Advertisement

ಕಳಸಾ-ಬಂಡೂರಿ ಯೋಜನೆ ಶೀಘ್ರ ಪ್ರಾರಂಭಿಸಿ: ಸ್ವಾಮೀಜಿ

12:42 PM Aug 01, 2020 | Suhan S |

ನರಗುಂದ: ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆಗೆ ಮಹದಾಯಿ ನ್ಯಾಯಾಧೀಕರಣ ನದಿ ನೀರು ಹಂಚಿಕೆ ಮಾಡಿ 2 ವರ್ಷ ಗತಿಸುತ್ತ ಸಾಕಷ್ಟು ವಿಳಂಬವಾಗಿದೆ. ಇನ್ನಾದರೂ ಶೀಘ್ರ ಯೋಜನೆ ಕಾಮಗಾರಿಗೆ ಅಗತ್ಯ ಟೆಂಡರ್‌ ಕರೆದು ಕೆಲಸ ಪ್ರಾರಂಭಿಸಲಿ ಎಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಒತ್ತಾಯಿಸಿದ್ದಾರೆ.

Advertisement

ಶುಕ್ರವಾರ ನರಗುಂದ ಮಹದಾಯಿ ಹೋರಾಟ ವೇದಿಕೆ ವತಿಯಿಂದ ಪತ್ರಿಕಾ ಪ್ರಕಟನೆ ನೀಡಿದ ಅವರು, ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆಗೆ ರಾಜ್ಯ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ನೀರಾವರಿ ಸಚಿವರ ಹೇಳಿಕೆಯನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ. ಈಗಾಗಲೇ ಕಾಮಗಾರಿ ಪ್ರಾರಂಭಿಸುವಲ್ಲಿ ತುಂಬಾ ವಿಳಂಬವಾಗಿದೆ. ಜಲಸಂಪನ್ಮೂಲ ಸಚಿವರು ಮತ್ತು ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳು ಬರುವ ಆಗಸ್ಟ್‌ ತಿಂಗಳ ಒಳಗಾಗಿ ಕಾಮಗಾರಿ ಪ್ರಾರಂಭಿಸಲು ಅಗತ್ಯ ಟೆಂಡರ್‌ ಪ್ರಕ್ರಿಯೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

ಉತ್ತಮ ಗುಣಮಟ್ಟ ಕಾಮಗಾರಿ ನಡೆಸುವಂತಹ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಬೇಕು. ಕಾರಣ ಈ ಯೋಜನೆಯಲ್ಲಿ ಉತ್ತರ ಕರ್ನಾಟಕದ ಜನರ ಭವಿಷ್ಯ ಅಡಗಿದೆ. ಯೋಜನೆ ಈ ಭಾಗದ ಜನರ ದಶಕಗಳ ಬೇಡಿಕೆಯಾಗಿದೆ. ಆಗಸ್ಟ್‌ ತಿಂಗಳೊಳಗೆ ಕಾಮಗಾರಿ ಪ್ರಾರಂಭಿಸದಿದ್ದರೆ ನಮ್ಮ ಹೋರಾಟ ಅಚಲವಾಗಿದೆ ಎಂದು ಸೊಬರದಮಠ ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next