Advertisement

ಮನೆಯಲ್ಲೇ ಇದ್ದು ಜನತಾ ಕರ್ಫ್ಯೂಗೆ ಬೆಂಬಲ ಕೊಟ್ಟ ಸ್ಟಾರ‍್ಸ್

10:01 AM Mar 28, 2020 | Lakshmi GovindaRaj |

ಕೊರೊನಾ ಎಫೆಕ್ಟ್ ಹಿನ್ನೆಲೆಯಲ್ಲಿ ದೇಶಾದ್ಯಂತ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಎಲ್ಲೆಡೆಯಿಂದ ಭರ್ಜರಿ ಬೆಂಬಲ ದೊರೆತಿದೆ. ಕನ್ನಡ ಚಿತ್ರರಂಗ ಕೂಡ ಪ್ರೋತ್ಸಾಹಿಸಿದೆ. ನಟರಾದ ಜಗ್ಗೇಶ್‌, ಪುನೀತ್‌ರಾಜಕುಮಾರ್‌, ಶ್ರೀಮುರಳಿ, ಗಣೇಶ್‌, ತಾರಾ, ರಾಗಿಣಿ, ಹರ್ಷಿಕಾ, ಅದಿತಿ ಪ್ರಭುದೇವ, ಚಿರಂಜೀವಿ ಸರ್ಜಾ ಸೇರಿದಂತೆ ಅನೇಕ ನಟ, ನಟಿಯರು ಕೂಡ ಜನತಾ ಕರ್ಫ್ಯೂಗೆ ಒಮ್ಮತದ ಬೆಂಬಲ ನೀಡಿದ್ದಲ್ಲದೆ, ಆರೋಗ್ಯ ಸೈನಿಕರಿಗೆ ಸಂಜೆ ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಭಾನುವಾರ ಇಡೀ ದಿನ ತಮ್ಮ ಕುಟುಂಬದ ಜೊತೆ ಕಳೆದಿರುವ ಕೆಲ ನಟ, ನಟಿಯರು ಏನೆಲ್ಲಾ ಮಾಡಿದರು ಎಂಬಿತ್ಯಾದಿ ಕುರಿತ ಒಂದು ರೌಂಡಪ್‌.

Advertisement

ದೇವರನ್ನು ನಂಬಿದವರು, ದೇವರ ಮೇಲೆ ಭಕ್ತಿ ಇಟ್ಟುಕೊಂಡವರಿಗೆ ಏನೂ ಆಗುವುದಿಲ್ಲ. ನಾನೂ ನನ್ನ ಕುಟುಂಬ ಜನತಾ ಕರ್ಫ್ಯೂಗೆ ಪ್ರೋತ್ಸಾಹಿಸಿದ್ದೇವೆ. ನಂತರ ಎಲ್ಲರೂ ಚಪ್ಪಾಳೆ ತಟ್ಟಿ ಆರೋಗ್ಯ ಸೈನಿಕರಿಗೆ ಪ್ರೋತ್ಸಾಹಿಸಿದೆವು.
-ಜಗ್ಗೇಶ್‌, ನಟ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದಂತೆ ನಾವು “ಜನತಾ ಕರ್ಫ್ಯೂ’ಗೆ ನಮ್ಮ ಕುಟುಂಬ ಕೂಡ ಸಹಕಾರ ನೀಡಿ ಬೆಂಬಲ ನೀಡಿದೆ. ಕುಟುಂಬದವರ ಜೊತೆ ಕಾಲ ಕಳೆಯುವ ಮೂಲಕ ಮನೆಯಲ್ಲೇ ಕೊರೊನೊ ವಿರುದ್ಧ ಹೋರಾಡಿದ್ದೇವೆ. ಇನ್ನು, ಸಂಜೆ ನಮ್ಮ ಕುಟುಂಬದ ಸದಸ್ಯರೆಲ್ಲರೂ ಈ ಕೊರೊನೊ ವಿರುದ್ಧ ಹೋರಾಡಿದ ಪ್ರತಿಯೊಬ್ಬರಿಗೂ ಚಪ್ಪಾಳೆ ತಟ್ಟುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಿದ್ದೇವೆ. ನಾನು ಮನೆಯಲ್ಲಿದ್ದು, ಇದುವರೆಗೆ ನೋಡಲಾಗದ ಸಿನಿಮಾಗಳನ್ನು ನೋಡುವಂತಾಯಿತು. ಒಟ್ಟಾರೆ, ಭಾನುವಾರ ಮನೆಬಿಟ್ಟು ಎಲ್ಲೂ ಹೋಗಿಲ್ಲ.
-ಚಿರಂಜೀವಿ ಸರ್ಜಾ, ನಟ

