Advertisement
ರಾಜ್ಯದ ವಿವಿಧ ಭಾಗಗಳಲ್ಲಿ, ಜಿಲ್ಲೆಯಲ್ಲಿ ಶಿವಮೊಗ್ಗಕ್ಕೆ ಜನ್ಮಶತಾಬ್ಧಿ ರೈಲು ಬಂದುಹೋಗಲಾರಂಭಿಸಿದ್ದರೂ ಸಾಗರ, ತಾಳಗುಪ್ಪಕ್ಕೆ ಮಾತ್ರ ಈವರೆಗೆ ರೈಲು ಸಂಚಾರ ಆರಂಭವಾಗಿಲ್ಲ.
Related Articles
Advertisement
ಈಗಾಗಲೇ ಬೆಂಗಳೂರು- ಕಾರವಾರ, ಬೆಂಗಳೂರು- ಹುಬ್ಬಳ್ಳಿ ಮಾರ್ಗದ ರೈಲುಗಳ ಸಂಚಾರ ಆರಂಭವಾಗಿದೆ. ಲಾಕ್‌ಡೌನ್ ನಂತರ ಮತ್ತೆ ಸಂಚಾರ ಆರಂಭಿಸಿರುವ ರೈಲುಗಳಲ್ಲಿ ಸಾಮಾನ್ಯ ದರ್ಜೆಯ ಬೋಗಿಗಳನ್ನು ಕಡಿಮೆ ಮಾಡಿ ಆಸನಗಳನ್ನು ಕಾಯ್ದಿರಿಸುವ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಈ ಮೂಲಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ರೈಲ್ವೆ ಆದಾಯ ಕೂಡ ಸುಧಾರಿಸುತ್ತದೆ. ಜನರಿಗೂ ಅನುಕೂಲವಾಗುತ್ತದೆ. ತಾಳಗುಪ್ಪ-ಬೆಂಗಳೂರು ಮಾರ್ಗದ ರೈಲಿಗೂ ಇದೇ ಮಾನದಂಡ ಅನುಸರಿಸಿ ಮತ್ತೆ ರೈಲು ಸಂಚಾರ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು. ರೈಲ್ವೆ ಇಲಾಖೆಯ ಮೇಲೆ ರಾಜ್ಯದ ಜನಪ್ರತಿನಿಧಿಗಳ
ಪ್ರಭಾವ ಕಡಿಮೆ. ಈ ಮಾರ್ಗಗಳ ಪುನರ್ಚಾಲನೆಗೆ ಸಂಸದ ಬಿ.ವೈ. ರಾಘವೇಂದ್ರ ಅವರು ಮನಸ್ಸು ಮಾಡಬೇಕು. ಈ ನಿಟ್ಟಿನಲ್ಲಿ ಅವರ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ.
ಸಾಗರಕ್ಕೆ ಒಂದೇ ರೈಲು ಕೊಟ್ಟರೂ ಸಾಕು! : ಈ ಮೊದಲು ರಾತ್ರಿ 8.15ಕ್ಕೆ ತಾಳಗುಪ್ಪದಿಂದ ಹೊರಟು ಬೆಳಗಿನ ಜಾವ 4.30ಕ್ಕೆ ಬೆಂಗಳೂರು ತಲುಪಿ ನಂತರ 8.30ಕ್ಕೆ ಮೈಸೂರು ತಲುಪುತ್ತಿದ್ದ ರಾತ್ರಿಯ ಎಕ್ಸ್‌ಪ್ರೆಸ್ ರೈಲು ಬಿಟ್ಟರೂ ಸಾಕು. ಈ ರೈಲು ಪುನಃ ರಾತ್ರಿ 7.30ಕ್ಕೆ ಮೈಸೂರಿನಿಂದ ಹೊರಟು, ಬೆಂಗಳೂರಿನಿಂದ ರಾತ್ರಿ 11ಕ್ಕೆ ಬಿಟ್ಟು ಬೆಳಗ್ಗೆ 6.45ಕ್ಕೆ ತಾಳಗುಪ್ಪ ತಲುಪುತ್ತಿತ್ತು. ಈ ರೈಲಿನ ಸಂಚಾರದಿಂದ ತಾಲೂಕಿನ ಪ್ರಯಾಣಿಕರಿಗೆ ಮಾತ್ರವಲ್ಲದೆ ಸೊರಬ, ಹೊಸನಗರ ಹಾಗೂ ಪಕ್ಕದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ ಭಾಗದ ಜನರಿಗೂ ಅನುಕೂಲಕರವಾಗಿತ್ತು.
ತಾಳಗುಪ್ಪ ಶಿವಮೊಗ್ಗ ನಡುವಿನ ರೈಲು ಮಾರ್ಗ ಈ ಕೋವಿಡ್ ಕಾಲದಲ್ಲಿ ಮೂರು ಬಾರಿ ಪರೀಕ್ಷೆಗೊಳಪಟ್ಟಿದ್ದು ಸುವ್ಯವಸ್ಥಿತವಾಗಿದೆ. ಈಗಲೂ ವಾರದಲ್ಲಿ ಕೆಲವು ಅಧಿಕಾರಿಗಳು ಪರೀಕ್ಷಾರ್ಥ ರೈಲು ಓಡಿಸುತ್ತಿದ್ದಾರೆ. ತಾಳಗುಪ್ಪದಲ್ಲಿ ರಾಷ್ಟ್ರೀಯ ಹೆದ್ದಾರಿ 206ರ ರೈಲ್ವೆ ಕ್ರಾಸಿಂಗ್‌ನ ದುರಸ್ತಿ ಕೆಲಸ ಕೊನೆಗೊಂಡಿದೆ. ಇನ್ನೂ ವಿಳಂಬ ಮಾಡಬಾರದು. – ಕುಮಾರಸ್ವಾಮಿ, ರೈಲ್ವೆ ಹೋರಾಟ ಸಮಿತಿ ಸಾಗರ
ಕೋವಿಡ್ ಕಾಲದಲ್ಲಿ ಜನರ ಆರೋಗ್ಯ ಸುಧಾರಿಸಿದೆ ಎಂಬ ಮಾತುಗಳಿವೆ. ಆದರೆ ಸೋಂಕಿನ ಭಯದಿಂದ ಕ್ಯಾನ್ಸರ್ ಮೊದಲಾದ ಅಪಾಯಕ್ಕೊಳಗಾದವರು ಮೊದಲಿನ ಹಂತದಲ್ಲಿಯೇ ಪರೀಕ್ಷೆಗೊಳಗಾಗುವುದನ್ನುರೈಲಿನಂತಹ ಸೌಲಭ್ಯ ಇಲ್ಲದ ಕಾರಣಕ್ಕೂ ಮುಂದೂಡುತ್ತಿದ್ದಾರೆ. ಇದರಿಂದ ಕಾಯಿಲೆ ಮೂರು ನಾಲ್ಕನೇ ಹಂತಕ್ಕೆ ಮುಟ್ಟುವ ಅಪಾಯವಿದೆ. ಬಸ್ ಸಂಚಾರಕ್ಕಿಂತ ರೈಲು ಮಾರ್ಗಗಳು ತೆರೆದುಕೊಳ್ಳಬೇಕಾಗಿದೆ. -ಡಾ| ಶ್ರೀಪಾದ ರಾವ್, ರೈಲ್ವೆ ಪ್ರಯಾಣಿಕರು