Advertisement
ಯಾವುದೇ ಕಾರಣಕ್ಕೂ ನಾಗರಿಕರಿಗೆ ಸಮಸ್ಯೆಯಾಗಕೂಡದು. ಅವರು ಸಹಾಯಕ್ಕಾಗಿ ಕರೆ ಮಾಡಿದಾಗ ಸಮಾಧಾನವಾಗಿ ಸ್ಪಂದಿಸಿ, ಬೆಡ್ ವ್ಯವಸ್ಥೆ ಬೇಕಿರುವವರಿಗೆ ತಕ್ಷಣ ಅವಕಾಶ ಮಾಡಿಕೊಡಿ ಎಂದು ಸಚಿವದ್ವಯರು ವಾರ್ ರೂಂ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸೂಚಿಸಿದರು.
Related Articles
ರಾಜರಾಜೇಶ್ವರಿ ನಗರ ವಲಯದ ವಲಯ ಆಯುಕ್ತರು ರೆಡ್ಡಿ ಶಂಕರ ಬಾಬು, ದಕ್ಷಿಣ ಉಪವಿಭಾಗಾಧಿಕಾರಿ ಶಿವಣ್ಣ ಸೇರಿ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವದ್ವಯರಾದ ಎಸ್.ಟಿ.ಸೋಮಶೇಖರ್ ಹಾಗೂ ಆರ್.ಅಶೋಕ್ ಅವರು, ಕೊರೋನಾ ಸೋಂಕು ದೃಢಪಟ್ಟು ಹೋಂ ಐಸೋಲೇಶನ್ ನಲ್ಲಿರುವ ರಾಜರಾಜೇಶ್ವರಿ ವಲಯ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ವ್ಯಾಪ್ತಿಯ ಎಲ್ಲರ ಮನೆಗಳಿಗೂ ಮೆಡಿಕಲ್ ಕಿಟ್ ಅನ್ನು ಕೊಡಬೇಕು. ಕೂಡಲೇ ಮೆಡಿಕಲ್ ಕಿಟ್ ತಯಾರಿಸಿ ತುರ್ತಾಗಿ ಕೊಡಲು ಸೂಚಿಸಿದರು.
Advertisement
ನೂತನ ಕೋವಿಡ್ ಕೇರ್ ಸೆಂಟರ್ ಗೆ ಭೇಟಿಚೆನ್ನೇನಹಳ್ಳಿಯಲ್ಲಿ ನೂತನ ಪ್ರಾರಂಭವಾಗಿರುವ ಜನಸೇವಾ ಕೇಂದ್ರದ ಕೋವಿಡ್ ಕೇರ್ ಸೆಂಟರ್ ಗೆ ಕಂದಾಯ ಸಚಿವರಾದ ಅಶೋಕ್ ಹಾಗೂ ಸಹಕಾರ ಸಚಿವರಾದ ಸೋಮಶೇಖರ್ ಅವರು ಭೇಟಿ ನೀಡಿ, ವ್ಯವಸ್ಥೆಯನ್ನು ಪರಿಶೀಲಿಸಿದರು. ಅಲ್ಲದೆ, ಸರ್ಕಾರದಿಂದ ಬೇಕಾದ ಎಲ್ಲ ಸೌಲಭ್ಯ ಹಾಗೂ ಸಹಕಾರವನ್ನು ಒದಗಿಸುವ ಭರವಸೆಯನ್ನೂ ಈ ಸಂದರ್ಭದಲ್ಲಿ ನೀಡಲಾಯಿತು. ಈ ವೇಳೆ ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಇದ್ದರು. ಚಿತಾಗಾರಕ್ಕೆ ಭೇಟಿ
ತಾವರೇಕೆರೆ ಚಿತಾಗಾರದಲ್ಲಿ ಶವಗಳ ಸಂಖ್ಯೆ ಹೆಚ್ಚಳಗೊಂಡು ಒತ್ತಡ ಆಗುತ್ತಿರವ ಕಾರಣ, ಬೆಂಗಳೂರು ಉತ್ತರ ತಾಲೂಕಿನ ಗಿಡೇನಹಳ್ಳಿ ಚಿತಾಗಾರಕ್ಕೆ ಸಚಿವರಾದ ಸೋಮಶೇಖರ್ ಹಾಗೂ ಅಶೋಕ್ ಅವರು ಭೇಟಿ ನೀಡಿ, ಹೆಚ್ಚಿನ ಜಾಗ, ಸೌಲಭ್ಯಗಳನ್ನು ಒದಗಿಸಲು ಸ್ಥಳ ವೀಕ್ಷಣೆ ಮಾಡಿದರು. ತಲಾ 1 ಲಕ್ಷ ರೂ. ವೈಯುಕ್ತಿಕ ಸಹಾಯಧನ ವಿತರಣೆ ಕೋವಿಡ್ ನಿಂದ ಮೃತಪಟ್ಟ ಯಶವಂತಪುರ ಮತಕ್ಷೇತ್ರದ ನಾಗರಿಕರಿಗೆ ಸಹಾಯಧನ ನೀಡುವ ಪ್ರಕ್ರಿಯೆಗೆ ಶನಿವಾರವಷ್ಟೇ ಚಾಲನೆ ನೀಡಿರುವ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು, ಭಾನುವಾರ ಕೆಂಗೇರಿ ಹೋಬಳಿ ರಾಮೋಹಳ್ಳಿ ಗ್ರಾಮ ಪಂಚಾಯಿತಿ ಮತ್ತು ತಾವರೆಕೆರೆ ಹೋಬಳಿ ಚುಂಚನಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್‌ನಿಂದ ಮೃತಪಟ್ಟ ಕುಟುಂಬದವರಿಗೆ ತಲಾ 1 ಲಕ್ಷ ರೂಪಾಯಿ ವೈಯಕ್ತಿಕ ಸಹಯಾಧನ ವಿತರಣೆ ಮಾಡಿದರು.