Advertisement

ಪೋಸ್ಟ್ ಆಫೀಸ್ ತೆರೆಯಲು ಲಕ್ಷಾಂತರ ರೂ ಹೂಡಿಕೆ ಮಾಡಬೇಕೆಂದೇನಿಲ್ಲ : ಇಲ್ಲಿದೆ ಮಾಹಿತಿ

05:41 PM Jul 14, 2021 | |

ಪೋಸ್ಟ್ ಆಫೀಸ್ ಫ್ರ್ಯಾಂಚೈಸ್ ಯೋಜನೆಯಡಿ, ಅಲ್ಪ ಮೊತ್ತವನ್ನು ಠೇವಣಿ ಇಡುವ ಮೂಲಕ ಪೋಸ್ಟ್ ಆಫೀಸ್ ತೆರೆಯಬಹುದಾಗಿದೆ.

Advertisement

ಇದು ಪೋಸ್ಟ್ ಆಫೀಸ್ ನ ಉತ್ತಮ ವ್ಯವಹಾರ ಮಾದರಿಯಾಗಿದೆ. ಪೋಸ್ಟ್ ಆಫೀಸ್ ನಲ್ಲಿ ಮುಖ್ಯವಾಗಿ ಎರಡು ರೀತಿಯ ಫ್ರಾಂಚೈಸಿಗಳಿವೆ. ಮೊದಲನೆಯದು, ಫ್ರ್ಯಾಂಚೈಸೀ ಔಟ್ ಲೆಟ್ ಮತ್ತು ಎರಡನೆಯದು  ಪೋಸ್ಟಲ್ ಏಜೆಂಟ್ ಎಮಬುವುದಾಗಿದೆ.

ಇಂಡಿಯಾ ಪೋಸ್ಟ್ ನ ಅಡಿಯಲ್ಲಿ ಮಾಡುವ ಎಲ್ಲಾ ಕೆಲಸಗಳು, ಫ್ರ್ಯಾಂಚೈಸೀ ಔಟ್ ಲೆಟ್  ಅಡಿಯಲ್ಲೂ ಬರುತ್ತದೆ. ಆದರೆ ಇದರಲ್ಲಿ ವಿತರಣೆಯನ್ನು ಸೇವಾ ಇಲಾಖೆಯಿಂದಲೇ ಮಾಡಲಾಗುತ್ತದೆ.

ಇದನ್ನೂ ಓದಿ : ದೈವಸ್ಥಾನ ವಠಾರದಲ್ಲಿ ಕ್ರಿಕೆಟ್ ಆಡಿದ್ದಕ್ಕೆ ಆಕ್ಷೇಪ: ಮಾತುಕತೆ ಮೂಲಕ ಪ್ರಕರಣ ಸುಖಾಂತ್ಯ

ಪೋಸ್ಟ್ ಆಫೀಸ್ ನನ್ನು ತೆರೆಯಲು  ಕನಿಷ್ಠ 200 ಚದರ ಅಡಿ ಕಚೇರಿ ವಿಸ್ತೀರ್ಣವನ್ನು ಹೊಂದಿರುವುದು ಅವಶ್ಯಕ. 18 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಅಂಚೆ ಕಚೇರಿ ತೆರೆಯಬಹುದು. ಇದಕ್ಕಾಗಿ 8 ನೇ ತರಗತಿ ಉತ್ತೀರ್ಣರಾಗಿರುವುದು ಅವಶ್ಯಕ. ಇನ್ನು, ಪ್ರಮುಖ ವಿಷಯವೆಂದರೆ ಕುಟುಂಬ ಸದಸ್ಯರು ಅಂಚೆ ಇಲಾಖೆಯಲ್ಲಿ ಇರಬಾರದು.

Advertisement

ಪೋಸ್ಟಲ್ ಏಜೆಂಟ್ ಗಾಗಿ ಹೆಚ್ಚಿನ ಹೂಡಿಕೆ ಮಾಡಬೇಕಾಗಿರುವುದನ್ನು ಹೊರತಾಗಿ, ಅಂಚೆ ಕಚೇರಿ ತೆರೆಯಲು ನೀವು ಹೆಚ್ಚು ಹೂಡಿಕೆ ಮಾಡಬೇಕಾಗಿಲ್ಲ.

ಪೋಸ್ಟ್ ಆಫೀಸ್ ಫ್ರ್ಯಾಂಚೈಸ್ ತೆರೆಯಲು, ನೀವು ಕನಿಷ್ಟ 5000 ರೂ. ಸೆಕ್ಯುರಿಟಿ ಹಣ ನೀಡಬೇಕಾಗುತದೆ. ಇದಕ್ಕಾಗಿ ಅರ್ಜಿ ಸಲ್ಲಿಸುವುದು ಕೂಡಾ ಅವಶ್ಯಕವಾಗಿದೆ.

https://www.indiapost.gov.in/VAS/DOP_PDFFiles/Franchise.pdf ನ ಅಧಿಕೃತ ಲಿಂಕ್‌ಗೆ ಭೇಟಿ ನೀಡುವ ಮೂಲಕ ನೀವು ಅರ್ಜಿ ಸಲ್ಲಿಸಬಹುದು.

ಸ್ಪೀಡ್ ಪೋಸ್ಟ್‌ಗೆ 5 ರೂ., ಮನಿ ಆರ್ಡರ್‌ ಗೆ 3-5 ರೂ., ಪೋಸ್ಟಲ್ ಸ್ಟಾಂಪ್ ಮತ್ತು ಸ್ಟೇಷನರಿಗಳಲ್ಲಿ ಶೇಕಡಾ 5 ರಷ್ಟು ಕಮಿಷನ್ ಸಿಗುತ್ತದೆ. ಈ ರೀತಿಯಾಗಿ, ಬೇರೆ ಬೇರೆ ಸೇವೆಗಳಿಗೆ ಬೇರೆ ಬೇರೆ  ಕಮಿಷನ್ ನನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ : ಶರದ್ ಮುಂದಿನ ರಾಷ್ಟ್ರಪತಿ?: ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಐಕ್ಯತೆ?: ಕಿಶೋರ್ ತಂತ್ರ ಏನು.?

Advertisement

Udayavani is now on Telegram. Click here to join our channel and stay updated with the latest news.

Next