ಮಣಿಪಾಲ: ಮಣಿಪಾಲದ ಮಾಹೆ ವಿವಿ ಆಸರೆಯಲ್ಲಿ, ಪರ್ಕಳದ ನೇತಾಜಿ ನ್ಪೋರ್ಟ್ಸ್ ಕ್ಲಬ್ ಸಹಕಾರದೊಂದಿಗೆ ಇಲ್ಲಿನ “ಮರೆನಾ ಕ್ರೀಡಾ ಸಂಕೀರ್ಣ’ದಲ್ಲಿ ನಡೆದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕರಾವಳಿ ಶಿಕ್ಷಣ ಸಿಬಂದಿಯ ಟೆನಿಸ್ ಪಂದ್ಯಾವಳಿಯಲ್ಲಿ ಮಂಗಳೂರು ವಿವಿ ಕಾಲೇಜಿನ ದಯಕರ್ ಅವರು ಹಿರಿಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ.
ಕಿರಿಯರ ಸಿಂಗಲ್ಸ್‌ನಲ್ಲಿ ತೆಂಕ ನಿಡಿಯೂರು ಕಾಲೇಜಿನ ರಾಮಚಂದ್ರ ಪಾಟ್ಕರ್ ಪ್ರಶಸ್ತಿ ಜಯಿಸಿದ್ದಾರೆ. ಫೈನಲ್‌ನಲ್ಲಿ ಇವರು ಕ್ರಮವಾಗಿ ಡಾ| ಉಪೇಂದ್ರ ನಾಯಕ್, ಫಿಡಿ ಡೇವಿಸ್ ವಿರುದ್ಧ ಜಯ ಸಾಧಿಸಿದರು.
ಹಿರಿಯರ ಡಬಲ್ಸ್‌ನಲ್ಲಿ ದಯಕರ್-ಉಪೇಂದ್ರ ನಾಯಕ್ ಜೋಡಿ ಪ್ರಥಮ, ಬಾಲಕೃಷ್ಣ ಪರ್ಕಳ-ರಮೇಶ್ ನಾಯಕ್ ಜೋಡಿ ದ್ವಿತೀಯ ಸ್ಥಾನ ಪಡೆಯಿತು. ಕಿರಿಯರ ಡಬಲ್ಸ್‌ನಲ್ಲಿ ಎನ್‌ಐಟಿಕೆ ಸುರತ್ಕಲ್‌ನ ಹರಿಪ್ರಸಾದ್-ನಾಗೇಶ್ ಜೋಡಿಯು ಡಾ| ಯೋಗೇಶ್-ಉನ್ನಿಕೃಷ್ಣನ್ ಜೋಡಿ ಯನ್ನು ಸೋಲಿಸಿ ಪ್ರಶಸ್ತಿ ಜಯಿಸಿತು.
ಮಣಿಪಾಲ ಎಂಐಟಿಯ ಜಂಟಿ ನಿರ್ದೇಶಕ ಬಿ.ಎಚ್.ವಿ. ಪೈ ಬಹು ಮಾನ ವಿತರಿಸಿದರು. ನೇತಾಜಿ ನ್ಪೋರ್ಟ್ಸ್
ಕ್ಲಬ್‌ನ ಅಧ್ಯಕ್ಷ ಬಾಲಕೃಷ್ಣ ಪರ್ಕಳ ಸ್ವಾಗತಿಸಿ, ರಾಮಚಂದ್ರ ಪಾಟ್ಕರ್ ವಂದಿಸಿ, ಶ್ರೀಧರ್ ಹಂದ್ರಟ್ಟ ಪಂದ್ಯಾ ವಳಿಯ ನಿರ್ವಹಣೆ ವಹಿಸಿದ್ದರು.