Advertisement

ಇ-ಲೋಕ್‌ ಅದಾಲತ್‌ ಆರಂಭ

01:54 PM Aug 31, 2020 | Suhan S |

ಶಿಡ್ಲಘಟ್ಟ: ಕೋವಿಡ್‌ -19 ಎಲ್ಲೆಡೆ ವ್ಯಾಪಕವಾಗಿ ಹರಡಿರುವುದರಿಂದ ಸಾರ್ವಜನಿಕರಿಗೆ ನ್ಯಾಯ ನೀಡಲು ಇ – ಲೋಕ್‌ ಅದಾಲತ್‌ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ತಿಳಿಸಿದರು.

Advertisement

ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಇ-ಲೋಕ ಅದಾಲತ್‌ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, ಕೋವಿಡ್‌ ಸಂದರ್ಭದಲ್ಲಿ ವಕೀಲರಿಗೆ ಆದಾಯ ಇರುವುದಿಲ್ಲ. ಆದ್ದರಿಂದ ಇಂತಹ ಅದಾಲತ್‌ ನಿಂದ ಸಾರ್ವಜನಿಕ ಪ್ರಕರಣಗಳು ಇತ್ಯರ್ಥ ಮಾಡುವುದರಿಂದಾಗಿ ಸಾರ್ವಜನಿಕರಿಗೆ ಸಹಾಯವಾಗುತ್ತದೆ ಹಾಗೂ ವಕೀಲರಿಗೆ ಆದಾಯ ಬರುತ್ತದೆ ಎಂದು ಹೇಳಿದರು.

ಇ-ಲೋಕ ಅದಾಲತ್‌ನ ಉಪಯೋಗ ಪ್ರತಿ ಜಿಲ್ಲೆ ಮತ್ತು ತಾಲೂಕಿನ ಸಾರ್ವಜನಿಕರಿಗೆ ತಲುಪಬೇಕು, ಸಾರ್ವಜನಿಕರು ತಮ್ಮ ಮೊಬೆ„ಲ್‌ ಮೂಲಕ ನ್ಯಾಯಾಧೀಶರ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದು ಎಂದರು.

ಇ ಲೋಕ್‌ ಅದಾಲತ್‌ ಎಂದರೆ ವಾದಿ ಪ್ರತಿವಾದಿಗಳು ಮತ್ತು ಅವರ ಪರ ವಕೀಲರು ತಮ್ಮ ಕಚೇರಿ ಅಥವಾ ಮನೆಗಳಿಂದ ನ್ಯಾಯಾಲಯದಿಂದ ಒದಗಿಸಲಾಗುವ ಲಿಂಕ್‌ ಮೂಲಕ ವೀಡಿಯೋ ಕಾನ್ಫರೆನ್ಸ್‌ಗೆ ಸೇರ್ಪಡೆಯಾಗಬೇಕು. ಒಂದು ವೇಳೆ ತಾಂತ್ರಿಕ ಲೋಪದೋಷಗಳು ಕಂಡುಬಂದಲ್ಲಿ, ಕರೆ ಮಾಡುವ ಮೂಲಕ ತಮ್ಮ ವಾದ ಮತ್ತು ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು. ಜಿಲ್ಲಾ ಹೆಚ್ಚುವರಿ ನ್ಯಾ. ಬಿ.ಸಿ.ಭಾನುಮತಿ, ಹಿರಿಯ ಸಿವಿಲ್‌ ನ್ಯಾ.ಎಚ್‌.ದೇವರಾಜ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next