Advertisement

ಸಮುದಾಯ ಮಟ್ಟದ ಸೋಂಕು ಪರೀಕ್ಷೆ ಪ್ರಾರಂಭ

05:33 AM May 15, 2020 | Lakshmi GovindaRaj |

ಬೆಂಗಳೂರು: ಪಾದರಾಯನಪುರದ ಕಂಟೈನ್ಮೆಂಟ್‌ ವ್ಯಾಪ್ತಿಯಲ್ಲಿ ಎಲ್ಲರಿಗೂ ಕೊರೊನಾ ಸೋಂಕು ಪರೀಕ್ಷೆ ಮಾಡುವ ಕಾರ್ಯಾಚರಣೆಗೆ ಬಿಬಿಎಂಪಿ ಚಾಲನೆ ನೀಡಿದೆ. ಪಾದರಾಯನಪುರದ ಕಂಟೈನ್ಮೆಂಟ್‌ ವ್ಯಾಪ್ತಿಯಲ್ಲಿ ಗಂಟಲು  ದ್ರವ ಪರೀಕ್ಷೆ ಹಾಗೂ ಕಂಟೈನ್ಮೆಂಟ್‌ ಝೊನ್‌ ನಿಯಮ ಪಾಲನೆಗೆ ಸಂಬಂಧಿಸಿದಂತೆ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಅವರು ಶಾಸಕ ಜಮೀರ್‌ ಅಹ್ಮಮದ್‌ಖಾನ್‌ ಹಾಗೂ ಬಿಬಿಎಂಪಿ ಆರೋಗ್ಯಾಧಿಕಾರಿಗಳೊಂದಿಗೆ  ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌, ಪಾದರಾಯನಪುರದ ಕಂಟೈನ್ಮೆಂಟ್‌ ಝೊನ್‌ ವ್ಯಾಪ್ತಿಯಲ್ಲಿನ ಕೆಲವು ರಸ್ತೆಗಳಲ್ಲಿನ ನಿವಾಸಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಶೇ.100ರಷ್ಟು ಕೊರೊನಾ ಸೋಂಕು ಪರೀಕ್ಷೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಬುಧವಾರ 11ಜನರ ಗಂಟಲು ದ್ರವ ಪರೀಕ್ಷೆ  ಮಾಡಲಾಗಿದೆ ಎಂದರು. ಕೆಎಸ್‌ಆರ್‌ಟಿಸಿ ಬಸ್‌ನ ಮೊಬೈಲ್‌ ಕ್ಲಿನಿಕ್‌ ಅನ್ನು ಜಗಜೀವನ್‌ ರಾವ್‌ ಪೊಲೀಸ್‌ ಠಾಣೆಯ ಬಳಿ ನಿಲ್ಲಿಸಲಾಗಿದ್ದು,

ಪಾದರಾಯನಪುರದ ಅರಾಫ‌ತ್‌ ನಗರದಿಂದ ಬರುವವರನ್ನು ಇದರಲ್ಲಿ ತಪಾಸಣೆ  ಮಾಡಲಾಗುತ್ತಿದೆ. ಬುಧವಾರ ಮೊದಲ ಹಂತದಲ್ಲಿ 11 ಜನರನ್ನು ತಪಾಸಣೆ ಮಾಡಲಾಗಿದ್ದು, ಶುಕ್ರವಾರದಿಂದ ಇನ್ನು ಎರಡು ಕಿಯೋಸ್ಕ್ ಸ್ಥಾಪನೆ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪರೀಕ್ಷೆ ಮಾಡಲಾಗುವುದು.  ಗೋರಿಪಾಳ್ಯದ ರೆಫ‌ರಲ್‌ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ಪರೀಕ್ಷೆ ಮಾಡುವ ಸಂಬಂಧ ಸಿದಟಛಿತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕ್ಯಾರೇ ಎನ್ನದ ಜನ ಪೊಲೀಸ್‌ ಸಹಾಯಕ್ಕೆ ಮನವಿ: ಮುಖ್ಯವಾಗಿ ಕಂಟೈನ್ಮೆಂಟ್‌ ಝೊನ್‌ನಲ್ಲಿ ಅಳವಡಿಸಲಾಗಿರುವ ಬ್ಯಾರಿಕೇಡ್‌ಗಳನ್ನು ಸರಿಸಿ ಜನ ಓಡಾಡುತ್ತಿದ್ದಾರೆ. ಇಲ್ಲಿನ ಕಿರಿದಾದ ರಸ್ತೆಗಳಲ್ಲಿ ಜನ ಸಂಚಾರ ಇನ್ನು ನಿಂತಿಲ್ಲ.  ಹೀಗಾಗಿ, ಇಲ್ಲಿನ ಆಯ್ದ ಭಾಗದಲ್ಲಿ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ನೇಮಕ ಮಾಡುವ ಸಂಬಂಧ ಪೊಲೀಸ್‌ ಆಯುಕ್ತರೊಂದಿಗೆ ಚರ್ಚೆ ಮಾಡಲಾಗುವುದು ಎಂದು ಆಯುಕ್ತರು ತಿಳಿಸಿದರು.

ಜಾಗೃತಿ ಹೆಚ್ಚಿಸಲು ಹಾಗೂ ಸ್ವಚ್ಛತೆ ಕಾಪಾಡಲು ಸೂಚನೆ: ಈ ಭಾಗದಲ್ಲಿ ಬಹಳಷ್ಟು ಕಡೆ ಸ್ವಚ್ಛತೆ ಕಾಪಾಡಿಕೊಂಡಿಲ್ಲ. ಅಲ್ಲದೆ, ಬ್ಲಾಕ್‌ ಸ್ಪಾಟ್‌ಗಳ ಸಂಖ್ಯೆಯೂ ಹೆಚ್ಚಾಗಿವೆ. ಹೀಗಾಗಿ, ಹೆಚ್ಚುವರಿ ಘನತ್ಯಾಜ್ಯ ನಿರ್ವಹಣಾ ತಂಡ  ನೇಮಕ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next