Advertisement

ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸಿ

04:12 PM Jan 28, 2021 | Team Udayavani |

ರಾಮದುರ್ಗ: ಕೇಂದ್ರ ಸರಕಾರದ ನಿರ್ದೇಶನದಂತೆ ಗೋವಿನ ಜೋಳದ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂ.ಎಸ್‌.ಪಿ) ಖರೀದಿ ಕೇಂದ್ರ ತೆರೆಯಲು ಜ.28 ರಿಂದ ಆರಂಭಗೊಳ್ಳಲಿರುವ ವಿಧಾನಸಭೆ ಅಧಿ ವೇಶನದಲ್ಲಿ ಸರಕಾರದ ಗಮನ ಸೆಳೆಯುವಂತೆ ಒತ್ತಾಯಿಸಲು ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ರೈತ ಮುಖಂಡರು ಮನವಿ ಸಲ್ಲಿಸಿದರು.

Advertisement

ಈಗಾಗಲೇ ಜ.10 ರಂದು ಗೋವಿನ ಜೋಳಕ್ಕೆ ಕೇಂದ್ರ ಸರ್ಕಾರದ ನಿರ್ದೇಶನದಂತೆ ಕನಿಷ್ಟ ಬೆಂಬಲ ಬೆಲೆ (ರೂ. 1850) ಯಲ್ಲಿ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ತಮಗೆ ಮನವಿ ಸಲ್ಲಿಸಲಾಗಿತ್ತು. ಆದರೇ ಇಲ್ಲಿಯವರೆಗೂ ತಮ್ಮಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕಾರಣ ಇದೇ ತಿಂಗಳು 28 ರಿಂದ ಪ್ರಾರಂಭವಾಗುವ ವಿಧಾನ ಸಭೆಯ ಅಧಿ ವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಕನಿಷ್ಟ ಬೆಂಬಲ ಬೆಲೆಯ ಖರೀದಿ ಕೇಂದ್ರ ತೆರೆಯುವಂತೆ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುವ ಮೂಲಕ ಸರಕಾರದ ಗಮನ ಸೆಳೆಯಬೇಕು.

ಇದನ್ನೂ ಓದಿ:ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ

ತಾವು ಈ ವಿಷಯವನ್ನು ಪ್ರಸ್ತಾಪಿಸಿ ಪ್ರತಿಯೊಬ್ಬ ರೈತನ ಹಿತದೃಷ್ಟಿಯಿಂದ ಖರೀದಿ ಕೇಂದ್ರ ತೆರೆಯುವಂತಾದರೆ ಸಾಕಷ್ಟು ರೈತರಿಗೆ ಅನುಕೂಲವಾಗಲಿದೆ. ಆದ್ದರಿಂದ ಈ ಕೆಲಸವನ್ನು ತಾವುಗಳು ಸದನದಲ್ಲಿ ಪ್ರಸ್ತಾಪಿಸಿ ಪರಿಹಾರ ಕಲ್ಪಿಸುವಲ್ಲಿ ಮುಂದಾಗಬೇಕು ಎಂದು ಒತ್ತಾಯಿಸಿದರು.

ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಈಗಾಗಲೇ ಈ ವಿಷಯವಾಗಿ ಕೃಷಿ ಹಾಗೂ ಸಹಕಾರ ಸಚಿವರಿಗೆ ಪತ್ರ ಬರೆಯಲಾಗಿದೆ. ಈಗ ನಡೆಯುವ ಅ ಧಿವೇಶನದಲ್ಲಿಯೂ ಪ್ರಸ್ತಾಪಿಸುವದಾಗಿ ಭರವಸೆ ನೀಡಿ, ಈ ಹಿಂದೆ ಸಲ್ಲಿಸಿದ ಮನವಿಯನ್ನು ಕೃಷಿ ಮಂತ್ರಿಗಳಿಗೆ ಮತ್ತು ಸಹಕಾರ ಮಂತ್ರಿಗಳಿಗೂ ಕಳಿಸಿದ್ದರ ಪ್ರತಿಯನ್ನು ರೈತರಿಗೆ ನೀಡಿದರು.

Advertisement

ಈ ಸಂದರ್ಭದಲ್ಲಿ ರೈತ ಮುಖಂಡ ರಾಮನಗೌಡ ಪಾಟೀಲ, ರೈತ ಸೇನಾ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಹನಮಂತ ಮಡಿವಾಳರ, ಸತೀಶ ಕುಲಕರ್ಣಿ, ಹನಮಂತ ಗಾಡದ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next