Advertisement

ತಾರಾ ವರ್ಚಸ್ಸಿನ 7 ಕ್ಷೇತ್ರಗಳು

10:53 AM May 18, 2019 | keerthan |

ಮಥುರಾ (ಉತ್ತರ ಪ್ರದೇಶ)
ಹೇಮಮಾಲಿನಿ (ಬಿಜೆಪಿ) Vs ಕುನ್ವರ್‌ ನರೇಂದ್ರ ಸಿಂಗ್‌ (ಆರ್‌ಎಲ್‌ಡಿ)
* ಜಾಟ್‌ ಸಮುದಾಯದ ಪ್ರಾಬಲ್ಯದ ಕ್ಷೇತ್ರದಲ್ಲಿ ಕಳೆದ ಬಾರಿ ಕನಸಿನ ಕನ್ಯೆ ಗೆದ್ದಿದ್ದರು. ಮೋದಿ ಅಲೆಯೂ ಅವರಿಗೆ ಸಹಕಾರಿಯಾಗಿತ್ತು.
* ಈ ಬಾರಿ ಎಸ್‌ಪಿ ಮತ್ತು ಬಿಎಸ್‌ಪಿ ಮತಗಳು
ಆರ್‌ಎಲ್‌ಡಿ ಅಭ್ಯರ್ಥಿಗೆ ಹೋಗಲಿದೆ ಎಂಬ ಅಳುಕು.
* ಐದು ವಿಧಾನಸಭಾ ಕ್ಷೇತ್ರಗಳ ಪೈಕಿ, 4ರಲ್ಲಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್‌ ಕಣದಲ್ಲಿರುವುದು ಹೇಮಮಾಲಿನಿಗೆ ಅನುಕೂಲ.

Advertisement

ಮುಂಬೈ ಉತ್ತರ (ಮಹಾರಾಷ್ಟ್ರ)
ಗೋಪಾಲ್‌ ಶೆಟ್ಟಿ (ಬಿಜೆಪಿ) Vs ಊರ್ಮಿಳಾ ಮಾತೊಂಡ್ಕರ್‌ (ಕಾಂಗ್ರೆಸ್‌)
* 1989ರಿಂದಲೇ ಬಿಜೆಪಿ ಹಿಡಿತದಲ್ಲಿದ್ದ ಕ್ಷೇತ್ರವನ್ನು 2004ರಲ್ಲಿ ಕಾಂಗ್ರೆಸ್‌ ಗೆದ್ದಿತ್ತು.
* 2014ರಲ್ಲಿ ಮೋದಿ ಅಲೆಯಲ್ಲಿ ಕರ್ನಾಟಕ ಮೂಲದ ಗೋಪಾಲ್‌ ಶೆಟ್ಟಿ ಗೆದ್ದಿದ್ದಾರೆ.
* ಪ್ರಸಕ್ತ ಸಾಲಿನಲ್ಲಿ ಬಾಲಿವುಡ್‌ ನಟಿ ಊರ್ಮಿಳಾ ಮಾತೊಂಡ್ಕರ್‌ ಸ್ಪರ್ಧಿಸಿರುವುದು ಕಣಕ್ಕೆ ರಂಗೇರಿಸಿದೆ. ಊರ್ಮಿಳಾ ಬಿಜೆಪಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ.

ಗುರುದಾಸ್‌ಪುರ (ಪಂಜಾಬ್‌)
ಸನ್ನಿ ದೇವಲ್‌ (ಬಿಜೆಪಿ) Vs ಸುನಿಲ್‌ ಜಾಖಡ್‌ (ಕಾಂಗ್ರೆಸ್‌)
* ನಟ ಸನ್ನಿ ದೇವಲ್‌ ಸ್ಪರ್ಧೆಯಿಂದ ಈ ಕ್ಷೇತ್ರ ತಾರಾ ವರ್ಚಸ್ಸು ಪಡೆದಿದೆ. ಕಾಂಗ್ರೆಸ್‌ ನಾಯಕ ಸುನಿಲ್‌ ಜಾಖಡ್‌ ಕಣದಲ್ಲಿದ್ದಾರೆ.
* 1998ರಲ್ಲಿ ಬಿಜೆಪಿ ಸೇರಿದ್ದ ನಟ ವಿನೋದ್‌ ಖನ್ನಾ ಈ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್‌ ಜಯಕ್ಕೆ ಬ್ರೇಕ್‌ ಹಾಕಿದ್ದರು.
* 2017ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಜಾಖಡ್‌ ಗೆದ್ದಿದ್ದರು. ಸನ್ನಿ ದೇವಲ್‌ ಪರವಾಗಿ ಬಿಜೆಪಿ ಪ್ರಮುಖರು ಪ್ರಚಾರ ನಡೆಸಿದ್ದಾರೆ.

