ನವದೆಹಲಿ: ನಕ್ಷತ್ರಗಳ ಅಗಾಧ ಶಕ್ತಿಯನ್ನು ಭಾರತೀಯ ವಿಜ್ಞಾನಿಗಳು ಪತ್ತೆಹಚ್ಚಿದ್ದು, ಸೂರ್ಯ 1 ಲಕ್ಷ ವರ್ಷಗಳಲ್ಲಿ ಹೊರಸೂಸುವಷ್ಟು ಶಕ್ತಿಯನ್ನು ಕೇವಲ ಒಂದು ನಕ್ಷತ್ರವು 0.1 ಸೆಕೆಂಡ್‌ನಲ್ಲಿ ಬಿಡುಗಡೆ ಮಾಡುತ್ತದೆ ಎಂದು ಕಂಡುಕೊಂಡಿದ್ದಾರೆ.
ತಮ್ಮೊಳಗೆ 10ರಿಂದ 25ರಷ್ಟು ಸೂರ್ಯರನ್ನು ಹುದುಗಿಸಿಟ್ಟುಕೊಳ್ಳುವಂಥ ಸಾಮರ್ಥ್ಯವಿರುವ ಬೃಹತ್ ನಕ್ಷತ್ರಗಳೇ ಪತನಗೊಂಡಾಗ, ನ್ಯೂಟ್ರಾನ್ ಸ್ಟಾರ್‌ಗಳು ಹುಟ್ಟುತ್ತವೆ. ಇಂಥ ನಕ್ಷತ್ರಗಳ ಪೈಕಿ ಕೆಲವು ತೀವ್ರ ಕಾಂತೀಯ ಕ್ಷೇತ್ರ ಹೊಂದಿರುತ್ತವೆ. ಇವುಗಳನ್ನು ಮ್ಯಾಗ್ನೆಟಾರ್ಸ್ ಎನ್ನುತ್ತಾರೆ. ಸ್ಪೇನ್‌ನ ವಿಜ್ಞಾನಿ ಪ್ರೊ. ಆಲೆºಟ್ರೋ ಜೆ.ಕಾಸ್ಟ್ರೋ ಅವರ ಜತೆಗೆ ಉತ್ತರಾಖಂಡದ ಆರ್ಯಭಟ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಆಬ್ಸರ್‌ವೆàಷನಲ್ ಸೈನ್ಸಸ್‌ನ ಡಾ.ಶಶಿಭೂಷಣ್ ಪಾಂಡೆ ಕೂಡ ಈ ಅಧ್ಯಯನದಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ:ನಾನು ಎಲ್ಲೂ ಹೋಗುವುದಿಲ್ಲ,ವಿದೇಶ ಪ್ರವಾಸ ರದ್ದಾಗಿದೆ : ಸಿಎಂ ಸ್ಪಷ್ಟನೆ
ನಮ್ಮ ನಕ್ಷತ್ರಪುಂಜದಲ್ಲಿ ಇಂಥ 30 ಬೃಹತ್ ನಕ್ಷತ್ರಗಳಷ್ಟೇ ಪತ್ತೆಯಾಗಿವೆ. ನಿಷ್ಕ್ರಿಯ ಸ್ಥಿತಿಯಲ್ಲೂ ಮ್ಯಾಗ್ನೆಟಾರ್‌ಗಳು ಸೂರ್ಯನಿಗಿಂತ ಸಾವಿರಾರು ಪಟ್ಟು ಹೆಚ್ಚು ಪ್ರಜ್ವಲಿಸುತ್ತವೆ. ಆದರೆ, 2020ರ ಏ.15ರಂದು ಸಂಭವಿಸಿದ ಫ್ಲ್ಯಾಶ್ ಅನ್ನು ಅಧ್ಯಯನ ಮಾಡಿದಾಗ ಅಚ್ಚರಿ ವಿಚಾರ ಬೆಳಕಿಗೆ ಬಂದಿದೆ.
ಕೇವಲ ಒಂದು ಸೆಕೆಂಡಿನ 10ನೇ ಒಂದರಷ್ಟು ಅವಧಿಯಷ್ಟೇ ಈ ಬೆಳಕು ಕಾಣಿಸಿತ್ತು. ಆದರೆ, ಆ ಒಂದು ಮಿಂಚಿನಲ್ಲಿನ ಶಕ್ತಿಯು ಒಂದು ಲಕ್ಷ ವರ್ಷಗಳಲ್ಲಿ ಸೂರ್ಯನು ಬಿಡುಗಡೆ ಮಾಡುವ ಶಕ್ತಿಗೆ ಸಮನಾಗಿತ್ತು.