Advertisement
ಲೈನ್‌ಮೆನ್ ಹುದ್ದೆಎರಡು ಡಿವಿಷನ್ ವ್ಯಾಪ್ತಿಯಲ್ಲಿ ತುರ್ತಾಗಿ ಕಾರ್ಯನಿರ್ವಹಣೆಗೆ ಅಗತ್ಯವಿರುವ ಲೈನ್ ಮೆನ್ ಹುದ್ದೆ ಖಾಲಿ ಇವೆ. ಸುಳ್ಯ ಶಾಖೆಯಲ್ಲಿ 34 ಮಂಜೂರಾತಿ ಹುದ್ದೆಯಲ್ಲಿ 10, ಬೆಳ್ಳಾರೆ ಶಾಖೆಯಲ್ಲಿ 31ರಲ್ಲಿ 8, ಆರಂತೋಡು ಶಾಖೆಯಲ್ಲಿ 21ರಲ್ಲಿ 6, ಜಾಲ್ಸೂರು ಶಾಖೆಯಲ್ಲಿ 24ರಲ್ಲಿ 11 ಹುದ್ದೆಗಳು ಭರ್ತಿ ಆಗಿಲ್ಲ. ಸುಬ್ರಹ್ಮಣ್ಯ ಉಪ ವಿಭಾಗದಲ್ಲಿ ಸುಬ್ರಹ್ಮಣ್ಯ ಶಾಖೆಯಲ್ಲಿ 23ರಲ್ಲಿ 10, ಗುತ್ತಿಗಾರು ಶಾಖೆಯಲ್ಲಿ 19ರಲ್ಲಿ 7, ಪಂಜ ಶಾಖೆಯಲ್ಲಿ 21ರಲ್ಲಿ 9 ಹುದ್ದೆಗಳು ಖಾಲಿ ಇವೆ. ಸುಳ್ಯ ಡಿವಿಷನ್‌ನಲ್ಲಿ 33 ಕೆವಿ, ಲೈನ್‌ಮನ್, ಕಚೇರಿ ಸಿಬಂದಿ ಸೇರಿ 145 ಮಂಜುರಾತಿ ಹುದ್ದೆಗಳಿದ್ದು, ಅದರಲ್ಲಿ 87 ಭರ್ತಿ ಆಗಿವೆ. ಉಳಿದ 58 ಹುದ್ದೆಗಳು ಖಾಲಿ ಇವೆ. ಸುಬ್ರಹ್ಮಣ್ಯ ವಿಭಾಗದಲ್ಲಿ ಮಂಜೂರಾತಿ 79 ಹುದ್ದೆಗಳ ಪೈಕಿ 41 ಭರ್ತಿ ಆಗಿವೆ. 38 ಖಾಲಿ ಇವೆ. ಾಲೂಕಿನಲ್ಲಿ 224 ಮಂಜೂರಾತಿ ಹುದ್ದೆಗಳ ಪೈಕಿ 96ರಲ್ಲಿ ಸಿಬಂದಿ ಇಲ್ಲ.
