Advertisement

ಹುಣಸೂರು : ಕೋವಿಡ್ ಕೇರ್ ಸೆಂಟರ್ ಗೆ ಎಸ್ ಟಿ ಸೋಮಶೇಖರ್ ಭೇಟಿ

04:20 PM Jun 05, 2021 | Team Udayavani |

ಹುಣಸೂರು : ಬಿಳಿಕೆರೆ ಹೋಬಳಿಯ ಸಬ್ಬನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಕೋವಿಡ್-19 ರ ಕೋವಿಡ್ ಕೇರ್ ಸೆಂಟರ್ ಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಎಸ್ ಟಿ ಸೋಮಶೇಖರ್ ಶಾಸಕರಾದ ಎಚ್ ಪಿ ಮಂಜುನಾಥ್ ಹಾಗೂ ಸಂಸದರಾದ ಪ್ರತಾಪ್ ಸಿಂಹ ರವರು ಭೇಟಿ ನೀಡಿ ಕರೋನಾ ಕೇರ್ ಸೆಂಟರ್ ನಲ್ಲಿರುವ ಕರೋನಾ ಸೋಂಕಿತರ ಆರೋಗ್ಯ ವಿಚಾರಿಸಿದರು.

Advertisement

ಇದೇ ಸಂದರ್ಭದಲ್ಲಿ ಬಿಳಿಕೆರೆ ಹೋಬಳಿ ಹಳ್ಳಿ ಹಳೇಬೀಡು ಗ್ರಾಮದ ಮೈಸೂರಿನ ಕುವೆಂಪುನಗರ ವಾಸಿ ಲಾಯರ್ ಶಿವಪ್ಪ ನವರ ಪುತ್ರ ಎಚ್ಎಸ್ ಅರುಣ್ ಕುಮಾರ್ ಅವರು ಶಾಸಕ ಎಚ್ ಪಿ ಮಂಜುನಾಥ್ ರವರ ಕೋರಿಕೆ ಮೇರೆಗೆ ಹುಣಸೂರು ತಾಲೂಕಿನ ಗೆರಸನಹಳ್ಳಿ, ಬಿಳಿಕೆರೆ, ಕಟ್ಟೆಮಳಲವಾಡಿ, ಹನಗೋಡು ಸಾರ್ವಜನಿಕ ಆಸ್ಪತ್ರೆಗಳಿಗೆ ತಲಾ ಒಂದರಂತೆ ಒಟ್ಟು 4 ಆಕ್ಸಿಜನ್ ಕಾನ್ಸನ್ ಟ್ರೇಷನ್ (ಆಮ್ಲಜನಕ ಪರಿವರ್ತಿತ ಯಂತ್ರ)ಗಳನ್ನು ಸಚಿವರು ಹಾಗೂ ಶಾಸಕರ ಸಮ್ಮುಖದಲ್ಲಿ ಹುಣಸೂರು ತಾಲೂಕು ಆಡಳಿತಕ್ಕೆ ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ತಹಸಿಲ್ದಾರ್ ಬಸವರಾಜ್, ಕಾರ್ಯನಿರ್ವಹಣಾ ಅಧಿಕಾರಿ ಗಿರೀಶ್, ಡಿವೈಎಸ್ಪಿ ರವಿ ಪ್ರಸಾದ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಕೀರ್ತಿಕುಮಾರ್ , ಹಳೆಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ಸೇರಿದಂತೆ ಹುಣಸೂರು ಸ್ನೇಹಜೀವಿ ಬಳಗದ ಸದಸ್ಯರು ಹಾಜರಿದ್ದರು.

ಕಾರ್ಯಕರ್ತರ ದಂಡು:

Advertisement

ಗ್ರಾಮೀಣ ಭಾಗದಲ್ಲಿ ಕರೋನ ಮಹಾಮಾರಿ ದಿನದಿಂದ ದಿನಕ್ಕೆ ಉಲ್ಬಣ ವಾಗುತ್ತಿದ್ದರು ಇದರ ಪರಿವೆ ಇಲ್ಲದೆ ಮೈಸೂರಿನಿಂದ ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ರವರ ಜೊತೆ 150ಕ್ಕೂ ಹೆಚ್ಚು ಕಾರ್ಯಕರ್ತರ ದಂಡು ಆಗಮಿಸಿತ್ತು. ಈ ಜನಸಮೂಹದಿಂದ ಮೈಸೂರಿನಿಂದ ಗ್ರಾಮಾಂತರ ಭಾಗಕ್ಕೆ ಕರೋನ ರೋಗವನ್ನು ಇವರೇ ಕರೆತಂದಿದ್ದ ರೋ ಅಥವಾ ಗ್ರಾಮೀಣ ಭಾಗದಿಂದ ಮೈಸೂರಿಗೆ ಇವರೇ ಹೊತ್ತೊಯ್ದುತ್ತಿರುವ ರೋ ಒಂದು ತಿಳಿಯದಾಗಿದೆ.

ಇದಲ್ಲದೆ ಕಲ್ಲಹಳ್ಳಿಯಲ್ಲಿ 70 ಕ್ಕೂ ಹೆಚ್ಚು ಕರೋನಾ ಸೋಂಕಿತರಿದ್ದು, ಈ ಗ್ರಾಮಕ್ಕೂ ಸಚಿವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಚಿವರ ಹಿಂದೆ ಮೈಸೂರಿನ ಕಾರ್ಯಕರ್ತರ ದಂಡು ಅತಿ ಹೆಚ್ಚು ಇದ್ದುದರಿಂದ
ಶಾಸಕ H.P.ಮಂಜುನಾಥ್ ರವರು ಕಲ್ಲಹಳ್ಳಿ. ಕಾರ್ಯಕ್ರಮಕ್ಕೆ ಗೈರುಹಾಜರಾದರು.

Advertisement

Udayavani is now on Telegram. Click here to join our channel and stay updated with the latest news.

Next