Advertisement

ಸರ್ವಜ್ಞ ಹೆಸರಲ್ಲಿ ವಿವಿ ಆರಂಭಿಸಿ

02:39 PM Feb 21, 2017 | |

ಕಲಬುರಗಿ: ಏಕವ್ಯಕ್ತಿಯಾಗಿ ವಿವಿಗಳ ಕಲ್ಪನೆಯನ್ನು ಸಾಕಾರ ಮಾಡಿ ವಿಶ್ವ ಸಾಹಿತ್ಯದಲ್ಲಿ ಸರ್ವಜ್ಞನಿಗೆ ಸಲ್ಲುತ್ತದೆ. ಆದ್ದರಿಂದ ರಾಜ್ಯದಲ್ಲಿ ಸರ್ವಜ್ಞನ ಹೆಸರಿನಲ್ಲಿ ವಿವಿ ಆರಂಭಿಸಬೇಕು ಎಂದು ಶಹಾಪುರದ ವೈದ್ಯಬಸವರಾಜ ಇಜೇರಿ ಹೇಳಿದರು. 

Advertisement

ಜಿಲ್ಲಾಡಳಿತ, ಕನ್ನಡ ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಮತ್ತು ಸರ್ವಜ್ಞ ಜಯಂತ್ಯುತ್ಸವ ಸಮಿತಿ ವತಿಯಿಂದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ತ್ರಿಪದಿ ಕವಿ ಸರ್ವಜ್ಞ ಜಯಂತಿಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. 

ಸರ್ವಜ್ಞ ನಡೆದಾಡುವ ವಿಶ್ವ ವಿದ್ಯಾಲಯದ ಎಂದೇ ಖ್ಯಾತಿ ಪಡೆದವರು. ಇಂದಿನ ಜಾಗತೀಕರಣದ ದಿನಗಳಲ್ಲಿ ಸರ್ವಜ್ಞ ಅವರ ವಚನಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಒಂದು ಉತ್ತಮವಾದ ಹಾಗೂ ಭದ್ರ ಬದುಕಿನ ಆಸೆಯನ್ನು ಜೀವಂತವಾಗಿರುವ ಸಮಾಜ ನಿರ್ಮಿಸಲು ಸಾಧ್ಯ ಎಂದು ಹೇಳಿದರು. 

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ, ಸರ್ವಜ್ಞರ ವಚನಗಳ ಅಧ್ಯಯನದಿಂದ ಜ್ಞಾನದ ಬೆಳವಣಿಗೆಯಾಗುತ್ತದೆ. ಜೀವನದ ಮೌಲ್ಯಗಳ ಅರ್ಥವಾಗುತ್ತದೆ. ಇದರಿಂದ ಉತ್ತಮ ಪರಿಸರ ಹಾಗೂ ಸಮಾಜ ನಿರ್ಮಾಣ ಮಾಡಿಕೊಂಡು ಸಂಘಜೀವಿಯಾಗಿ ಬದುಕುವುದು ಸಾಧ್ಯ ಎಂದು ಹೇಳಿದರು.

ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ ಅಧ್ಯಕ್ಷತೆ ವಹಿಸಿದ್ದರು. ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ಶಿವಶರಣಪ್ಪ ಕುಂಬಾರ, ರೇಣುಕಾ ನಂದಕುಮಾರ ಕುಂಬಾರ, ನಂದಕುಮಾರ, ಕುಂಬಾರ ನೌಕರರ ಸಂಘದ ಅಧ್ಯಕ್ಷ  ಭೀಮಾಶಂಕರ ಕುಂಬಾರ, ಹೈ.ಕ. ವಿಭಾಗದ ಉಪಾಧ್ಯಕ್ಷನಾರಾಯಣ ಯಾನಾಗುಂದಿ, ಕುಂಬಾರ ಸಮಾಜದ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. 

Advertisement

ಸಂಗಣ್ಣ ಮತ್ತು ಸಂಗಡಿಗರು ಸಂಗೀತ ಸೇವೆ ಸಲ್ಲಿಸಿದರು. ಕನ್ನಡ ಮತ್ತು ಸಂಸ್ಖ„ತಿ ಇಲಾಖೆ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು. ಸಮಾರಂಭಕ್ಕೂ ಮೊದಲು ನಗರೇಶ್ವರ ದೇವಸ್ಥಾನದಿಂದ ರಂಗಮಂದಿರದ ವರೆಗೆ ತ್ರಿಪದಿ ಕವಿ ಸರ್ವಜ್ಞರ ಭಾವಚಿತ್ರದ ಆಕರ್ಷಕ ಮೆರವಣಿಗೆ ನಡೆಯಿತು. ಚಿಕ್ಕಮಗಳೂರಿನ ತಿಪ್ಪೇಸ್ವಾಮಿ ಅವರ ಗೊಂಬೆ ಕುಣಿತ ಸೇರಿದಂತೆ ಅನೇಕ ಜನಪದ ಕಲಾಪ್ರಕಾರಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.  

Advertisement

Udayavani is now on Telegram. Click here to join our channel and stay updated with the latest news.

Next