Advertisement

“ಹರಿವ ನೀರಿಗೆ ನಿಲ್ಲೆಂದ, ನಿಂತ ನೀರು ಸಂಗ್ರಹಿಸಿದ”

02:38 PM Mar 22, 2022 | Team Udayavani |

ಬೀದರ: ಬೀದರ ಸತತ ಬರದ ತೆಕ್ಕೆಗೆ ಜಾರುವ ಜಿಲ್ಲೆ. ಆದರೆ, ಇಲ್ಲಿನ ಚಿಟ್ಟಾವಾಡಿಯ ಪ್ರಯೋಗಶೀಲ ಕೃಷಿಕ ಮಹ್ಮದ್‌ ಜಾಫರ್‌ “ಜಲ ಮರುಪೂರಣ’ ಮೂಲಕ ಬಹು ಬೆಳೆ ಬೆಳೆದು ರೈತ ವಿಜ್ಞಾನಿ ಎನಿಸಿಕೊಂಡಿದ್ದಾನೆ.

Advertisement

ಬಿದ್ದ ಮಳೆ ನೀರಿನಲ್ಲಿ ಶೇ.2ರಷ್ಟು ಮಾತ್ರ ಭೂಮಿಯೊಳಗೆ ಇಳಿದು, ಉಳಿದದ್ದು ಹರಿದು ಹೋಗುವುದರಿಂದ ನಮಗೇನು ಲಾಭ ಎಂದು ಅರಿತ ರೈತ, ಹರಿದು ಪೋಲಾಗುವ ಮಳೆ ನೀರು ಸಂಗ್ರಹಣೆ, ತೆರೆದ ಬಾವಿಗೆ ಜಲ ಮರುಪೂರಣ, ಇಂಗು ಹೊಂಡ ನಿರ್ಮಾಣದ ಮೂಲಕ ನೀರು ಸದ್ಬಳಕೆ ಮಾಡಿಕೊಳ್ಳುವ ವಿಧಾನ ಅನುಸರಿಸುತ್ತಿದ್ದಾನೆ.

ಬೆಟ್ಟ, ಹಳ್ಳದ ಮೂಲಕ ಹರಿದು ಬರುವ ನೀರನ್ನು ಹಿಡಿದಿಟ್ಟುಕೊಳ್ಳಲು 500 ಅಡಿ ಉದ್ದದ ಚೆಕ್‌ ಡ್ಯಾಂ ಮತ್ತು ಅದರ ಎದುರಿಗೆ 400 ಅಡಿಯ ಇಂಗು ಹೊಂಡ ನಿರ್ಮಿಸಿಕೊಂಡಿದ್ದಾನೆ. ಹಾಗಾಗಿ ಬರಗಾಲ ಸ್ಥಿತಿಯಲ್ಲೂ ಇಲ್ಲಿನ ಬಾವಿ ನೀರಿನಿಂದ ತುಂಬಿಕೊಂಡಿರುತ್ತದೆ.

ಈ ನೀರಿನಲ್ಲಿ ತಮ್ಮ 12 ಎಕರೆ ಜಮೀನಿನಲ್ಲಿ ವಿವಿಧ ಬಗೆ ಹಣ್ಣು- ತರಕಾರಿ ಬೆಳೆಯುತ್ತಿದ್ದಾರೆ. ಓದಿದ್ದು ಎಸ್ಸೆಸ್ಸೆಲ್ಸಿ ಆದರೂ, ಕೃಷಿ ವಿಜ್ಞಾನಿಗಳಂತೆ ಈ ರೈತನ ಕೃಷಿ ಪ್ರಯೋಗಗಳು ಒಂದೆರಡಕ್ಕೆ ನಿಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next