Advertisement

ಕೋರ್ಟ್ ಆರಂಭ; ನಿಯಮ ಕಟ್ಟುನಿಟ್ಟು

05:55 AM Jun 02, 2020 | Suhan S |

ಹುಬ್ಬಳ್ಳಿ: ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ನ್ಯಾಯಾಲಯದ ಕಲಾಪಗಳು ಸೋಮವಾರದಿಂದ ಆರಂಭವಾಗಿದ್ದು, ಕಕ್ಷಿದಾರರಿಗೆ ಪ್ರವೇಶ ನಿರ್ಬಂಧಿಸಿ ಪ್ರಕರಣಗಳಿಗೆ ಸಂಬಂಧಿಸಿದ ವಕೀಲರಿಗೆ ಮಾತ್ರ ಪ್ರವೇಶ ನೀಡುವ ಮೂಲಕ ಕಟ್ಟುನಿಟ್ಟಿನ ನಿಯಮ ಪಾಲನೆ ಕೈಗೊಳ್ಳಲಾಯಿತು.

Advertisement

ನ್ಯಾಯಾಲಯದ ಕಲಾಪ ನಡೆಸಲು ಕೆಲ ನಿಬಂಧನೆಗಳನ್ನು ಹಾಕಿಕೊಂಡಿದ್ದರಿಂದ ಸೋಮವಾರ 9 ನ್ಯಾಯಾಲಯಗಳು ಮಾತ್ರ ಕಾರ್ಯನಿರ್ವಹಿಸಿದವು. ಶೇ.50 ಸಿಬ್ಬಂದಿ ಆಗಮಿಸಿದ್ದರು. ಬೆಳಗ್ಗೆ 10 ಪ್ರಕರಣ, ಮಧ್ಯಾಹ್ನದ ನಂತರ 10 ಪ್ರಕರಣ ಸೇರಿದಂತೆ 20 ಪ್ರಕರಣಗಳ ವಿಚಾರಣೆ ಮತ್ತು ವಾದ ಮಂಡನೆಗೆ ಅವಕಾಶ ನೀಡಿ, ಇದಕ್ಕೂ ಸಮಯ ನಿಗದಿ ಪಡಿಸಲಾಗಿತ್ತು. ಕೋರ್ಟ್‌ ಸಭಾಂಗಣದಲ್ಲಿ ಪ್ರಕರಣದ ವಾದ ಮಂಡನೆ ಮಾಡುವ ನ್ಯಾಯವಾದಿಗಳನ್ನು ಹೊರತುಪಡಿಸಿ ಇತರೇ ವಕೀಲರಿಗೂ ಪ್ರವೇಶ ನೀಡದೆ ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ.

ಪ್ರವೇಶ ದ್ವಾರದಲ್ಲೇ ಸ್ಕ್ರೀನಿಂಗ್‌ ಸೇರಿದಂತೆ ದಾಖಲೆಗಳ ತಪಾಸಣೆ ಮಾಡಲಾಗುತ್ತಿದೆ. ವಾಹನಗಳ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಪಾರ್ಕಿಂಗ್‌ ಸ್ಥಳದಲ್ಲಿ ಸದ್ಯಕ್ಕೆ ವಾಹನಗಳ ನಿಲುಗಡೆ ಬೇಡ ಎಂದು ನಿರ್ಧರಿಸಲಾಗಿದೆ. ಕೋರ್ಟ್‌ ಸಭಾಂಗಣದಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, 65 ವಯಸ್ಸು ಮೇಲ್ಪಟ್ಟ ನ್ಯಾಯವಾದಿಗಳಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಾದ ಮಾಡಲು ಅವಕಾಶ ನೀಡಲಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next