ಚಂಡೀಗಢ (ಪಂಜಾಬ್‌)
ಪಿ.ಕೆ.ಬನ್ಸಲ್‌ (ಕಾಂಗ್ರೆಸ್‌) Vs ಕಿರಣ್‌ ಖೇರ್‌ (ಬಿಜೆಪಿ)
* ಚಂಡೀಗಢ ಲೋಕಸಭಾ ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯಂತೆ ಈ ಬಾರಿಯೂ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಪ್ರಬಲ ಸ್ಪರ್ಧೆಯ ನಿರೀಕ್ಷೆ.
* ಈ ಬಾರಿ ಆಪ್‌ ಹುರಿಯಾಳು ಬದಲಾಗಿ, ಹರ್‌ ಮೋಹನ್‌ ಧವನ್‌ ಕಣಕ್ಕೆ.
* ಪ್ರಧಾನಿ ಮೋದಿ, ಅಮಿತ್‌ ಶಾ ಸೇರಿದಂತೆ ಬಿಜೆಪಿಯ ಅಗ್ರೇಸರರಿಂದ ಕಿರಣ್‌ ಪರ ಪ್ರಚಾರ.

ಪೂರ್ವ ದೆಹಲಿ (ನವದೆಹಲಿ)
ಆತಿಶಿ ಮರ್ಲೆನಾ (ಆಪ್‌) Vs ಗೌತಮ್‌ ಗಂಭೀರ್‌ (ಬಿಜೆಪಿ)


* ಮಾಜಿ ಕ್ರಿಕೆಟಿಗ ಗಂಭೀರ್‌ ಕಣದಲ್ಲಿರುವುದು ಬಿಜೆಪಿಗೆ ತಾರಾ ವರ್ಚಸ್ಸು ತಂದಿದೆ. ಗಂಭೀರ್‌ ಪ್ರಬಲ ಸ್ಪರ್ಧೆ ಎದುರೊಡ್ಡುತ್ತಿದ್ದಾರೆ
* ಗಂಭೀರ್‌ ತಮ್ಮ ತೇಜೋವಧೆ ಮಾಡುವಂಥ ಕರಪತ್ರ ಹಂಚಿದ್ದಾರೆ ಎಂಬ ಆತಿಶಿಯವರ ಆರೋಪವು ವಿವಾದದ ರೂಪ ಪಡೆದಿತ್ತು
* 10 ವಿಧಾನಸಭಾ ಕ್ಷೇತ್ರಗಳಲ್ಲಿ 9ರಲ್ಲಿ ಆಪ್‌ ಶಾಸಕರು ಇರುವುದು ಆತಿಶಿಗೆ ಧನಾತ್ಮಕ ಅಂಶ.

Advertisement

ದಕ್ಷಿಣ ದೆಹಲಿ (ನವದೆಹಲಿ)
ಶೀಲಾ ದೀಕ್ಷಿತ್‌ (ಕಾಂಗ್ರೆಸ್‌) Vs ಮನೋಜ್‌ ತಿವಾರಿ (ಬಿಜೆಪಿ)
* ಶೀಲಾ ದೀಕ್ಷಿತ್‌ ಸ್ಪರ್ಧಿಸಿರುವುದು ಕಾಂಗ್ರೆಸ್‌ಗೆ ಪ್ಲಸ್‌ ಪಾಯಿಂಟ್‌.
* ಹಾಲಿ ಸಂಸದ, ನಟ, ಭೋಜ್‌ಪುರಿ ಗಾಯಕ ಮನೋಜ್‌ ತಿವಾರಿ ಅವರಿಗಿದೆ ಬಹುದೊಡ್ಡ ಬೆಂಬಲಿಗ ಪಡೆ.
* ಪೂರ್ವಾಂಚಲಕ್ಕೆ (ಬಿಹಾರ ಮತ್ತು ಉತ್ತರಪ್ರದೇಶ) ಸೇರಿದ ಜನರೇ ಈ ಲೋಕಸಭಾ ವ್ಯಾಪ್ತಿಯಲ್ಲಿ ಹೆಚ್ಚು ಇದ್ದಾರೆ.

ಜೈಪುರ ಗ್ರಾ. (ರಾಜಸ್ಥಾನ)
ರಾಜ್ಯವರ್ಧನ್‌ ರಾಥೋಡ್‌ (ಬಿಜೆಪಿ) Vs ಕೃಷ್ಣ ಪೂನಿಯಾ (ಕಾಂಗ್ರೆಸ್‌)
* ಒಲಿಂಪಿಂಕ್‌ ಕ್ರೀಡಾ ಕೂಟದಲ್ಲಿ ಪದಕ ಗೆದ್ದ ಇಬ್ಬರು ಕ್ರಿಡಾಪಟುಗಳು ಈ ಬಾರಿ ಮುಖಾಮುಖೀಯಾಗಿದ್ದಾರೆ.
* ಕಾಂಗ್ರೆಸ್‌ ಅಭ್ಯರ್ಥಿ ಕೃಷ್ಣ ಪೂನಿಯಾ ಅವರು ಜನಪ್ರಿಯ ಶಾಸಕಿಯಾಗಿಯೂ ಹೆಸರು ಮಾಡಿದವರು.
* ರಜಪೂತ (ರಾಥೋಡ್‌), ಪೂನಿಯಾ (ಜಾಟ್‌) ಸಮುದಾಯದ ನಡುವೆ ಹೋರಾಟದ ವಿಶ್ಲೇಷಣೆ.

Advertisement

Udayavani is now on Telegram. Click here to join our channel and stay updated with the latest news.

Next