Advertisement

ಮಸ್ಕ್ ಸ್ಟಾರ್‌ಶಿಪ್‌ ಫೇಲ್‌: ಉಡಾವಣೆಗೊಂಡ ಕೆಲವೇ ಕ್ಷಣದಲ್ಲಿ ವಿಫ‌ಲ

09:51 PM Apr 20, 2023 | Team Udayavani |

ವಾಷಿಂಗ್ಟನ್‌: ಚಂದ್ರ ಮತ್ತು ಮಂಗಳನ ಅಂಗಳದಲ್ಲಿ ಗಗನಯಾತ್ರಿಗಳನ್ನು ತಲುಪಿಸಲು ಉದ್ದೇಶಿಸಿ ಅಭಿವೃದ್ಧಿ ಪಡಿಸಲಾಗಿದ್ದ ಉದ್ಯಮಿ ಎಲಾನ್‌ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್‌ ಸಂಸ್ಥೆಯ ಜಗತ್ತಿನ ಅತಿದೊಡ್ಡ ರಾಕೆಟ್‌ ಸ್ಟಾರ್‌ಶಿಪ್‌, ಮೊದಲ ಪರೀಕ್ಷಾರ್ಥ ಉಡಾವಣೆಯಲ್ಲೇ ಸ್ಫೋಟಗೊಂಡಿದೆ. ಈ ಯೋಜನೆಗಾಗಿ ಮಸ್ಕ್ ಅವರು 24 ಸಾವಿರ ಕೋಟಿ ರೂ. ವೆಚ್ಚ ಮಾಡಿದ್ದರು.

Advertisement

ಟೆಕ್ಸಾಸ್‌ನ ಬೊಕಾಚಿಕಾದಲ್ಲಿರುವ ಸ್ಪೇಸ್‌ಎಕ್ಸ್‌ನ ಬಾಹ್ಯಾಕಾಶ ನಿಲ್ದಾಣವಾದ ಸ್ಟಾರ್‌ಬೇಸ್‌ನಿಂದ ರಾಕೆಟ್‌ ಲಾಂಚ್‌ ಮಾಡಲಾಗಿತ್ತು. ಆದರೆ, ಉಡಾವಣೆಗೊಂಡ ಕೇವಲ ನಾಲ್ಕೇ ನಿಮಿಷದಲ್ಲಿ ರಾಕೆಟ್‌ ಸ್ಫೋಟಗೊಂಡಿದೆ. ಉಡಾವಣೆಗೊಂಡ 3 ನಿಮಿಷಗಳ ಬಳಿಕ ರಾಕೆಟ್‌ ಬೂಸ್ಟರ್‌ನಿಂದ ಕ್ಯಾಪ್ಸುಲ್ ಬೇರ್ಪಡುವಂತೆ ನಿಗದಿ ಪಡಿಸಲಾಗಿತ್ತು. ಆದರೆ, ಈ ಬೇರ್ಪಡುವ ಪ್ರಕ್ರಿಯೆ ಹಂತದಲ್ಲಿಯೇ ವಿಫ‌ಲವಾಗಿದ್ದರಿಂದ ರಾಕೆಟ್‌ ಆಕಾಶದಲ್ಲೇ ಸ್ಫೋಟಗೊಂಡಿದೆ.

ಪರೀಕಾರ್ಥ ಉಡಾವಣೆಯಾಗಿದ್ದ ಕಾರಣ ರಾಕೆಟ್‌ನಲ್ಲಿ ಯಾವುದೇ ಉಪಗ್ರಹ ಅಥವಾ ಯಾತ್ರಿಗಳು ಇರಲಿಲ್ಲ.394 ಅಡಿ ಎತ್ತರ ಹಾಗೂ 90 ಅಡಿ ಅಗಲಿವಿದ್ದ ಸ್ಟಾರ್‌ಶಿಪ್‌ ರಾಕೇಟ್‌, ನಾಸಾ ಚಂದ್ರನ ಕಕ್ಷೆಗೆ ತಲುಪಲು ಇತ್ತೀಚೆಗೆ ಉಡಾವಣೆಗೊಳಿಸಿದ್ದ ಸ್ಪೇಸ್‌ ಲಾಂಚ್‌ ಸಿಸ್ಟಮ್‌(ಎಸ್‌ಎಲ್‌ಎಸ್‌)ಗಿಂತ ಎರಡು ಪಟ್ಟು ಶಕ್ತಿಶಾಲಿಯಾಗಿತ್ತು ಎನ್ನಲಾಗಿದೆ.

ಈ ವೈಫ‌ಲ್ಯಹೊಸ ಪಾಠ ಕಲಿಸಿದೆ. ಇದು ಮುಂದಿನ ಉಡಾವಣೆಗೆ ಸಹಾಯವಾಗಲಿದೆ.
– ಎಲಾನ್‌ ಮಸ್ಕ್, ಉದ್ಯಮಿ

4 ನಿಮಿಷಗಳಲ್ಲೇ ಸ್ಫೋಟ
3 ನಿಮಿಷದ ಬೇರ್ಪಡಿಕೆ ವಿಫ‌ಲ
394 ಅಡಿ ಎತ್ತರದ ಬೃಹತ ರಾಕೆಟ್‌
24 ಸಾವಿರ ಕೋಟಿ ರೂ.- ಮಸ್ಕ್ ಮಾಡಿರುವ ವೆಚ್ಚ

Advertisement
Advertisement

Udayavani is now on Telegram. Click here to join our channel and stay updated with the latest news.

Next