Advertisement

ರವಿ ಶ್ರೀವತ್ಸ ನಿರ್ದೇಶನದ ಎಂಆರ್‌ ಚಿತ್ರಕ್ಕೆ ಆರಂಭದಲ್ಲೇ ವಿಘ್ನ

12:55 PM Dec 21, 2020 | Suhan S |

ಇತ್ತೀಚೆಗಷ್ಟೇ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಜೀವನ ಆಧಾರಿತ ಸಿನಿಮಾ “ಎಂಆರ್‌’ ಎನ್ನುವ ಹೆಸರಿನಲ್ಲಿ ಮುಹೂರ್ತವನ್ನು ಆಚರಿಸಿಕೊಂಡಿದ್ದು ಗೊತ್ತಿರಬಹುದು. ಆರಂಭದಲ್ಲೇ ಭರ್ಜರಿಯಾಗಿ ಫೋಟೋಶೂಟ್‌ ನಡೆಸಿದ್ದ ಚಿತ್ರತಂಡ, “ಎಂಆರ್‌’ ಮುಹೂರ್ತವನ್ನೂ ಕೂಡ ಅದ್ಧೂರಿಯಾಗಿ ನಡೆಸಿತ್ತು. ನಿರ್ದೇಶಕ ರವಿ ಶ್ರೀವತ್ಸ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನಮಾಡುತ್ತಿರುವ ಈ ಚಿತ್ರಕ್ಕೆಈಗ ಆರಂಭದಲ್ಲಿಯೇ ವಿಘ್ನ ಎದುರಾಗಿದೆ.

Advertisement

ಮುತ್ತಪ್ಪ ರೈ ಅವರ ಜೀವನಾಧಾರಿತಚಿತ್ರವನ್ನು ನಾನೇ ನಿರ್ಮಿಸಬೇಕಿದೆ ಎಂದು ನಿರ್ಮಾಪಕ ಎಲ್‌. ಪದ್ಮನಾಭ ಹೇಳಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಎಲ್‌. ಪದ್ಮನಾಭ, “ನಾನು ವಿದೇಶದಲ್ಲಿದ್ದಕಾರಣ, ನನ್ನ ಗಮನಕ್ಕೆ ಬಾರದೆ, “ಎಂಆರ್‌’ ಸಿನಿಮಾ ಮುಹೂರ್ತ ಆಗಿದೆ. ಮುತ್ತಪ್ಪ ರೈ ಕುರಿತ ಚಿತ್ರವನ್ನು ನಾನೇ ನಿರ್ಮಿಸಬೇಕಿದೆ. ಈಗಾಗಲೇ ಈ ಹಿಂದೆ ಈ ಬಗ್ಗೆ ಒಂದು ಪತ್ರಿಕಾಗೋಷ್ಟಿಯನ್ನೂ ನಾನು ಮಾಡಿದ್ದೆ. ಮುತ್ತಪ್ಪ ರೈ ಬದುಕಿದ್ದಾಗಲೇ ಬಹುಭಾಷೆಯಲ್ಲಿ ಈ ಸಿನಿಮಾ ಮಾಡುವ ಬಗ್ಗೆ ಚರ್ಚೆಯಾಗಿತ್ತು. ರಾಮ್‌ ಗೋಪಾಲ್‌ ವರ್ಮಾ ಹಿಂದೆ ಸರಿದ ಬಳಿಕ ನಾನೇ ನಮ್ಮ “ಎಂಆರ್‌’ ಬ್ಯಾನರ್‌ನಲ್ಲಿ ಈ ಸಿನಿಮಾವನ್ನು ಬಹುಭಾಷೆಯಲ್ಲಿ ನಿರ್ಮಾಣ ಮಾಡುವ ಬಗ್ಗೆ ಪ್ರಕ್ರಿಯೆ ಈ ಮೊದಲೇ ಶುರುವಾಗಿತ್ತು.  ನನ್ನ “ಎಂಆರ್‌ ಪಿಕ್ಚರ್’ ಸಂಸ್ಥೆಯನ್ನು ಹುಟ್ಟುಹಾಕಿದ್ದೆ ಅದರ ಸಲುವಾಗಿ. ಅಷ್ಟೇ ಅಲ್ಲ, ಮುತ್ತಪ್ಪ ರೈ ಬಗ್ಗೆ ಸಿನಿಮಾ ಕೈಗೆತ್ತಿಕೊಂಡರೆ ಅದಕ್ಕೆ ಅನುಮತಿ ಪಡೆಯಲೇಬೇಕಿದೆ’ ಎಂದಿದ್ದಾರೆ.

ಇದನ್ನೂ ಓದಿ : ರಾಬರ್ಟ್‌ ಸಿನಿಮಾ ನಿರ್ಮಾಪಕರ ಹತ್ಯೆಗೆ ಸಂಚು: ಏಳು ಮಂದಿ ಸೆರೆ

“ಈಗಾಗಲೇ ನಿರ್ದೇಶಕ ರವಿ ಶ್ರೀವತ್ಸ ಮುತ್ತಪ್ಪ ರೈ ಸಿನಿಮಾ ಘೋಷಣೆ ಮಾಡಿ, ಮುಹೂರ್ತವನ್ನೂ ಮಾಡಿಕೊಂಡಿದ್ದಾರೆ. ಆ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರೊಂದಿಗೆ ಸಿನಿಮಾಕೈಬಿಡುವಂತೆ ಚರ್ಚೆ ಮಾಡಿದ್ದೇನೆ. ಅವರಿಂದಲೂ ಸಮ್ಮತಿ ಸಿಕ್ಕಿದೆ.ಕೊಂಚ ಕಾಲಾವಕಾಶವನ್ನೂಕೇಳಿದ್ದಾರೆ. ಅವರು ಕೈಬಿಟ್ಟ ಬಳಿಕ ಅವರ ಸಿನಿಮಾ ಕಥೆ ಕೇಳುತ್ತೇನೆ. ಒಬ್ಬ ನಿರ್ಮಾಪಕನಾಗಿ ಮತ್ತೂಬ್ಬ ನಿರ್ಮಾಪಕನ ಸಮಸ್ಯೆ ನನಗೆ ಗೊತ್ತು. ಹಾಗಾಗಿ, ಶೂಟಿಂಗ್‌ ಶುರುವಾಗುವುದಕ್ಕೂಮುನ್ನ ಅವರ ಗಮನಕ್ಕೆ ತರುವುದು ಒಳಿತು ಎನ್ನುವಕಾರಣಕ್ಕೆ ಅವರೊಂದಿಗೆಚರ್ಚಿಸಿದ್ದೇನೆ. ಇನ್ನುಕೆಲ ದಿನಗಳ ಬಳಿಕ ಆ ಚಿತ್ರವನ್ನು ನಾನೇ ಘೋಷಣೆ ಮಾಡಲಿದ್ದೇನೆ. “ಎಂಆರ್‌ ಪಿಕ್ಚರ್’ ಬ್ಯಾನರ್‌ನಲ್ಲಿ ನಾನೇ ಈ ಸಿನಿಮಾ ನಿರ್ಮಾಣ ಮಾಡಲಿದ್ದೇನೆ.’ ಎಂದಿದ್ದಾರೆ ಎಲ್‌. ಪದ್ಮನಾಭ.

Advertisement

Udayavani is now on Telegram. Click here to join our channel and stay updated with the latest news.

Next