Advertisement

ರೈತ ಸಂಪರ್ಕ ಕೇಂದ್ರ ಕಟ್ಟಡ ಕಾಮಗಾರಿಗೆ ಚಾಲನೆ

12:38 PM Nov 11, 2019 | Suhan S |

ಅಥಣಿ: ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ 52 ಲಕ್ಷ ರೂ.ಗಳ ವಿಶೇಷ ಅನುದಾನದಲ್ಲಿ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿಗೆ ಡಿಸಿಎಂ, ಕೃಷಿ ಸಚಿವ ಲಕ್ಷ್ಮಣ ಸವದಿ ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿದ ಅವರು, ಅಥಣಿ ತಾಲೂಕಿನ ರೈತರಿಗೆ ವಿಶೇಷ ಅನುದಾನದಲ್ಲಿ ಹನಿ ನೀರಾವರಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಸರಕಾರ 9 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ನಮ್ಮ ಭಾಗದ ರೈತರು ತಮ್ಮ ಜಮೀನುಗಳಲ್ಲಿ ನೀರು ಪೋಲಾಗದಂತೆ ಕ್ರಮ ವಹಿಸಬೇಕು. ರೈತರು ತಮ್ಮ ಜಮೀನುಗಳಲ್ಲಿ ಅತೀ ನೀರಾವರಿ ಮಾಡಿದ್ದರಿಂದ ಸವಳು-ಜವಳು ಆಗಿ ತಮ್ಮ ಭೂಮಿಯ ಫಲವತ್ತತೆ ಕಳೆದುಕೊಂಡಿದ್ದು, ಸರಕಾರ ನೀರು ಪೋಲಾಗದಂತೆ ಹನಿ ನೀರಾವರಿಗಾಗಿ 9 ಕೋಟಿ ರೂ.ಗಳಷ್ಟು ಹಣವನ್ನು ಮಂಜೂರು ಮಾಡಿದೆ. ಅರ್ಹ ರೈತರು ಅಥಣಿ ಕೃಷಿ ಇಲಾಖೆಗೆ ಅರ್ಜಿಗಳನ್ನು ಸಲ್ಲಿಸಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. ಚಿಕ್ಕೋಡಿ ಜಿಲ್ಲಾ ಉಪನಿರ್ದೇಶಕ ಎಲ್‌.ಐ. ರೂಢಗಿ, ಅಥಣಿ ಸಹಾಯಕ ನಿರ್ದೇಶಕಿ ಜಯಶ್ರೀ ಹಿರೇಮಠ, ಮುಖಂಡರಾದ ವಿಶ್ವನಾಥ ಗಣಿ, ವಿಜಯ ಮಂಗಸೂಳಿ, ಸಿಬ್ಬಂದಿ ರಮೇಶ ಚೌಗಲಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next