Advertisement

ಅಸ್ತಿತ್ವ ಕಳೆದುಕೊಳ್ಳುತ್ತಿರುವ ಎಸ್‌ಟಿ 596 ಮಿಡಿ ಬಸ್‌ಗಳು

02:19 PM Aug 21, 2021 | Team Udayavani |

ಮುಂಬಯಿ: ಹೆಚ್ಚುತ್ತಿರುವ ಅಕ್ರಮ ಪ್ರಯಾಣವನ್ನು ತಡೆಯಲು ಎಸ್‌ಟಿ ಕಾರ್ಪೊರೇಶನ್‌ 10 ವರ್ಷಗಳ ಹಿಂದೆ ಪರಿಚಯಿಸಿದ ಮಿಡಿ ಬಸ್‌ ಗಳು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿಗೆ ಬಂದಿವೆ.

Advertisement

ಯಾವುದೇ ಪ್ರತಿಕ್ರಿಯೆ ದೊರೆಯದ ಕಾರಣ ಎಸ್‌ಟಿ ಕಾರ್ಪೊರೇ ಶನ್‌ 596 ಮಿಡಿ ಬಸ್‌ಗಳನ್ನು ಹಂತಗಳಲ್ಲಿ ತೆಗೆದುಹಾಕಲು ಪ್ರಾರಂಭಿಸಿತು. ಪ್ರಸ್ತುತ 150 ಬಸ್‌ಗಳಿದ್ದು, ಅವುಗಳಲ್ಲಿ 110 ಬಸ್‌ಗಳೂ ರದ್ದುಗೊಳ್ಳಲಿವೆ. ಉಳಿದ ಬಸ್‌ಗಳು ಕೆಲವು ತಿಂಗಳ ಕಾಲ ಪ್ರಯಾಣಿಕರ ಸೇವೆ ಯಲ್ಲಿರುತ್ತವೆ ಎಂದು ಆಡಳಿತ ಮೂಲಗಳು ತಿಳಿಸಿವೆ.

ಗ್ರಾಮೀಣ ಪ್ರದೇಶಗಳಲ್ಲಿ ಎಸ್‌ಟಿ ಡಿಪೋಗಳಲ್ಲಿನ ಪ್ರಯಾಣಿಕರನ್ನು ಅಕ್ರಮವಾಗಿ ಜೀಪ್‌ಗ್ಳು, ರಿಕ್ಷಾ ಮತ್ತು ಇತರ ವಾಹನಗಳ ಮೂಲಕ ಸಾಗಿಸಲಾಗುತ್ತಿತ್ತು. ಇದನ್ನು ತಡೆಯಲು ಎಸ್‌ಟಿ ಕಾರ್ಪೊರೇಶನ್‌ ಪೊಲೀಸರ ಮೂಲಕ ಕ್ರಮ ಕೈಗೊಂಡಿತ್ತು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಆದ್ದರಿಂದ 2010ರಿಂದ ರಾಜ್ಯದಅನೇಕ ಜಿಲ್ಲೆಗಳ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 24 ಆಸನಗಳ ಮಿಡಿ ಬಸ್‌ಗಳನ್ನು ಓಡಿಸಲು ನಿಗಮ ನಿರ್ಧರಿಸಿತ್ತು.

