Advertisement
ಕೊರೊನಾದಿಂದಾಗಿ ಚಿತ್ರಮಂದಿರಗಳಲ್ಲಿ ಶೇ50 ಪ್ರವೇಶಾತಿಯನ್ನಷ್ಟೇ ಸರ್ಕಾರ ನೀಡಿದ್ದು, ಇನ್ನೂ ಹೌಸ್‌ಫುಲ್ ಪ್ರದರ್ಶನಕ್ಕೆ ಅನುಮತಿ ಕೊಟ್ಟಿಲ್ಲ. ಬಹುತೇಕ ಎಲ್ಲಾ ಕ್ಷೇತ್ರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ, ಈ ವಾರಾಂತ್ಯದಲ್ಲಿ ಸರ್ಕಾರ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡು, ಚಿತ್ರಮಂದಿರಗಳಿಗೆ ಪೂರ್ಣ ಪ್ರಮಾಣದ ಪ್ರವೇಶಾತಿಗೆ ಅನುಮತಿ ನೀಡುವ ನಿರೀಕ್ಷೆ ಇದೆ.
Related Articles
Advertisement
ಆರಂಭದಲ್ಲಿ ಆಗಸ್ಟ್ ಮೊದಲ ವಾರದಿಂದ ರಾಜ್ಯದಲ್ಲಿ ಥಿಯೇಟರ್ ಗಳಲ್ಲಿ 100%ರಷ್ಟು ಪ್ರೇಕ್ಷಕರ ಪ್ರವೇಶಾತಿಗೆ ಅವಕಾಶ ಸಿಗಲಿದೆ ಎನ್ನಲಾಗಿತ್ತು. ಹೀಗಾಗಿ ಬಿಡುಗಡೆಗೆ ಸಿದ್ಧವಿರುವ ಬಹುತೇಕ ಸಿನಿಮಾಗಳ ನಿರ್ಮಾಪಕರು ಆಗಸ್ಟ್ ಮೊದಲ ವಾರದ ಬಳಿಕ ತಮ್ಮ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಮಾಡುವ ಯೋಚನೆಯಲ್ಲಿದ್ದರು. ಇದರ ಬೆನ್ನಲ್ಲೇ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ “ಸಲಗ’, “ಭಜರಂಗಿ-2′ ಹೀಗೆ ಒಂದಷ್ಟು ಬಿಗ್ ಬಜೆಟ್ ಮತ್ತು ಬಿಗ್ ಸ್ಟಾರ್ ಸಿನಿಮಾಗಳು ತಮ್ಮ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದರಿಂದ, ಚಿತ್ರರಂಗದಲ್ಲಿ ಮತ್ತೆ ಒಂದಷ್ಟು ನಿರೀಕ್ಷೆ, ಬಿಡುಗಡೆ ಚಟುವಟಿಕೆ ಸಣ್ಣಗೆ ಗರಿಗೆದರಿತ್ತು.
ಇನ್ನು ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆದರೆ ಮತ್ತೆ ತಮ್ಮ ಸಿನಿಮಾಗಳ ರಿಲೀಸ್ ಗೆ ಥಿಯೇಟರ್ ಕೊರತೆ ಎದುರಾಗಬಹುದು ಎಂಬ ಲೆಕ್ಕಚಾರದಿಂದ ಒಂದಷ್ಟು ಹೊಸಬರ ಸಿನಿಮಾಗಳು ಈ ಗ್ಯಾಪ್‌ನಲ್ಲಿಯೇ ತೆರೆಗೆ ಬರೋಣ ಎಂದು ಅಂದಾಜಿಸಿದ್ದವು. ಆದರೆ, ಆಗ ಅನುಮತಿ ಸಿಗದ ಕಾರಣ, ಸ್ಟಾರ್ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದು ಪೂರ್ಣ ಪ್ರವೇಶಕ್ಕೆ ನಿರೀಕ್ಷೆಯಲ್ಲಿವೆ.