Advertisement

ಕೊಪ್ಪರಿಗೆ ಏರುವುದರೊಂದಿಗೆ ಚಂಪಾಷಷ್ಠಿ ಆರಂಭ 

01:29 PM Dec 05, 2018 | |

ಸುಬ್ರಹ್ಮಣ್ಯ: ಕಾರ್ತಿಕ ಬಹುಳ ದ್ವಾದಶಿ ಬುಧವಾರ ಪೂರ್ವಶಿಷ್ಠ ಸಂಪ್ರದಾಯದಂತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೊಪ್ಪರಿಗೆ ಏರುವ ಕಾರ್ಯ ನಡೆಯಿತು. ಪೂರ್ವಾಹ್ನದ ಬೆಳಗ್ಗೆ 7.10ರ ಉದಯ ಲಗ್ನದಲ್ಲಿ ದೇಗುಲದ ಪ್ರಧಾನ ಅರ್ಚಕ ವೇ|ಮೂ| ಸೀತಾರಾಮ ಎಡಪಡಿತ್ತಾಯರು ವೈದಿಕ ವಿಧಿ- ವಿಧಾನಗಳನ್ನು ನೆರವೇರಿಸಿದರು.

Advertisement

ರಾಮ – ಲಕ್ಷ್ಮಣ ಹೆಸರಿನ ಜೋಡಿ ಅನ್ನದ ಕೊಪ್ಪರಿಕೆಗೆ ವಿಶೇಷ ಪೂಜೆ ಸಲ್ಲಿಸಿ, ದೇಗುಲದ ಒಳಾಂಗಣದಲ್ಲಿ ದೊಡ್ಡದಾದ ಎರಡು ಒಲೆಗಳ ಮೇಲೆ ಏರಿಸಲಾಯಿತು. ಕೊಪ್ಪರಿಗೆಗಳಲ್ಲಿ ಅನ್ನ ಬೆಂದ ಬಳಿಕ ಅದಕ್ಕೆ ಪೂಜೆ ಸಲ್ಲಿಸಲಾಯಿತು. ಅನ್ನದಾನ ಕ್ಷೇತ್ರವೆಂದು ಪ್ರಸಿದ್ಧವಾಗಿರುವ ಶ್ರೀ ಕ್ಷೇತ್ರದಲ್ಲಿ ಜಾತ್ರೆಯ ಸಂದರ್ಭದಲ್ಲಿ ವಿಶೇಷ ಅನ್ನದಾನ ನಿರಂತರವಾಗಿ ನಡೆಯುವುದು.

ಇಂದಿನಿಂದ ವಿಶೇಷ ಕೊಪ್ಪರಿಗೆ ಅನ್ನದ ಪ್ರಸಾದ ಭೋಜನ ಭಕ್ತರಿಗೆ ವಿತರಣೆಯಾಗಲಿದೆ. ಇದು ಶ್ರೀ ದೇವರ ಅತ್ಯಮೂಲ್ಯ ಪ್ರಸಾದಗಳಲ್ಲಿ ಒಂದು. ಕೊಪ್ಪರಿಗೆ ಏರುವುದರೊಂದಿಗೆ ಸಂಭ್ರಮದ ವಾರ್ಷಿಕ ಜಾತ್ರೆ ಕೂಡ ಆರಂಭಗೊಂಡಿದೆ.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್‌., ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸದಸ್ಯರಾದ ಬಾಲಕೃಷ್ಣ ಬಳ್ಳೇರಿ, ಕೃಷ್ಣಮೂರ್ತಿ ಭಟ್‌, ದಮಯಂತಿ ಕೀಜುಗೋಡು, ದೇವಸ್ಥಾನದ ಸಿಬಂದಿ ಹಾಗೂ ಭಕ್ತರು ಉಪಸ್ಥಿತರಿದ್ದರು.

ಹೊರೆಕಾಣಿಕೆ ಸಮರ್ಪಣೆ
ಚಂಪಾಷಷ್ಠಿ ಪ್ರಯುಕ್ತ ದೇಗುಲದ ಆಡಳಿತ ಮಂಡಳಿಯ ವಿಶೇಷ ಆಸಕ್ತಿಯಿಂದ ನಡೆದ ಹಸುರು ಕಾಣಿಕೆ ಸಮರ್ಪಣೆ ಕಾರ್ಯಕ್ರಮದಲ್ಲಿ ಹಲವು ಮಂದಿ ಭಕ್ತರು ಹೊರೆ ಕಾಣಿಕೆ ತಂದು ಅರ್ಪಿಸಿದರು. ಭಕ್ತರು ಸೀಯಾಳ, ಬಾಳೆಗೊನೆ, ಅಕ್ಕಿ, ಅಡಿಕೆ ಗೊನೆ, ತರಕಾರಿ ಇತ್ಯಾದಿ ಹೊರೆ ಕಾಣಿಕೆಗಳನ್ನು ದೇವಸ್ಥಾನಕ್ಕೆ ತಂದು ಒಪ್ಪಿಸಿದರು. ಡಿ. 6ರ ತನಕ ಅರ್ಪಿಸಲು ಅವಕಾಶವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next