ಕೊರೊನಾ ಎಫೆಕ್ಟ್ನಿಂದಾಗಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದರಿಂದ ನಾನು ಮನೆಯಲ್ಲೇ ಇದ್ದು, ಬೆಂಬಲ ವ್ಯಕ್ತಪಡಿಸಿದೆ. ಇನ್ನು, ಸಂಪೂರ್ಣ ಚಿತ್ರೀಕರಣವಿದ್ದುದರಿಂದ ನಾನು ಪುಸ್ತಕ ಓದುವ ಅಭ್ಯಾಸವನ್ನೇ ನಿಲ್ಲಿಸಿದ್ದೆ. ಆದರೆ, ಕೊರೊನಾ ಎಫೆಕ್ಟ್ನಿಂದ ಶೂಟಿಂಗ್‌ ಕ್ಯಾನ್ಸಲ್‌ ಆಗಿತ್ತು. ಹಾಗಾಗಿ ಪುನಃ ಪುಸ್ತಕ ಓದೋಕೆ ಶುರುಮಾಡಿದೆ. ಭಾನುವಾರ ನಾನು ಮನೆಯಲ್ಲಿ ಅಮ್ಮನಿಗೆ ಕೆಲಸದಲ್ಲಿ ನೆರವಾದೆ. ಅಂದು ಕೆಲಸದವರನ್ನು ಕರೆಸದೆ, ನಾನೇ ರೂಮ್‌ ಕ್ಲೀನಿಂಗ್‌ ಇತ್ಯಾದಿ ಕೆಲಸ ಮಾಡಿದೆ. ಇನ್ನು, ಬಹಳ ದಿನಗಳ ಬಳಿಕ “ಬಂಗಾರದ ಮನುಷ್ಯ’ ಚಿತ್ರ ನೋಡುವ ಅವಕಾಶ ಸಿಕ್ಕಿತು. ಸಂಜೆ ಅಪ್ಪ, ಅಮ್ಮ, ಸಹೋದರ ಜೊತೆ ಟೆರೇಸ್‌ ಮೇಲೆ ಹೋಗಿ ನಮಗಾಗಿ ಕೆಲಸ ಮಾಡಿದವರಿಗೆ ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದ್ದೆವು.
-ಅದಿತಿ ಪ್ರಭುದೇವ, ನಟಿ

ನಮ್ಮ ಫ್ಯಾಮಿಲಿ ಹಾಗು ಬೆಂಗಳೂರಿನಲ್ಲಿರುವ ನಮ್ಮ ಫ್ರೆಂಡ್ಸ್‌ ಮತ್ತು ಅವರ ಕುಟುಂಬದವರೆಲ್ಲರೂ ನಮ್ಮ ಮನೆಯಲ್ಲಿ ಸೇರಿ ನಮಗೆ ಇಷ್ಟವಾದಂತಹ ಅಡುಗೆ ಮಾಡಿ ಊಟ ಸೇವಿಸಿದ ಬಳಿಕ ಒಂದಷ್ಟು ಹರಟಿದೆವು. ಆಮೇಲೆ, ಸಂಜೆಯ ಹೊತ್ತಿಗೆ ಎಲ್ಲರೂ ಸೇರಿ ಆರೋಗ್ಯ ಸೈನಿಕರಿಗೆ ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದೆವು.
-ರಾಗಿಣಿ, ನಟಿ

Advertisement

ಮೋದಿಜಿ ಅವರು ಕರೆ ನೀಡಿದ್ದ ಜನತಾ ಕರ್ಫ್ಯೂಗೆ ನಾನು ಸಂಪೂರ್ಣ ಬೆಂಬಲ ನೀಡಿದ್ದೇನೆ. ನಿಜಕ್ಕೂ ಚೆನ್ನಾಗಿತ್ತು. ಈ ಸಮಯದಲ್ಲಿ ನಾನು ಮನೆಯಲ್ಲೇ ಇದ್ದು, ಚೆನ್ನಾಗಿಯೇ ನಿದ್ದೆ ಮಾಡಿದ್ದೇನೆ. ನಾವು ಜಾಗೃತರಾಗಲು ದೇವರೇ ಇದೊಂದು ಅವಕಾಶ ಕೊಟ್ಟಿದ್ದಾರೆ. ಇನ್ನು, ಸಂಜೆ 5 ಗಂಟೆಗೆ ನಾನು ಟೆರೇಸ್‌ ಮೇಲೆ ನಿಂತು ನಮಗಾಗಿ ಕೆಲಸ ಮಾಡಿದ ಪ್ರತಿ ವ್ಯಕ್ತಿಗಳಿಗೂ ಚಪ್ಪಾಳೆ ತಟ್ಟುವ ಕೆಲಸ ಮಾಡಿದ್ದೇನೆ. ನಮ್ಮ ಕಡೆಯಿಂದ ಜನತಾ ಕರ್ಫ್ಯೂಗೆ ಫ‌ುಲ್‌ ಸಪೋರ್ಟ್‌ ಇದೆ.
-ಹರ್ಷಿಕಾ ಪೂಣಚ್ಚ, ನಟಿ

Advertisement

Udayavani is now on Telegram. Click here to join our channel and stay updated with the latest news.

Next