Advertisement

ಮಾಸ್ತಿ ವಸತಿ ಶಾಲಾ ಕಟ್ಟಡ ಕಾಮಗಾರಿ ಶೀಘ್ರ ಆರಂಭಿಸಿ

06:22 AM Jun 07, 2020 | Lakshmi GovindaRaj |

ಮಾಸ್ತಿ: ಜ್ಞಾನಪೀಠ ಪುರಸ್ಕೃತ, ಸಾಹಿತಿ ಡಾ.ವೆಂಕಟೇಶ್‌ ಅಯ್ಯಂಗಾರ್‌ ಹೆಸರಿನಲ್ಲಿ ವಸತಿ ಶಾಲೆ ನಿರ್ಮಾಣಕ್ಕೆ 8 ಎಕರೆ ಜಮೀನು ಮುಂಜೂರು ಮಾಡಿಸಿ, ಸರ್ಕಾರದ ಅನುಮೋದನೆಯೂ ಸಿಕ್ಕಿದ್ದು, ಶೀಘ್ರ ಕಟ್ಟಡ ಕಾಮಗಾರಿ  ಪ್ರಾರಂಭಿಸಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಸರ್ಕಾರವನ್ನು ಆಗ್ರಹಿಸಿದರು.

Advertisement

ವೆಂಕಟೇಶ್‌ ಅಯ್ಯಂಗಾರ್‌ 129ನೇ ಜಯಂತಿ ಪ್ರಯುಕ್ತ ಗ್ರಾಮದಲ್ಲಿರುವ ಡಾ. ಮಾಸ್ತಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಕೋವಿಡ್‌ 19  ಹಿನ್ನೆಲೆಯಲ್ಲಿ ಸಾಹಿತಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅವರ ಜನ್ಮದಿನ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ಮಾಸ್ತಿ ಗ್ರಾಮವನ್ನು ಸಮಗ್ರವಾಗಿ ಅಭಿವೃದಿಪಡಿಸಲು ಯಾವುದೇ ಸರ್ಕಾರ ಮುಂದಾಗಿಲ್ಲ.

ಹಿಂದೆ  ಸಚಿವರಾಗಿದ್ದ ಕೃಷ್ಣಬೈರೇಗೌಡ ಸಹಕಾರದೊಂದಿಗೆ ಡಾ.ಮಾಸ್ತಿ ಹೆಸರಿನಲ್ಲಿ ವಸತಿ ಶಾಲೆ ನಿರ್ಮಾಣಕ್ಕೆ ಕೆಸರಗೆರೆ ಬಳಿ 8 ಎಕರೆ ಜಮೀನು ಮುಂಜೂರು ಮಾಡಿಸಿ, 28 ಕೋಟಿ ರೂ.ಗೆ ಅನುಮೋದನೆ ಪಡೆಯಲಾಗಿದೆ. ಆದರೆ, ಕಟ್ಟಡ  ಕಾಮಗಾರಿ ಮಾತ್ರ ಪ್ರಾರಂಭ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜಿಪಂ ಸದಸ್ಯ ಎಚ್‌ .ವಿ.ಶ್ರೀನಿವಾಸ್‌, ತಾಪಂ ಸದಸ್ಯರಾದ ರೇಖಾ, ಆಶಾ, ಗ್ರಾಪಂ ಅಧ್ಯಕ್ಷೆ ಸುಗಣಮ್ಮ, ಉಪಾಧ್ಯಕ್ಷ ಎಚ್‌.ವಿ.ಸತೀಶ್‌,

ಸದಸ್ಯರಾದ ಸಬ್ದಾರ್‌ಬೇಗ್‌,  ಜೊನ್ನಮುನಿಯಪ್ಪ, ಜೆಸಿಬಿ ನಾಗರಾಜ್‌, ಕಲಾವಿದ ಮಾಲೂರು ವಿಜಿ, ಕಸಾಪ ನಿಕಟ ಪೂರ್ವ ಗೌರವ ಕಾರ್ಯದರ್ಶಿ ಅಶ್ವಥ್‌ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್‌, ಕಸಾಪ ತಾಲೂಕು  ಅಧ್ಯಕ್ಷ ದಾ.ಮು.ವೆಂಕಟೇಶ್‌, ಪ್ರಾಂಶುಪಾಲ ರಾಮಚಂದ್ರಪ್ಪ, ಟಿ.ಮುನಿಯಪ್ಪ, ಚೇತನ್‌ಕುಮಾರ್‌, ರೇವಣ್ಣ, ಚವರಮಂಗಲ ಮುನಿಸ್ವಾಮಿ, ಟೆಂಪೋ ಮುನಿಯಪ್ಪ, ಕೆ.ಬಿ. ಮುನಿಸ್ವಾಮಿಗೌಡ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next