ಸಬ್ ಡಿವಿಷನ್ ಕಚೇರಿಗಳಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸ್ಥಾನಗಳೇ ಅಪೂರ್ಣವಾಗಿವೆ. ಪುತ್ತೂರು ಉಪವಿಭಾಗದಲ್ಲಿ 8 ಮಂಜೂರಾತಿ ಹುದ್ದೆಗಳಿದ್ದು, ಅದರಲ್ಲಿ 7 ಖಾಲಿ ಇವೆ. ಪುತ್ತೂರು ಗ್ರಾಮಾಂತರ ಕಚೇರಿಯಲ್ಲಿ ಮಾತ್ರ ಆ ಹುದ್ದೆ ಭರ್ತಿ ಆಗಿದೆ. ಉಳಿದಂತೆ ಪುತ್ತೂರು ನಗರ, ಸುಳ್ಯ, ಸುಬ್ರಹ್ಮಣ್ಯ, ಕಡಬಗಳಲ್ಲಿ ಸೆಕ್ಷನ್ ಆಫೀಸರ್ ಗಳೇ ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಸೆಕ್ಷನ್ ಆಫೀಸರ್ ಗಳು ಕ್ಷೇತ್ರ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಭೇಟಿ ನೀಡುವುದು ಅಗತ್ಯವಾಗಿದ್ದರೂ, ಪ್ರಭಾರ ಹುದ್ದೆ ಅವರ ಮೂಲ ಕರ್ತವ್ಯಕ್ಕೆ ಅಡ್ಡಿಪಡಿಸಿದೆ. 53,960 ಸಂಪರ್ಕ
ತಾಲೂಕಿನಲ್ಲಿ 37,099 ಗೃಹ ಬಳಕೆದಾರರು, 4,552 ವಾಣಿಜ್ಯ, 11,021 ಕೃಷಿ ಪಂಪ್‌ಸೆಟ್, 439 ಕೈಗಾರಿಕೆ, 423 ಕುಡಿಯುವ ನೀರು, 315 ದಾರಿದೀಪ, 81 ತಾತ್ಕಾಲಿಕ ಸಹಿತ ಒಟ್ಟು 53,960 ವಿದ್ಯುತ್ ಸಂಪರ್ಕಗಳಿವೆ. ಪುತ್ತೂರು ತಾಲೂಕಿನ ಮಾಡಾವಿನಲ್ಲಿ 110 ಕೆವಿ ಸಬ್ ಸ್ಟೇಷನ್ ನಿರ್ಮಾಣದ ಹಂತದಲ್ಲಿದ್ದರೆ, ಸುಳ್ಯದಲ್ಲಿ 110 ಕೆವಿ ಸಬ್‌ಸ್ಟೇಷನ್ ಸರ್ವೆ ಕಾರ್ಯ ಹಂತದಲ್ಲಿ ಮೊಟಕುಗೊಂಡಿದೆ. ಇವೆರಡೂ ಪೂರ್ಣಗೊಳ್ಳುವ ಜತೆಗೆ ಸಿಬಂದಿ ನೇಮಕಕ್ಕೂ ಕ್ರಮ ಕೈಗೊಳ್ಳಬೇಕಿದೆ.
Related Articles
ಸುಳ್ಯ ತಾಲೂಕಿನಲ್ಲಿ 37,099 ಗೃಹ ಬಳಕೆದಾರರು, 4,552 ವಾಣಿಜ್ಯ, 11,021 ಕೃಷಿ ಪಂಪ್‌ಸೆಟ್, 439 ಕೈಗಾರಿಕೆ, 423 ಕುಡಿಯುವ ನೀರು, 315 ದಾರಿದೀಪ, 81 ತಾತ್ಕಾಲಿಕ ಸಹಿತ ಒಟ್ಟು 53,960 ವಿದ್ಯುತ್ ಸಂಪರ್ಕಗಳಿವೆ. ಪುತ್ತೂರು ತಾಲೂಕಿನ ಮಾಡಾವಿನಲ್ಲಿ 110 ಕೆವಿ ಸಬ್ ಸ್ಟೇಷನ್ ನಿರ್ಮಾಣದ ಹಂತದಲ್ಲಿದ್ದರೆ, ಸುಳ್ಯದಲ್ಲಿ 110 ಕೆವಿ ಸಬ್ ಸ್ಟೇಷನ್ ಸರ್ವೆ ಹಂತದಲ್ಲಿ ಮೊಟಕುಗೊಂಡಿದೆ. ಸಿಬಂದಿ ನೇಮಕಕ್ಕೂ ಕ್ರಮ ಕೈಗೊಳ್ಳಬೇಕಿದೆ.
Advertisement
ಗಮನಕ್ಕೆ ತರಲಾಗಿದೆಸಿಬಂದಿ ಬೇಡಿಕೆ ಬಗ್ಗೆ ಎಂ.ಡಿ. ಅವರ ಗಮನಕ್ಕೆ ತಂದಿದ್ದೇವೆ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನೇಮಕದ ಬಗ್ಗೆ ಚರ್ಚೆ ನಡೆಸಿದ್ದೇವೆ. ಈ ಬಗ್ಗೆ ಸ್ಪಂದನೆ ಸಿಗಲಿದೆ.
– ನರಸಿಂಹ, ಕಾರ್ಯಪಾಲಕ ಎಂಜಿನಿಯರ್, ಪುತ್ತೂರು ವಿಭಾಗ — ಕಿರಣ್ ಪ್ರಸಾದ್ ಕುಂಡಡ್ಕ