ಮೈಸೂರು: ಸುಧಾರಿತ ಸಂಚಾರ ನಿಯಂತ್ರಣಾ ಮಾರ್ಗಸೂಚಿ ಅನುಷ್ಠಾನ ಗೊಳಿಸಿರುವ ಮೈಸೂರು ನಗರ ಸಂಚಾರ ಪೊಲೀಸರು, ನಗರದ 10 ಕಡೆಗಳಲ್ಲಿ ಸ್ವಯಂ ಪ್ರೇರಿತ ತಪಾಸಣಾ ಕೇಂದ್ರಗಳನ್ನು ಆರಂಭಿಸಿದ್ದಾರೆ.
ಗುರುವಾರ ಬೆಳಗ್ಗೆ ಆರಂಭಗೊಂಡ ಕೇಂದ್ರಗಳಿಗೆ ತೆರಳಿದ ನೂರಾರು ಮಂದಿವಾಹನ ಸವಾರರು, ತಮ್ಮ ವಾಹನಸಂಖ್ಯೆಯನ್ನು ನೀಡಿ, ಹಳೆಯ ಪ್ರಕರಣಗಳಬಗ್ಗೆ ಮಾಹಿತಿ ಪಡೆದರು. ಭಾರೀ ಮೊತ್ತದದಂಡವನ್ನು ಪಾವತಿಸಬೇಕು ಎಂದು ಕೇಳಿವಾಹನ ಸವಾರರು ದಂಗಾದರು. ಇನ್ನೂ ಕೆಲಮಂದಿ ಸ್ಥಳದಲ್ಲಿಯೇ ದಂಡ ಪಾವತಿಸಿ ರಶೀದಿ ಪಡೆದರು.
ಈ ಮೂಲಕ ಮೈಸೂರು ನಗರ ಪೊಲೀಸರು, ಒಂದು ತಿಂಗಳ ಅವಧಿಗೆ ಪ್ರಾಯೋಗಿಕವಾಗಿಈ ಕೇಂದ್ರಗಳನ್ನು ಆರಂಭಿಸಿದ್ದಾರೆ. ಕೆ.ಆರ್.ಸಂಚಾರ ಠಾಣೆ ಪೊಲೀಸರು ಶ್ರೀರಾಂಪುರಜಂಕ್ಷನ್, ರಾಮಸ್ವಾಮಿ ವೃತ್ತ, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವೃತ್ತ, ವಿವೇಕಾನಂದ ವೃತ್ತ,ದೇವರಾಜ ಸಂಚಾರ ಠಾಣೆಯ ಪೊಲೀಸರುಚಾಮರಾಜ ವೃತ್ತ, ವಿವಿ ಪುರಂ ಸಂಚಾರ ಠಾಣೆಪೊಲೀಸರು ಅಟಲ್ ಬಿಹಾರಿ ವಾಜಪೇಯಿವೃತ್ತ, ಬೆಳವಾಡಿ ಜಂಕ್ಷನ್, ದೇವರಾಜ ಸಂಚಾರ ಠಾಣೆಯ ಪೊಲೀಸರು ಚಾಮರಾಜ ವೃತ್ತ,ಎನ್.ಆರ್. ಸಂಚಾರ ಠಾಣೆ ಪೊಲೀಸರು ನಾಡಪ್ರಭು ಕೆಂಪೇಗೌಡ ವೃತ್ತ, ಸಿದ್ದಾರ್ಥನಗರಸಂಚಾರ ಠಾಣೆ ಪೊಲೀಸರು ದೇವೇಗೌಡವೃತ್ತ, ಎಸ್. ಲಿಂಗಣ್ಣ ವೃತ್ತದಲ್ಲಿ ಈ ಸ್ವಯಂಪ್ರೇರಿತ ತಪಾಸಣಾ ಕೇಂದ್ರಗಳನ್ನು ಆರಂಭಿಸಿ,ವಾಹನ ಸವಾರರರಿಗೆ ತಮ್ಮ ವಾಹನಗಳಮೇಲಿನ ಹಳೆಯ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು.
ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ :
ಯಾವುದೇ ಕಾರಣಕ್ಕೂ ಚಲಿಸುತ್ತಿರುವ ವಾಹನಗಳನ್ನುಬರೀ ತಪಾಸಣೆಗೋಸ್ಕರವೇ ಅಡ್ಡಗಟ್ಟಿ ದಾಖಲಾತಿಪರಿಶೀಲನೆ ಇತ್ಯಾದಿಯನ್ನು ಸಂಚಾರ ಪೊಲೀಸರುಮಾಡುವುದಿಲ್ಲ. ಆದರೆ, ವಾಹನದಲ್ಲಿ ಚಲಿಸುತ್ತಿರುವಸವಾರನು ಮೊಬೈಲ್ ಬಳಸುತ್ತಾ ವಾಹನ ಚಾಲನೆ, ಸೀಟ್‌ಬೆಲ್ಟ್ ಧರಿಸದೇ ಇರುವುದು, ಮದ್ಯಪಾನ ಮಾಡಿ ವಾಹನಚಾಲನೆ, ಸರಕು ವಾಹನದಲ್ಲಿ ಸಾರ್ವಜನಿಕರ ಸಾಗಣೆ,ಮಕ್ಕಳಿಂದ ವಾಹನ ಚಾಲನೆ, ತ್ರಿಬಲ್ ರೈಡಿಂಗ್, ಟ್ರಾμಕ್‌ಸಿಗ್ನಲ್ ಜಂಪ್ ಮಾಡುತ್ತಾ ಚಲಿಸುವುದು, ಏಕಮುಖಸಂಚಾರಕ್ಕೆ ವಿರುದ್ಧವಾದ ಚಾಲನೆ, ಸುಗಮ ಸಂಚಾರಕ್ಕೆಅಡಚಣೆ, ಕರ್ಕಶವಾದ ಶಬ್ದ ಹೊರಹೊಮ್ಮುವ ವಾಹನಚಾಲನೆ ಇತ್ಯಾದಿ ಸಂಚಾರ ನಿಯಮ ಉಲ್ಲಂಘನೆಗಳನ್ನುಮಾಡುತ್ತಾ ಚಲಿಸುತ್ತಿದ್ದಲ್ಲಿ ಆ ಸವಾರನ ವಿರುದ್ಧ ದಿನದಯಾವುದೇ ಸಮಯದಲ್ಲಾದರೂ ಸರಿ ತಪ್ಪದೇ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.