Advertisement
ಈಗ ಈ ಎಲ್ಲಾಸಿನಿಮಾಗಳು ಚಿತ್ರೀಕರಣಕ್ಕೆ ಅಣಿಯಾಗಿವೆ. “ಕಬj’,”ಲಗಾಮ್’, “ಸಪ್ತಸಾಗರದಾಚೆ ಎಲ್ಲೋ’, “ಬೈ ಟುಲವ್’, ಪುನೀತ್‌ರಾಜ್‌ಕುಮಾರ್ “ಜೇಮ್ಸ್’, ಶಿವರಾಜ್‌ಕುಮಾರ್ ಹೊಸ ಚಿತ್ರ ಹೀಗೆ ಸಾಕಷ್ಟು ಸಿನಿಮಾಗಳು ಚಿತ್ರೀಕರಣಕ್ಕೆ ಹೊರಟು ನಿಂತಿವೆ. ಈಗಾಗಲೇ ಸಿನಿಮಾ ತಂಡಗಳು ಸದ್ಯ ತಮ್ಮ ಕಲಾವಿದರುಮತ್ತು ತಂತ್ರಜ್ಞರ ಡೇಟ್ಸ್ ಹೊಂದಾಣಿಕೆ ಮಾಡಿಕೊಂಡು, ಮತ್ತೆ ಶೂಟಿಂಗ್‌ಗೆ ಹೊರಡಲುಅಣಿಯಾಗುತ್ತಿವೆ.ಸೆಟ್ ವರ್ಕ್, ಲೊಕೇಶನ್ ಹುಡುಕಾಟ ಸಿನಿಮಾಗಳ ಚಿತ್ರೀಕರಣ ನಡೆಯೋದು ಆಯಾಕಥೆಗೆ ಅನುಸಾರವಾಗಿ. ಕೆಲವು ಕಥೆಗಳು ಸೆಟ್ ಅನ್ನುಬಯಸಿದರೆ, ಇನ್ನೊಂದಷ್ಟು ಸಿನಿಮಾಗಳು ಔಟ್‌ಡೋರ್ ಶೂಟಿಂಗ್ ಬಯಸುತ್ತವೆ.
Related Articles
Advertisement
ಅದೇ ಕಾರಣದಿಂದ ರಾಜ್ಯದಲ್ಲಿ ಶೂಟಿಂಗ್ ಅನುಮತಿ ರದ್ದಾಗುತ್ತಿದ್ದಂತೆ “ಜೊತೆ ಜೊತೆಯಲಿ’, “ಗೀತಾ’. “ಕನ್ನಡತಿ’ ಸೇರಿದಂತೆ ಒಂದಷ್ಟು ಚಿತ್ರತಂಡಗಳುಹೈದರಾಬಾದ್‌ಗೆ ಚಿತ್ರೀಕರಣಕೆ ತೆರಳಿದ್ದವು. ಈಗ ಆತಂಡಗಳು ಮತ್ತೆ ಬೆಂಗಳೂರಿಗೆ ಮರಳಿದ್ದು, “ಜೊತೆಜೊತೆಯಲಿ’ ಸೇರಿದಂತೆ ಇನ್ನೂ ಒಂದಷ್ಟು ಧಾರಾವಾಹಿ ತಂಡಗಳುಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣದಲ್ಲಿ ನಿರತವಾಗಿವೆ. ಇನ್ನೊಂದಷ್ಟು ಧಾರಾವಾಹಿತಂಡಗಳು ರಾಜರಾಜೇಶ್ವರಿ ನಗರ, ಕನಕಪುರ ರಸ್ತೆಯಲ್ಲಿರುವ ಫಾರ್ಮ್ಹೌಸ್‌ಗಳಲ್ಲಿ ಚಿತ್ರೀಕರಣದಲ್ಲಿ ನಿರತವಾಗಿವೆ.
ಕಡಿಮೆ ಜನ ಹೆಚ್ಚುಕೆಲಸಸಾಮಾನ್ಯವಾಗಿ ಒಂದು ಚಿತ್ರೀಕರಣ ಸೆಟ್‌ಗೆಭೇಟಿ ನೀಡಿದರೆ ಅಲ್ಲಿ ಎಲ್ಲಿ ನೋಡಿದರೂ ಜನ,ಸಿನಿಮಾ ತಂಡದ ಸದಸ್ಯರು ಓಡಾಡುತ್ತಿರುತ್ತಾರೆ.ಆದರೆ, ಲಾಕ್‌ಡೌನ್ ಬಳಿಕದ ಚಿತ್ರೀಕರಣದಲ್ಲಿ ಆದೃಶ್ಯ ಸಿಗುವುದಿಲ್ಲ. ಏಕೆಂದರೆ ಅರ್ಧಕರ್ಧ ಮಂದಿಕಡಿಮೆಯಾಗಿದ್ದಾರೆ. ಅನಿವಾರ್ಯವಾಗಿ ಕಡಿಮೆಸದಸ್ಯರೊಂದಿಗೆ ಚಿತ್ರೀಕರಣ ಮಾಡಬೇಕಾಗಿದೆ.ಜೊತೆಗೆ ಎಲ್ಲರೂ ಲಸಿಕೆ, ಮಾಸ್ಕ್ ಹಾಕಿಕೊಂಡಿದ್ದಾರಾಎಂಬುದನ್ನು ಖಾತ್ರಿಪಡಿಸೋದು ಕೂಡಾ ಸದ್ಯದಅನಿವಾರ್ಯತೆ. ಹೀಗಾಗಿ ಸದ್ಯ ಚಿತ್ರೀಕರಣ ಸೆಟ್‌ಗೆಭೇಟಿ ನೀಡಿದರೆ ಹಿಂದಿನ ಮಜಾ, ಆ ಗಜಿಬಿಜಿ ಕಾಣಸಿಗುವುದಿಲ್ಲ
ನಮ್ಮ “ಕಬj’ ಸಿನಿಮಾದಬಹುಭಾಗ ಸೆಟ್‌ನಲ್ಲೇನಡೆಯುವುದರಿಂದ, ಅಗತ್ಯಸೆಟ್‌ಗಳನ್ನು ಮೊದಲುನಿರ್ಮಾಣ ಮಾಡಿಕೊಳ್ಳಬೇಕು. ಹಾಗಾಗಿ ಸಿನಿಮಾಸೆಟ್‌ಕೆಲಸ ಶುರುವಾಗಿದೆ.ಸೆಟ್‌ಕೆಲಸ ಮುಗಿಯುತ್ತಿದ್ದಂತೆ, ಮತ್ತೆಶೂಟಿಂಗ್ ಶುರು ಮಾಡಲು ಪ್ಲಾನ್‌ಹಾಕಿಕೊಂಡಿ ದ್ದೇವೆ. ಈಗಾಗಲೆ ನಮ್ಮ ಕಲಾವಿದರು, ತಂತ್ರಜ್ಞರಿಗೆ ಶೂಟಿಂಗ್ ಶುರುವಾಗುತ್ತಿರುವ ಮಾಹಿತಿ ನೀಡುತ್ತಿದ್ದೇವೆ.
- ಆರ್. ಚಂದ್ರು, “ಕಬ್ಜ “ನಿರ್ದೇಶಕ ಮತ್ತು ನಿರ್ಮಾಪಕ