆರ್‌.ಲೋಬೋ, ವಿಧಾನ ಪರಿಷತ್‌ ಮಾಜಿ ಸದಸ್ಯ ಐವನ್‌ ಡಿ’ಸೋಜಾ, ಕಾಂಗ್ರೆಸ್‌ ಮುಖಂಡರಾದ ಮಿಥುನ್‌ ರೈ, ಯು.ಟಿ. ಇಫ್ತಿಕರ್‌ ಅಲಿ ಮುಂತಾದವರು ಉಪಸ್ಥಿತರಿದ್ದರು.

Advertisement

ರಾಜ್ಯ ಸಂಘಟನ ಸಂಚಾಲಕ ಪ್ರೇಮನಾಥ ಬಳ್ಳಾಲ್‌ಬಾಗ್‌ ಸ್ವಾಗತಿಸಿದರು. ಉಸ್ತುವಾರಿ ಗಣೇಶ್‌ ಪ್ರಸಾದ್‌ ಪ್ರಸ್ತಾವಿಸಿದರು. ರೋಹಿತ್‌ ಉಳ್ಳಾಲ್ ನಿರೂಪಿಸಿದರು.

ನಿಗಮ ಮಂಡಳಿಗೆ ಅಧ್ಯಕ್ಷಗಿರಿ
ಸಮುದಾಯದ ಪ್ರಮುಖ ಬೇಡಿಕೆಯಾಗಿರುವ ತೋಡಾರು ಮೂಲ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಸಂಬಂಧಿಸಿ ಬೇಕಾದ ಅನುದಾನನ್ನು ಸಿಎಂ ಮನವೊಲಿಸಿ ಮುಂದಿನ ಬಜೆಟ್‌ನಲ್ಲಿ ಸರಕಾರದಿಂದ ಕೊಡಿಸುವುದಕ್ಕೆ ಪ್ರಯತ್ನ ಮಾಡುತ್ತೇನೆ. ಯಾವುದಾದರೂ ನಿಗಮ ಮಂಡಳಿಗೆ ಆದಿದ್ರಾವಿಡ ಸಮುದಾಯದ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲಾಗುವುದು. ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆಯನ್ನು ಸರಿಪಡಿಸಲಾಗುವುದು. ವಸತಿ ಯೋಜನೆಗೆ ಸರಕಾರಿ ಜಾಗವನ್ನು ಮೀಸಲಾಗಿಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಪರಮೇಶ್ವರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next