Advertisement
ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಕಚೇರಿಯಲ್ಲಿ ಒಟ್ಟು 157ಮಂಜೂರಾತಿ ಹುದ್ದೆಗಳಿದ್ದು ಇದರಲ್ಲಿ 94 ಹುದ್ದೆಗಳು ಭರ್ತಿಯಾಗಿವೆ. ಉಳಿದ 63ಹುದ್ದೆಗಳು ಖಾಲಿ ಇವೆ. ದಾವಣಗೆರೆ ಅಗ್ನಿಶಾಮಕ ಠಾಣೆಯಲ್ಲಿ 18 , ಹರಿಹರ ಅಗ್ನಿಶಾಮಕ ಠಾಣೆಯಲ್ಲಿ 11, ಹೊನ್ನಾಳಿ ಅಗ್ನಿಶಾಮಕ ಠಾಣೆಯಲ್ಲಿ 14, ಚನ್ನಗಿರಿ ಅಗ್ನಿಶಾಮಕ ಠಾಣೆಯಲ್ಲಿ 10 ಹಾಗೂ ಜಗಳೂರು ಅಗ್ನಿಶಾಮಕ ಠಾಣೆಯಲ್ಲಿ 10 ಹುದ್ದೆಗಳು ಖಾಲಿ ಇವೆ.
ದಾವಣಗೆರೆ, ಹೊನ್ನಾಳಿ, ಚನ್ನಗಿರಿ ಅಗ್ನಿಶಾಮಕ ಠಾಣೆಗಳಲ್ಲಿ ಠಾಣಾಧಿಕಾರಿಗಳೇ ಇಲ್ಲ. ಜಗಳೂರಿನಲ್ಲಿ ಸಹಾಯಕ ಠಾಣಾಧಿಕಾರಿಯೂ ಇಲ್ಲದ ಪರಿಸ್ಥಿತಿ ಇದೆ. ಹೊನ್ನಾಳಿ ಹಾಗೂ ಜಗಳೂರು ಠಾಣೆಗಳಲ್ಲಿ ಚಾಲಕ ತಂತ್ರಜ್ಞರು ಒಬ್ಬರೂ ಇಲ್ಲ. ಇದೇ ಠಾಣೆಗಳಲ್ಲಿ ಪ್ರಮುಖ ಅಗ್ನಿಶಾಮಕರ ಕೊರತೆಯೂ ಇದೆ. ಈ ತುರ್ತು ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವ
ಅಗ್ನಿಶಾಮಕರ ಸಂಖ್ಯೆಯೂ ಅರ್ಧಕ್ಕರ್ಧ ಖಾಲಿ ಇದೆ. ಇದನ್ನೂ ಓದಿ :ಡಿಕೆಶಿ ಯಾವುದೇ ತಪ್ಪು ಮಾಡಿಲ್ಲಾ ಎಂದಾದರೆ ತನಿಖೆ ಎದುರಿಸಲಿ ;ಈಶ್ವರಪ್ಪ
Related Articles
ಚಾಲಕರು 25, ಅಗ್ನಿಶಾಮಕರು 92 ಹೀಗೆ ಒಟ್ಟು 157 ಮಂಜೂರಾತಿ ಹುದ್ದೆಗಳಿವೆ. ಆದರೆ, ಅಗ್ನಿಶಾಮಕ ಠಾಣಾಧಿಕಾರಿಗಳ ಮೂರು ಹುದ್ದೆ, ಸಹಾಯಕ ಠಾಣಾಧಿಕಾರಿಗಳ ಮೂರು ಹುದ್ದೆ, ಚಾಲಕ ತಂತಜ್ಞರ ಎರಡು ಹುದ್ದೆ, ಪ್ರಮುಖ ಅಗ್ನಿಶಾಮಕರ ಎರಡು ಹುದ್ದೆ, ಅಗ್ನಿಶಾಮಕ ಚಾಲಕರ ನಾಲ್ಕು ಹುದ್ದೆ ಹಾಗೂ 49 ಅಗ್ನಿಶಾಮಕರ ಹುದ್ದೆ ಖಾಲಿ ಇವೆ.
Advertisement
ಇದನ್ನೂ ಓದಿ :ಚಿತ್ರದುರ್ಗ ಜಿಲ್ಲೆಯಲ್ಲಿ 182 ಜನರಿಗೆ ಕೋವಿಡ್, ಸೋಂಕಿತರ ಸಂಖ್ಯೆ 8,292ಕ್ಕೆ ಏರಿಕೆ
ಜಿಲ್ಲಾ ಅಗ್ನಿಶಾಮಕ ಕಚೇರಿಯಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹುದ್ದೆ ಒಂದು, ಅಗ್ನಿಶಾಮಕ ಠಾಣಾಧಿಕಾರಿಗಳು ಎರಡು, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಗಳು ನಾಲ್ಕು, ಚಾಲಕ ತಂತ್ರಜ್ಞರು ಮೂರು, ಪ್ರಮುಖ ಅಗ್ನಿಶಾಮಕರು 20, ಅಗ್ನಿಶಾಮಕ ಚಾಲಕರು 21, ಅಗ್ನಿಶಾಮಕರು 43 ಹೀಗೆ ಒಟ್ಟು 94 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಸಿಬ್ಬಂದಿ ಕೊರತೆ ನಡುವೆಯೂ ಅಗ್ನಿಶಾಮಕದಳ ಇರುವಷ್ಟು ಸಿಬ್ಬಂದಿಗಳನ್ನು ಬಳಸಿಕೊಂಡು ತುರ್ತು ಸೇವೆಯಲ್ಲಿ ನಿರತವಾಗಿದೆ. ಸರಕಾರ ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ತುರ್ತು ಸೇವೆಗೆ ಇನ್ನಷ್ಟು ಬಲ ತುಂಬಬೇಕಿದೆ.
– ಎಚ್.ಕೆ. ನಟರಾಜ