Advertisement

ಕುಡ್ತೇರಿ ಶ್ರೀ ಮಹಾಮಾಯಾ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಆರಂಭ

10:19 AM May 09, 2018 | Team Udayavani |

ಮಹಾನಗರ: ಜಿಲ್ಲೆಯ ಅತೀ ಪ್ರಾಚೀನ ಜಿ.ಎಸ್‌.ಬಿ. ಸಮುದಾಯದ ಪ್ರಸಿದ್ಧ ದೇವಾಲಯವಾದ ಮಂಗಳೂರು ಕುಡ್ತೇರಿ ಶ್ರೀ ಮಹಾಮಾಯಾ ದೇವಸ್ಥಾನದ ಜೀರ್ಣೋದ್ಧಾರ ಯೋಜನೆಯ ಅಂಗವಾಗಿ ಅಗ್ರಸಾಲೆ ನಿರ್ಮಾಣದ ಶಿಲಾನ್ಯಾಸವು ವೈಶಾಖ ಶುದ್ಧ ಹುಣ್ಣಿಮೆಯ ದಿನದಂದು ನೆರವೇರಿತು. ಶ್ರೀ ದೇಗುಲ ಮೊಕ್ತೇಸರರು, ಕುಳಾವಿಗಳು ಹಾಗೂ ಭಜಕ ಮಹಾಜನರು ಭಾಗವಹಿಸಿದ್ದರು.

Advertisement

ಸಮಾಜದ ಹಿರಿಯರುಗಳಾದ ವೇ| ಮೂ| ಎಂ. ರಘುನಾಥ್‌ ಭಟ್‌, ಸಿಎ ಎಸ್‌.ಎಸ್‌. ಕಾಮತ್‌, ಮರ್ಕಡ್‌ ಮಂಜುನಾಥ ಕಾಮತ್‌, ಜಿ.ವಿ. ಕಾಮತ್‌ ಹಾಗೂ ನಿಡ್ಡೋಡಿ ಉಮಾನಾಥ್‌ ನಾಯಕ್‌, ಟ್ರಸ್ಟಿಗಳಾದ ಪ್ರಕಾಶ್‌ ಕಾಮತ್‌ ಹಾಗೂ ಸುರೇಂದ್ರ ಕಾಮತ್‌ ಮೊದಲಾದವರು ಉಪಸ್ಥಿತರಿದ್ದರು.

ವೇ| ಮೂ| ಡೊಂಗರಕೇರಿ ರಾಮ ಚಂದ್ರ ಭಟ್‌ ಅವರು ಶುಭಾಶಂಸನೆಗೈದರು. ಶ್ರೀ ದೇವಳದ ಪುರೋಹಿತರು ಹಾಗೂ ಅರ್ಚಕರು ಸೇರಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ದೇಣಿಗೆ ಸಮರ್ಪಣೆ
ಈ ಅಭಿವೃದ್ಧಿ ಯೋಜನೆಗೆ ಭಜಕರಿಂದ ದೇಣಿಗೆ ಸಮರ್ಪಣೆ ಈಗಾಗಲೇ ಪ್ರಾರಂಭಗೊಂಡಿದ್ದು, ಎಲ್ಲ ಭಜಕ ಮಹಾಜನರ ತನುಮನ ಧನಗಳ ಸಹಕಾರವನ್ನು ಕೋರಲಾಗಿದೆ ಎಂದು ಆಡಳಿತ ಮಂಡಳಿಯ ಮೊಕ್ತೇಸರ ಟಿ. ಗೋವಿಂದ ಪೈ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ. ಎ. ಶ್ರೀನಿವಾಸ್‌ ಎಸ್‌. ಕಾಮತ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next