Advertisement

ಸಿಬ್ಬಂದಿ ನಿಯೋಜನೆ ಸೆ. 5 ರಿಂದ ಕುಷ್ಠ ರೋಗ ಪತ್ತೆ ಅಭಿಯಾನ: ವಿನೋತ್‌ ಪ್ರಿಯಾ

02:31 PM Aug 20, 2019 | Suhan S |

ಚಿತ್ರದುರ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸೆ. 5 ರಿಂದ 23 ರವರೆಗೆ ಜಿಲ್ಲೆಯಾದ್ಯಂತ ಕುಷ್ಠರೋಗ ಪತ್ತೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ವಿನೋತ್‌ ಪ್ರಿಯಾ ಹೇಳಿದರು.

Advertisement

ಜಿಲ್ಲೆಯಲ್ಲಿ ಕುಷ್ಠರೋಗ ಪತ್ತೆ ಮಾಡುವ ವಿಶೇಷ ಅಭಿಯಾನದ ಕುರಿತು ಜಿಲ್ಲಾಧಿಕಾರಿ ಕಚೇರಿ

ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚಿತ್ರದುರ್ಗ ನಗರ ಸೇರಿದಂತೆ 3,84,020 ಮನೆಗಳಿಗೆ ತೆರಳಿ ರೋಗ ಪತ್ತೆ ಮಾಡುವ ಮಹತ್ವದ ಕಾರ್ಯಕ್ರಮ ಇದಾಗಿದೆ ಎಂದರು.

ಕಾರ್ಯಕ್ರಮ ಯಶಸ್ವಿಯಾಗಲು 1407 ತಂಡಗಳ ಅಡಿಯಲ್ಲಿ ಮೇಲ್ವಿಚಾರಕರು ಸೇರಿದಂತೆ 3096 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇದು ಸಾಂಕ್ರಾಮಿಕ ರೋಗವಾಗಿರುವುದರಿಂದ ಹಿಂದೆ ಪತ್ತೆಯಾಗಿದ್ದವರು, ಗುಣಮುಖರಾದವರು, ಚಿಕಿತ್ಸೆ ಪಡೆಯುತ್ತಿರುವವರ ವಿಳಾಸ ಮತ್ತು ವಿವರ ಆರೋಗ್ಯ ಇಲಾಖೆಯಲ್ಲಿರಬೇಕು ಎಂದು ಸೂಚಿಸಿದರು.

ಅಭಿಯಾನಕ್ಕೆ ತೆರಳುವ ಸಿಬ್ಬಂದಿಗಳು ತಪ್ಪದೇ ಎಲ್ಲಾ ಹಾಸ್ಟೆಲ್ಗಳಿಗೂ ಭೇಟಿ ನೀಡಿ ತಪಾಸಣೆ ನಡೆಸಬೇಕು. ಕಳೆದ ವರ್ಷ ಕೈಗೊಂಡ ರೋಗ ಪತ್ತೆ ಅಭಿಯಾನದಲ್ಲಿ 9962 ಶಂಕಾಸ್ಪದ ಪ್ರಕರಣಗಳನ್ನು ಗುರುತಿಸಿ ಒಟ್ಟು 18 ಹೊಸ ರೋಗಿಗಳನ್ನು ಪತ್ತೆ ಮಾಡಲಾಗಿತ್ತು ಎಂದರು. ಈ ಅಭಿಯಾನ ಪರಿಣಾಮಕಾರಿಯಾಗಲು ಸ್ಥಳೀಯವಾಗಿ ಆಶಾ ಕಾರ್ಯಕರ್ತೆಯರನ್ನು ಬಳಕೆ ಮಾಡುವುದು ಬೇಡ. ಅವರನ್ನು ಬೇರೆ ಗ್ರಾಮಗಳಿಗೆ ನಿಯೋಜಿಸಬೇಕು. ಅಗತ್ಯವಿದ್ದಲ್ಲಿ ನರ್ಸಿಂಗ್‌, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಬಳಸಿಕೊಳ್ಳುವಂತೆ ಸೂಚಿಸಿದರು.

Advertisement

ಜಿಲ್ಲೆಯಲ್ಲಿ ವೈದ್ಯರ ಸಂಘ ಹಾಗೂ ಚರ್ಮರೋಗ ತಜ್ಞರ ಸಂಘಗಳು ಸಕ್ರಿಯವಾಗಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಉಚಿತವಾಗಿ ತಪಾಸಣಾ ಶಿಬಿರ ಆಯೋಜಿಸಬೇಕು. ಸಂಶಯಾಸ್ಪದ ಪ್ರಕರಣಗಳು ಕಂಡುಬಂದಲ್ಲಿ ಆರೋಗ್ಯ ಇಲಾಖೆಗೆ ಶಿಫಾರಸು ಮಾಡಬೇಕು ಎಂದು ತಿಳಿಸಿದರು.

ನಗರದಲ್ಲಿ ಮೂರು ಆರೋಗ್ಯ ಕೇಂದ್ರಗಳಿದ್ದರೂ ನಗರದ ಜನತೆ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬರುತ್ತಿದ್ದಾರೆ. ಇದರಿಂದ ವೈದ್ಯರು ವಾರ್ಡ್‌ಗಳ ಭೇಟಿ, ತುರ್ತು ಪ್ರಕರಣಗಳಿಗೆ ಆದ್ಯತೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಜಯಪ್ರಕಾಶ್‌ ಹೇಳಿದರು.

ಇದರಿಂದ ಅಸಮಾಧಾನಗೊಂಡ ಜಿಲ್ಲಾಧಿಕಾರಿಗಳು, ನಗರ ಆರೋಗ್ಯ ಕೇಂದ್ರಕ್ಕೆ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿ ನೇಮಿಸಲಾಗಿದೆ. ಸರಿಯಾಗಿ ಕೆಲಸ ಮಾಡುತ್ತಿದ್ದಾರಾ ಎಂದು ಪರಿಶೀಲಿಸುವಂತೆ ಡಿಎಚ್ಒ ಡಾ| ಪಾಲಾಕ್ಷ ಅವರಿಗೆ ಸೂಚನೆ ನೀಡಿದರು.

ಕುಷ್ಠರೋಗ ಅಭಿಯಾನದ ತಾಂತ್ರಿಕ ಅಧಿಕಾರಿ ಡಾ| ರಾಜೇಶ್‌ ಕಾಕಡೆ ಮಾತನಾಡಿ, ರೋಗ ಪತ್ತೆ ಮಾಡುವ ಅಭಿಯಾನಕ್ಕೆ ನೀಡಿದ ಆದ್ಯತೆಯನ್ನು ಹರಡುವಿಕೆ ತಡೆಗೂ ನೀಡಬೇಕಿದೆ ಎಂದರು.

ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ| ಕಂಬಾಳಿಮs್ ಮಾತನಾಡಿದರು. ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ| ಯೋಗೀಂದ್ರ ಹಾಗೂ ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next