Advertisement

ಪ್ರಚಾರ ಶುರು!

04:10 PM Apr 06, 2018 | Team Udayavani |

ಚಿತ್ರರಂಗದಲ್ಲಿ ಆಗಾಗ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. “ಅಭಯ ಹಸ್ತ’ ಚಿತ್ರದಲ್ಲೂ ಅಂಥದ್ದೊಂದು ಪ್ರಯೋಗ ನಡೆದಿದೆ. ಈ ಚಿತ್ರದಲ್ಲೊಂದು ಐಟಂ ಸಾಂಗ್‌ ಇದೆ. ಅದರಲ್ಲೇನು ವಿಶೇಷ ಎಂಬ ಪ್ರಶ್ನೆ ಎದುರಾಗಬಹುದು. ಆ ಐಟಂ ಹಾಡಿಗೆ ಸಂಗೀತವಿದೆ. ಆದರೆ, ಸಾಹಿತ್ಯವಿಲ್ಲದೆಯೇ ಚಿತ್ರೀಕರಿಸಲಾಗಿದೆ. ಚಿತ್ರದ ಹಾಡೊಂದಕ್ಕೆ ಶಿವರಾಜಕುಮಾರ್‌ ದನಿಯಾಗಿದ್ದಾರೆ.

Advertisement

ಪುನೀತ್‌ ರಾಜ್‌ಕುಮಾರ್‌ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಹೀಗೆ ಇನ್ನೂ ಹಲವು ವಿಶೇಷತೆಗಳೊಂದಿಗೆ “ಅಭಯ ಹಸ್ತ’ ಚಿತ್ರ ಪ್ರಚಾರಕ್ಕೆ ಅಣಿಯಾಗಿದೆ.  ಇತ್ತೀಚೆಗೆ ಚಿತ್ರತಂಡ ಆಡಿಯೋ ಸಿಡಿ ಬಿಡುಗಡೆ ಮಾಡಿಕೊಂಡಿದೆ. ಹಿರಿಯ ನಿರ್ದೇಶಕ ಭಗವಾನ್‌ ಹಾಡು ಬಿಡುಗಡೆ ಮಾಡಿದರು. ಹಿರಿಯ ಸಾಹಿತಿ ಡಾ.ದೊಡ್ಡೆರಂಗೇಗೌಡ, ಸಾಯಿಪ್ರಕಾಶ್‌ ಸೇರಿದಂತೆ ಇತರರು ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಚಿತ್ರ ತಂಡಕ್ಕೆ ಶುಭ ಕೋರಿದರು.

ನಿರ್ದೇಶಕ ಪಿ.ಬಿ. ನವೀನ್‌, “ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಭ್ರಷ್ಟಾಚಾರ ಕುರಿತು ಇಲ್ಲಿ ಹೇಳಲಾಗಿದೆ. ಈಗಿನ ವ್ಯವಸ್ಥೆಗೆ ತಕ್ಕಂತೆ ಚಿತ್ರ ಮಾಡಿದ್ದೇನೆ. ಬೆಂಗಳೂರು ಸೇರಿದಂತೆ ಇತರೆಡೆ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ವಿಶೇಷವೆಂದರೆ, ಕಾಶಿನಾಥ್‌ ಅವರಿಲ್ಲಿ ಒಳ್ಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವಿವರ ಕೊಟ್ಟರು.

ದೊಡ್ಡರಂಗೇಗೌಡ ಅವರಿಲ್ಲಿ ಗೀತೆಯೊಂದನ್ನು ಬರೆದಿದ್ದು, ಭಕ್ತಿಗೆ ದೇವರು, ಪ್ರಿಯತಮಗೆ ಪ್ರೀತಿ ಎಂಬ ಅಂಶಗಳ ಮೂಲಕ ಚಿತ್ರ ಮೂಡಿಬಂದಿದೆ ಎಂದರು ಅವರು. ನಟ ಅನಿರುದ್ಧ, ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ಬಣಕಾರ್‌ ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಿರ್ಮಾಪಕ ಡಾ.ಪಿ.ಸತೀಶ್‌ಕುಮಾರ್‌ವೆುಹ್ತಾ, ಸಂಗೀತ ನಿರ್ದೇಶಕರಾದ ಕಾರ್ತಿಕ್‌ ವೆಂಕಟೇಶ್‌-ಪ್ರವೀಣ್‌ ತಮ್ಮ ಕೆಲಸದ ಬಗ್ಗೆ ಮಾತನಾಡಿದರು. ಕಲಾವಿದರಾದ ಶಿವರಂಜನ್‌, ಉಗ್ರಂ ಶಿವು, ಉಗ್ರಂ ರೆಡ್ಡಿ, ಸಂದೀಪ್‌ ಮಲಾನಿ, ಪಿ.ಬಿ. ರಂಜನ್‌, ಮಂಜು, ಮಂಡ್ಯ ಶ್ರೀಧರ್‌, ಪೂಜಾ, ಐಶ್ವರ್ಯ, ಖುಷಿ ಇವರೆಲ್ಲರೂ ಎರಡೆರೆಡು ಮಾತನಾಡುವ ಹೊತ್ತಿಗೆ ಹಾಡುಗಳ ಬಿಡಗಡೆ ಕಾರ್ಯಕ್ರಮಕ್ಕೆ ಅಂತ್ಯ ಹಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next