ಇದನ್ನೂ ಓದಿ:ಉತ್ತರ ಕನ್ನಡ ಜಿಲ್ಲೆಗೆ ‘ಏಮ್ಸ್’ : ಪ್ರಧಾನಿ ಮೋದಿಗೆ ಡಾ|ಕಾಮತ್‌ ಟ್ವೀಟ್‌

ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ
2010 ಮತ್ತು 2012ರ ನಡುವೆ ಮಿಡಿ ಬಸ್‌ಗಳ ಸಂಖ್ಯೆಯನ್ನು 596ಕ್ಕೆ ಹೆಚ್ಚಿಸಲಾಯಿತು. ಈ ಬಸ್‌ಗಳು ನಾಸಿಕ್‌, ಔರಂಗಾಬಾದ್‌, ನಾಂದೇಡ್‌, ರತ್ನಗಿರಿ, ಮೀರಜ್‌, ಮಾಥೆರಾನ್‌ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಓಡಲಾರಂಭಿಸಿದವು. ಆರಂಭದಲ್ಲಿ ಕಡಿಮೆ ದೂರ ಬಸ್‌ಗಳನ್ನು ಓಡಿಸುವಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಗ್ರಾಮೀಣ ರಸ್ತೆಗಳಲ್ಲಿ ಓಡುವ ಬಸ್‌ನಲ್ಲಿ ತಾಂತ್ರಿಕ ದೋಷಗಳು, ರಸ್ತೆ ಮಧ್ಯ ನಿಲುಗಡೆಗಳು ಮತ್ತು ದುಬಾರಿ ಟಿಕೆಟ್‌ನಿಂದಾಗಿ ಅಕ್ರಮವಾಗಿ ಪ್ರಯಾಣಿಕರನ್ನು ಸಾಗಿಸುವವರು ಪ್ರಯೋಜನ ಪಡೆದು ಕಡಿಮೆ ದರದಲ್ಲಿ ಪ್ರಯಾಣಿಕರನ್ನು ಸಾಗಿಸಲಾರಂಭಿಸಿದರು. ಇದರ ಪರಿಣಾಮ ಮಿಡಿ ಬಸ್‌ಗಳಲ್ಲಿ ಕ್ರಮೇಣ ಪ್ರ ಯಾಣಿಕರ ಕೊರತೆ ಉಂಟಾಯಿತು.

Advertisement

ವಿವಿಧ ಹಂತಗಳಲ್ಲಿ ಗುಜರಿಗೆ
ಆದಾಯ ಕಡಿಮೆ ಆಗಿ ಬಸ್‌ಗಳ‌ ನಿರ್ವಹಣೆ ವೆಚ್ಚ ಅಧಿಕವಾಗಿತ್ತು. ಆದ್ದರಿಂದ ಅವಧಿ ಮೀರಿದ ಮಿಡಿ ಬಸ್‌ ಅನ್ನು ಹಂತಗಳಲ್ಲಿ ಸ್ಟಾಪ್ ಮಾಡಲು ನಿರ್ಧರಿಸಲಾಯಿತು. ಒಟ್ಟು 596ರಲ್ಲಿ ಪ್ರಸ್ತುತ 150 ಬಸ್‌ಗಳಿವೆ. ಈ ಪೈಕಿ ಸುಮಾರು 110 ಬಸ್‌ಗಳನ್ನು ರದ್ದುಗೊಳಿಸಲಾಗುವುದು. 40 ಬಸ್‌ಗಳನ್ನು ಮಾತ್ರ ಇರಿಸಲಾಗುತ್ತದೆ. ಇವುಗಳೂ ಅಲ್ಪಾವಧಿಯದ್ದಾಗಿದ್ದು, ಮಿಡಿ ಬಸ್‌ ಸೇವೆ ಮುಗಿದ ಬಳಿಕ ಸೇವೆಯನ್ನೇ ಮುಚ್ಚಲಾಗುವುದು ಎಂದು ಎಸ್‌ಟಿ ಮೂಲಗಳು ತಿಳಿಸಿವೆ.

ಭಾರೀ ನಷ್ಟ
ಮಿಡಿ ಬಸ್‌ ಟಿಕೆಟ್‌ ಕೈಗೆಟಕುವಂತಿಲ್ಲ. ಈ ಬಸ್‌ಗಳ ಸ್ಪೇರ್‌ಗಳೂ ಲಭ್ಯವಿಲ್ಲ. ಆದ್ದರಿಂದ ಕಳೆದ ಕೆಲವು ವರ್ಷಗಳಲ್ಲಿ ಉಂಟಾಗಲಾರಂಭಿಸಿದ್ದು, ಅವುಗಳನ್ನು ರದ್ದುಮಾಡಲು ನಿರ್ಧರಿಸಲಾಯಿತು.
-ಶೇಖರ್‌ ಚನ್ನೆ
ವ್ಯವಸ್ಥಾಪಕ ನಿರ್ದೇಶಕರು, ಎಸ್‌ಟಿ ಕಾರ್ಪೊರೇಶನ್‌

Advertisement

Udayavani is now on Telegram. Click here to join our channel and stay updated with the latest news.

Next