Advertisement

ಎಸ್‌ಟಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ

03:11 PM Mar 27, 2017 | Team Udayavani |

ಜೇವರ್ಗಿ: ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಸಮಾಜದ ಬಾಂಧವರು ಸಂಘಟಿತರಾಗುವ ಮೂಲಕ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು. ಸಮಾಜವನ್ನು ಎಸ್‌ಟಿಗೆ ಸೇರಿಸಬೇಕು ಎನ್ನುವ ಬಹುದಿನಗಳ ಬೇಡಿಕೆಗೆ ಶೀಘ್ರದಲ್ಲಿ ಈಡೇರಲಿದೆ ಎಂದು ಲೋಕಸಭೆ ಕಾಂಗ್ರೆಸ್‌ ಪಕ್ಷದ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು. 

Advertisement

ಪಟ್ಟಣದ ಹಳೆ ತಹಶೀಲ್ದಾರ ಕಚೇರಿ ಆವರಣದಲ್ಲಿ ರವಿವಾರ ಜಿಲ್ಲಾ ಕೋಲಿ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ವಿಭಾಗ ಮಟ್ಟದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೋಲಿ ಸಮಾಜದ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಿ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಲು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಸಮಾಜದ ಮುಖಂಡರು ಆಂತರಿಕ ಭಿನ್ನಾಭಿಪ್ರಾಯ ಸಮಾಜದ ಹಿತದೃಷ್ಟಿಯಿಂದ ಬದಿಗಿಡಬೇಕು. ಸಮಾಜದ ಸಭೆ-ಸಮಾರಂಭಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು.

ಈ ಭಾಗದ ಜನರ ಸಮಸ್ಯೆಗಳಿಗೆ ಹಾಗೂ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಈ ಭಾಗದ ಅಭಿವೃದ್ಧಿಗೆ ತಾವು ಕೂಡ ಕಂಕಣಬದ್ಧರಾಗಿದ್ದೇವೆ. ಈ ಭಾಗದ ಎಲ್ಲ ಶಾಸಕರನ್ನು ಕರೆದುಕೊಂಡು ಹೋಗಿ ಎಚ್‌ಕೆಆರ್‌ ಡಿಬಿಗೆ ಸಾವಿರ ಕೋಟಿ ಅನುದಾನವನ್ನು 1500 ಕೋಟಿ ರೂ. ಗೆ ಹೆಚ್ಚಿಸಲಾಗಿದೆ.

ಇದರಿಂದ ಈ ಭಾಗದ ಅಭಿವೃದ್ಧಿಗೆ ಹಣದ ಕೊರತೆ ನೀಗಿಸಿದಂತಾಗುತ್ತದೆ ಎಂದರು. ಬೀದರ ಕೌಟಾ ಮಠದ ಬೇಲ್ದಾಳ ಶರಣರು ಹಾಗೂ ತೊನಸನಹಳ್ಳಿಯ ಮಲ್ಲಣಪ್ಪ ಮುತ್ಯಾ ಸಾನ್ನಿಧ್ಯ ಮತ್ತು ಮಾಜಿ ಸಚಿವ ಬಾಬುರಾವ ಚಿಂಚನಸೂರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ| ಅಜಯಸಿಂಗ್‌ ಅಂಬಿಗರ ಚೌಡಯ್ಯನವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು.

Advertisement

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅಲ್ಲಮಪ್ರಭು ಪಾಟೀಲ, ಜೆಡಿಎಸ್‌ ಮುಖಂಡ ಕೇದಾರಲಿಂಗಯ್ಯ ಹಿರೇಮಠ, ಜಿಪಂ ಸದಸ್ಯರಾದ ಶಿವರಾಜ ಪಾಟೀಲ ರದ್ದೇವಾಡಗಿ, ದಂಡಪ್ಪಸಾಹು ಕುಳಗೇರಾ, ಶಾಂತಪ್ಪ ಕೂಡಲಗಿ, ಅವ್ವಣ್ಣ ಮ್ಯಾಕೇರಿ, ಭೀಮಣ್ಣ ಸಾಲಿ, ಕೆ. ಶಾಂತಪ್ಪ, ಚಂದ್ರಶೇಖರ ಹರನಾಳ, ಶಿವಶರಣಪ್ಪ ಕೋಬಾಳ, ಬಸವರಾಜ ಹರವಾಳ, ಬಸವರಾಜ ಬೂದಿಹಾಳ, ಶಿವಶರಣಪ್ಪ ಹೊನ್ನಾಳ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next