Advertisement
ಸುಮಾರು 54 ಬಗೆಯ ನೋಂದಣಿಯೇತರ ಒಡಂಬಡಿಕೆ ಗಳಿಗಾಗಿ ಸ್ಟಾಂಪ್ ಪೇಪರ್ಗಳು ಬಳಕೆಯಾಗುತ್ತವೆ. ಮನೆ, ವಾಣಿಜ್ಯ ಮಳಿಗೆ ಒಪ್ಪಂದ ಪತ್ರ, ಸಾಲ, ಟೆಂಡರ್, ಸಾಮಗ್ರಿ ಸರಬರಾಜು ಸಹಿತ ಅನೇಕ ವಿಧದ ದಸ್ತಾವೇಜುಗಳು, ಎಸ್ಕಾಂಗಳಿಂದ ಗೃಹಬಳಕೆ ಹಾಗೂ ವಾಣಿಜ್ಯ ವಿದ್ಯುತ್ ಸಂಪರ್ಕ ಸೇರಿ ಸರಕಾರದ ಜತೆಗೆ ನಡೆಸುವ ಎಲ್ಲ ವಿಧದ ಒಡಂಬಡಿಕೆ ಸಂದರ್ಭದಲ್ಲಿ ಸ್ಟಾಂಪ್ ಪೇಪರ್ ಅಗತ್ಯವಾಗಿ ಬೇಕಾಗುತ್ತದೆ. ಆದರೆ “ತೆಲಗಿ ಛಾಪಾ ಕಾಗದ ಹಗರಣ’ ಮಾದರಿಯಲ್ಲಿ ಒಂದು ದಶಕದಿಂದ ಸ್ಟ್ಯಾಂಪ್ ಪೇಪರ್ಗಳ ಕಲರ್ ಝೆರಾಕ್ಸ್ ತೆಗೆದು ಅದಕ್ಕೆ ಸಬ್ ರಿಜಿಸ್ಟ್ರಾರ್ಗಳ ಸೀಲು-ಸಹಿ ಹಾಕಿ ಸರಕಾರದ ಆದಾಯಕ್ಕೆ ದೋಖಾ ಮಾಡುತ್ತಿರುವುದನ್ನು ಕಂದಾಯ ಇಲಾಖೆ ಪತ್ತೆ ಹಚ್ಚಿದೆ.
Related Articles
Advertisement
ಉಪನೋಂದಣಾಧಿಕಾರಿಗಳು ತಮ್ಮ ಸೀಲು-ಸಹಿಯನ್ನು ಈ ಪತ್ರಕ್ಕೆ ಹಾಕಿ ಸರಕಾರದ ಆದಾಯದ ಸೋರಿಕೆಯಲ್ಲಿ ಕೈ ಜೋಡಿಸಿದ್ದಾರೆ. ಯಾವುದೋ ಒಂದು ಪ್ರಭಾವಿ ಜಾಲ ಈ ಸ್ಟ್ಯಾಂಪ್ ಪೇಪರ್ ನಕಲಿ ಮುದ್ರಣದ ಹಿಂದೆ ಇದೆ ಎಂಬ ಅನುಮಾನವೂ ಇದೆ. ಹೀಗಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸೆಕ್ಷನ್ 10ಎ ಅಧಿಕಾರವನ್ನು ಸಬ್ ರಿಜಿಸ್ಟ್ರಾರ್ಗಳಿಂದ ಕಸಿ ದು ಕೊಂಡರೆ ಅವ್ಯವಹಾರ ತಡೆಯಬಹುದೆಂಬುದು ಲೆಕ್ಕಾಚಾರವಾಗಿದೆ.
ಬಜೆಟ್ ಅಧಿವೇಶನದಲ್ಲಿ ಮಂಡನೆ?ಈ ವ್ಯವಸ್ಥೆಯನ್ನು ಜಾರಿಗೆ ತರಬೇಕಿದ್ದರೆ ಹಾಲಿ ಇರುವ ಕಂದಾಯ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. ಸಬ್ ರಿಜಿಸ್ಟ್ರಾರ್ಗಳಿಗೆ ನೀಡಿರುವ ಈ ವಿಶೇಷ ಅಧಿಕಾರವನ್ನು ವಾಪಸ್ ಪಡೆಯುವುದಕ್ಕೂ ಕಾನೂನು ತಿದ್ದುಪಡಿ ಅಗತ್ಯ ವಾಗುತ್ತದೆ. ಹೀಗಾಗಿ ಮುಂದಿನ ಬಜೆಟ್ ಅಧಿವೇಶನ ಸಂದರ್ಭದಲ್ಲಿ ತಿದ್ದುಪಡಿ ಕಾಯ್ದೆಯನ್ನು ಮಂಡಿಸಿ ಹೊಸ ವ್ಯವಸ್ಥೆ ಜಾರಿಗೆ ತರಲು ಸರಕಾರದ ಹಂತದಲ್ಲಿ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ. 2600 ಗುತ್ತಿಗೆದಾರರಿಗೆ ನೋಟಿಸ್
ಎಸ್ಕಾಂ ವ್ಯಾಪ್ತಿಯಲ್ಲಿನ 70 ಸಾವಿರ ಗುತ್ತಿಗೆದಾರರು ಸರಕಾರದ ಜತೆಗಿನ ಒಡಂಬಡಿಕೆ ಸಂದರ್ಭದಲ್ಲಿ ಕಲರ್ ಝೆರಾಕ್ಸ್ ಮಾರ್ಗವನ್ನೇ ಹಿಡಿದಿದ್ದಾರೆ ಎಂಬುದು ಆಡಿಟ್ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಕಳೆದ 2 ತಿಂಗಳು ಅವಧಿಯಲ್ಲಿ ಈ ಕಾರಣಕ್ಕಾಗಿ ಸುಮಾರು 2,600 ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ರಾಘವೇಂದ್ರ ಭಟ್