Advertisement

ಬಸ್‌ ಆದ್ಯತಾ ಪಥಕ್ಕೆ ಆರಂಭದಲ್ಲೇ ವಿಘ್ನ

10:47 AM Nov 01, 2019 | Team Udayavani |

ಬೆಂಗಳೂರು: ಬಹುನಿರೀಕ್ಷಿತ “ಬಸ್‌ ಆದ್ಯತಾ ಪಥ’ (ಬಿಪಿಎಲ್‌)ಕ್ಕೆ ಆರಂಭ  ದಲ್ಲೇ ವಿಘ್ನ ಎದುರಾಗಿದ್ದು, ಅನಿವಾರ್ಯ ವಾಗಿ ನವೆಂಬರ್‌ 1ರ ಬದಲಿಗೆ 15ಕ್ಕೆ ಮುಂದೂಡಲ್ಪಟ್ಟಿದೆ.

Advertisement

ಕನ್ನಡ ರಾಜ್ಯೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಇದಕ್ಕೆ ಸಂಬಂಧಿಸಿದ ಮೂಲ ಸೌಕರ್ಯಗಳು ಇನ್ನೂ ಸಿದ್ಧಗೊಂಡಿಲ್ಲ. ಅಲ್ಲದೆ, ಈಗಾಗಲೇ ಅಳವಡಿ ಸಿರುವ ಬೊಲಾರ್ಡ್‌ಗಳು ಅಪಘಾತಗಳಿಂದ ಹಾಳಾಗಿರುವುದರಿಂದ ಎರಡು ವಾರಗಳ ಮಟ್ಟಿಗೆ ಈ ಯೋಜನೆಯ ಉದ್ಘಾಟನೆಯನ್ನು ಮುಂದೂಡಲಾಗಿದೆ. ಹಾಗಾಗಿ, ನವೆಂಬರ್‌ 15ರಂದು ಚಾಲನೆ ದೊರೆಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬಸ್‌ ಸಂಚಾರಕ್ಕೆ ಮೀಸಲಿಟ್ಟ ಪಥದ ಅಗಲ 3.5 ಮೀ. ಈ ಮಾರ್ಗದಲ್ಲಿ 18 ಕಿ.ಮೀ. ಬಸ್‌ಗಳು ಸಂಚರಿಸಬೇಕು. ಇದಕ್ಕಾಗಿ ರಸ್ತೆಯ ಒಂದು ಬದಿಯಲ್ಲಿ ಬೊಲಾರ್ಡ್‌ಗಳ ಅಳವಡಿಕೆ, ಥರ್ಮೋ  ಪ್ಲಾಸ್ಟಿಕ್‌ ಪೇಂಟಿಂಗ್‌, ಸೈನೇಜ್‌ಗಳನ್ನು ಹಾಕುವ ಕಾರ್ಯ ಆಗಬೇಕಾಗಿದೆ. ಮಳೆಯಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. 15ರಂದು ಈ ಯೋಜನೆಗೆ ಅಧಿಕೃತ ಚಾಲನೆ ದೊರೆಯಲಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಸೇವೆ ಆರಂಭಗೊಂಡಿದೆ: ಅಧಿಕೃತವಾಗಿ ಚಾಲನೆ ದೊರೆಯದಿರಬಹುದು. ಆದರೆ, ಅ. 20ರಿಂದಲೇ ಆದ್ಯತಾ ಪಥದಲ್ಲಿ ಬಸ್‌ಗಳು ಕಾರ್ಯಾಚರಣೆ ಮಾಡಲು ಆರಂಭಿಸಿವೆ. ನಿತ್ಯ 800ಕ್ಕೂ ಅಧಿಕ ಬಸ್‌ಗಳು ಸಾವಿರಾರು ಟ್ರಿಪ್‌ ಗಳಲ್ಲಿ ಇಲ್ಲಿ ಸಂಚರಿಸುತ್ತಿವೆ. ಆದ್ಯತಾ ಪಥದ ಶಿಸ್ತು ಪಾಲನೆ ಹಾಗೂ ಉಲ್ಲಂ   ಸುವವರ ಪತ್ತೆಗೆ ವಿಶೇಷ ಕ್ಯಾಮೆರಾಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ನಿರ್ವಹಣೆಗೆ ಎರಡೂ ಮಾರ್ಗಗಳಲ್ಲಿ 54 ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುಂದಿನ ದಿನ ಗಳಲ್ಲಿ ಮಾರ್ಗ

ದುದ್ದಕ್ಕೂ ಸಂಚಾರ ಪೊಲೀಸರು ಕೂಡ ಕ್ಯಾಮೆರಾ ಸೇರಿ ದಂತೆ ಹಲವು ರೀತಿಯ ಪೂರಕ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸುತ್ತಿದ್ದಾರೆ. ಎರಡು ವಾರಗಳಲ್ಲಿ ಅಧಿಕೃತವಾಗಿ ಆರಂಭಗೊಳ್ಳಲಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next