Advertisement
ಕೇರಳ, ತೆಲಂಗಾಣ, ಆಂಧ್ರಪ್ರದೇಶ ಸಹಿತ ತಮಿಳುನಾಡಿನಲ್ಲೂ ಮುಷ್ಕರ ಆರಂಭವಾಗಿದೆ. ಸದ್ಯ ನಾವು ಯಾವುದೇ ಪ್ರತಿಭಟನೆಗೆ ತೀರ್ಮಾನಿಸಿಲ್ಲ. ಶಾಂತಿಯುತವಾಗಿ ಮುಷ್ಕರ ಮಾಡಲಾಗುತ್ತಿದೆ. ಸಣ್ಣ, ಮಧ್ಯಮ, ಭಾರೀ ಸರಕು ಸಾಗಾಟದ ಲಾರಿಗಳು ಸಂಚಾರ ಸ್ಥಗಿತಗೊಳಿಸಿವೆ ಎಂದು ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ನವೀನ್ ರೆಡ್ಡಿ ತಿಳಿಸಿದ್ದಾರೆ.ಕೇಂದ್ರ ಸರಕಾರದ ನೂತನ ಮೋಟಾರು ವಾಹನ ಕಾಯ್ದೆ ಚಾಲಕರಿಗೆ ಸಂಕಷ್ಟ ತರಲಿದೆ. ಅಗತ್ಯ ವಸ್ತುಗಳ ಪೊರೈಕೆಗೆ ಚಾಲಕರು ಲಾರಿ ಚಾಲನೆಗೆ ಹಿಂದೇಟು ಹಾಕುತ್ತಿದ್ದಾರೆ. ಕೇಂದ್ರ ಅಥವಾ ರಾಜ್ಯ ಸರಕಾರ ಈವರೆಗೂ ನಮ್ಮನ್ನು ಮಾತುಕತೆಗೆ ಆಹ್ವಾನಿಸಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಬುಧವಾರ ಮಧ್ಯರಾತ್ರಿಯಿಂದಲೇ ಮುಷ್ಕರ ಆರಂಭವಾಗಿದ್ದು, ಶೇ.85ರಷ್ಟು ವಾಹನಗಳ ಸೇವೆ ಸ್ಥಗಿತಗೊಂಡಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ 2-3 ದಿನಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಲಾರಿ ಮಾಲಕರ ಸಂಘದ ಅಧ್ಯಕ್ಷ ಚನ್ನಾರೆಡ್ಡಿ ತಿಳಿಸಿದ್ದಾರೆ.