ಪ್ರಾರಂಭಿಸಲಾಯಿತು. ಈ ಕುರಿತು ಮುಖ್ಯಗುರು ಎಲ್.ರೆಡ್ಡಿನಾಯ್ಕ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳ ಕಲಿಕೆ ಕುಂಠಿತವಾಗಬಾರದು ಎಂದು ಪೂರಕ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ವಠಾರ ಶಾಲೆ ಪ್ರಾರಂಭಿಸಲಾಗಿದೆ. 22 ಮಕ್ಕಳಿಗೆ ಸಾಮಾಜಿಕ ಅಂತರದೊಂದಿಗೆ ಶಾಲೆ ಪ್ರಾರಂಭಿಸಲಾಗಿದ್ದು ಕಲಿಕೆ ಆಸಕ್ತಿ ತೋರಿಸುತ್ತಿದ್ದಾರೆ. ಪೋಷಕರು ಮಕ್ಕಳ ಕಲಿಕೆಗೆ ಸ್ಪಂದಿಸಬೇಕು. ವಠಾರ ಶಾಲೆಗೆ ಬಂದ ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗಿದೆ.
Advertisement
ವಠಾರ ಶಾಲೆಯನ್ನು ಆಯಾ ಓಣಿಗಳ ವ್ಯಾಪ್ತಿಯ ಬಯಲು ಪ್ರದೇಶದಲ್ಲಿ, ದೇವಸ್ಥಾನಗಳಲ್ಲಿ ಮಾಡಬಹುದಾಗಿದೆ. ನಿರಂತರವಾಗಿ ಶಿಕ್ಷಣ ಅಭ್ಯಾಸದಲ್ಲಿ ತೊಂದರೆಯಾದರೆ ಮಕ್ಕಳ ಜ್ಞಾನಾರ್ಜನೆ ಕುಂದುತ್ತದೆ. ಸರಕಾರ ರಾಜ್ಯದ ಎಲ್ಲೆಡೆ ವಠಾರ ಶಾಲೆಯನ್ನು ಆರಂಭಿಸಿ ಮಕ್ಕಳ ಸರ್ವೋತೋಮುಖ ಬೆಳವಣಿಗೆಗೆ ಸ್ಪಂದಿಸಬೇಕು ಎಂದು ತಿಳಿಸಿದರು. ಶಿಕ್ಷಕಿ ಅಶ್ವಿನಿ ಇದ್ದರು.