Advertisement
ಪ್ರಾರ್ಥನೆಗೆ ಅವಕಾಶಬಸಿಲಿಕದ ಬಲ ಬದಿ ಪವಾಡ ಮೂರ್ತಿ ಪ್ರತಿಷ್ಠಾಪಿಸಿದ ಪಕ್ಕದಲ್ಲಿ ಕಥೋಲಿಕ್ ಕ್ರೆçಸ್ತರಿಗೆ ಪಾಪನಿವೇದನೆಗೆ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಒಳಗೆ ಪ್ರಾರ್ಥನೆಗಾಗಿ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಬಸಿಲಿಕಾದ ವಠಾರದ 5 ಕಡೆಗಳಲ್ಲಿ ಭಕ್ತಾದಿಗಳಿಗೆ ಕುಡಿಯಲು ಶುದ್ಧ ನೀರು, ತಂಪು ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಅತ್ತೂರು ವಠಾರದಲ್ಲಿ ಸುಮಾರು 40 ಶೌಚಾಲಯ ನಿರ್ಮಿಸಲಾಗಿದೆ. ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯವಿದೆ. ಪಾರ್ಕಿಂಗ್
ದೂಪದಕಟ್ಟೆ ದ್ವಾರ ಪ್ರವೇಶಿಸುವಲ್ಲಿ ಎಡಬದಿಗೆ ವಿಸ್ತಾರವಾದ ಜಾಗವನ್ನು ವಾಹನ ಪಾರ್ಕಿಂಗ್‌ಗಾಗಿ ಗುರುತಿಸಲಾಗಿದೆ. ಕೊಡಂಗೆ, ಸಂತ ಲಾರೆನ್ಸ್ ಹೈಸ್ಕೊಲ್ ಆಟದ ಮೈದಾನ, ಚೇತನ ಹಳ್ಳಿ-ಗುಂಡ್ಯಡ್ಕ ರಸ್ತೆಯ ಎರಡೂ ಬದಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
Related Articles
ನಿಟ್ಟೆ ಗ್ರಾಮ ಪಂಚಾಯತ್ 10 ಅಡಿ ಅಗಲದ ಸುಮಾರು 493 ಸ್ಟಾಲ್‌ಗಳನ್ನು ನಿರ್ಮಿಸಿ ಏಲಂ ಮಾಡಿದೆ. 25 ಸ್ಟಾಲ್‌ಗಳನ್ನು ಚರ್ಚ್ ವತಿಯಿಂದ ನೀಡಲಾಗಿದೆ. ಕಲ್ಲಂಗಡಿ, ಬೇಕರಿ, ಬಟ್ಟೆ ಅಂಗಡಿ, ಆಟಿಕೆ ಅಂಗಡಿಗಳು, ಐಸ್‌ಕ್ರೀಂ, ಜ್ಯೂಸ್ ಸ್ಟಾಲ್ ರಸ್ತೆ ಬದಿಯುದ್ದಕ್ಕೂ ಕಂಡುಬರುತ್ತಿದೆ. ಮನೋರಂಜನೆ ಉದ್ಯಾನವನ್ನು ಚರ್ಚ್ ಎದುರಿನ ಶಾಲಾ ವರಾಠದಲ್ಲಿ ಸ್ಥಾಪಿಸಲಾಗಿದೆ.
Advertisement
ಭದ್ರತೆಭಕ್ತರ ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಚರ್ಚ್ ಪ್ರವೇಶ ದ್ವಾರದ ಬಳಿ ಪೊಲೀಸ್ ಚೌಕಿ ನಿರ್ಮಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ, ಸಿಪಿಐ, 8 ಪಿಎಸ್‌ಐ, 200 ಸಿವಿಲ್ ಪೊಲೀಸ್ ಹಾಗೂ 100 ಡಿಎಆರ್ ತುಕಡಿ, 50 ಮಂದಿ ಗೃಹರಕ್ಷಕ ಸಿಬಂದಿ ಅಲ್ಲದೇ 50 ಸ್ವಯಂಸೇವಕರು ಕರ್ತವ್ಯ ನಿರ್ವಹಿಸಲಿದ್ದಾರೆ. ಇವರೊಂದಿಗೆ ಬಾಂಬ್ ನಿಷಿ¢ಯ ದಳ, ಉದ್ಘೋಷಣ ಕೇಂದ್ರ ತೆರೆಯಲಾಗಿದೆ. ಅತ್ತೂರು ಬಸಿಲಿಕಾದ ಒಳಗಡೆ ಹಾಗೂ ವಠಾರದಲ್ಲಿ ಒಟ್ಟು 64 ಸಿಸಿ ಕೆಮರಾ ಅಳವಡಿಸಲಾಗಿದೆ. ಕಾರ್ಯಕ್ರಮ
ಜ. 26ರಂದು 7.10ಕ್ಕೆ ಪುಷ್ಕರಣಿಯಲ್ಲಿ ಸಂತ ಲಾರೆನ್ಸರ ಪವಾಡ ಮೂರ್ತಿ ಅನಾವರಣಗೊಳ್ಳಲಿದೆ. 7.20ಕ್ಕೆ ಮಾನಸ್ತಂಭದಲ್ಲಿ ಧ್ವಜಾರೋಹಣ ನಡೆಯಲಿದೆ. ಅಪರಾಹ್ನ 2.30ಕ್ಕೆ ಹಾಗೂ 4.30ಕ್ಕೆ ಮಕ್ಕಳಿಗಾಗಿ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ನೆರವೇರಲಿದೆ. ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷರಾದ ಡಾ| ಅಲೋಶಿಯಸ್ ಪಾವ್É ಡಿ’ಸೋಜಾ ಬಲಿಪೂಜೆ ನೆರವೇರಿಸುವರು. ರಾತ್ರಿ 10.30ಕ್ಕೆ ಕ್ರಿಸ್ತ ಕಾರುಣ್ಯ ಯಕ್ಷಗಾನ ಬೊಂಬೆಯಾಟ ಪ್ರದರ್ಶನಗೊಳ್ಳಲಿದೆ.